ಬೆಂಗಳೂರು : ಕಳಪೆ ಮಾಂಸ ಹಾಗೂ ನಾಯಿ ಮಾಂಸವನ್ನು ಬೆಂಗಳೂರಿಗರಿಗೆ ರಾಜಸ್ಥಾನದಿಂದ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಪೊಲೀಸರು ಆರೋಪಿ ಅಬ್ದುಲ್ ರಝಕ್ ನ್ನು ಬಂದಿಸದೆ ಪ್ರಕರಣವನ್ನು ಬಯಲಿಗೆಳೆದ ಪುನೀತ್ ಕೆರೆಹಳ್ಳಿ ಯನ್ನು ಬಂಧಿಸಿ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ ACP ಚಂದನ್ ವಿರುದ್ಧ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದು ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಂಧನಕ್ಕೆ ಕಾರಣವಾದ ACP ಚಂದನ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಮಧ್ಯೆ ಜಟಾಪಟಿ ಜೋರಾಗಿದೆ.
ACP ಚಂದನ್ ವಿರುದ್ಧ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ ಆರೋಪ ಮಾಡಿರುವ ಪುನೀತ್ ಕೆರೆಹಳ್ಳಿ ಹಾಗೂ ಪ್ರತಾಪ್ ಸಿಂಹ ಇಂದು ಬಸವೇಶ್ವರ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು.ACP ವಿರುದ್ಧ ಕಮಿಷನರ್‌ಗೂ ದೂರು ನೀಡಿದ್ದ ಪ್ರತಿಭಟನಾಕಾರರು ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.ACP ಚಂದನ್ ವಿರುದ್ಧ ಆರೋಪ ಮಾಡಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು, ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸ್ ಠಾಣೆ ಮುಂದೆ ಅಕ್ರಮವಾಗಿ ಗುಂಪುಗೂಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. A1- ಪುನೀತ್ ಕೆರೆಹಳ್ಳಿ, A2- ಪ್ರತಾಪ್ ಸಿಂಹ ಸೇರಿದಂತೆ ಕೇಸ್ ದಾಖಲಾಗಿದೆ.ಕಮಿಷನರ್‌ಗೆ ದೂರು ನೀಡಿದ ಬಳಿಕ ACP ಚಂದನ್ ವರ್ಸಸ್ ಪ್ರತಾಪ್ ಸಿಂಹ ನಡುವಿನ ಈ ಸಂಘರ್ಷಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಹಾಗು ಪುನೀತ್ ಕೆರೆಹಳ್ಳಿ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.