Saturday, March 14, 2026
Flats for sale
Homeರಾಜ್ಯಬೆಂಗಳೂರು ; ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಮಾರಾಕಾಸ್ತ್ರದಿಂದ ಚುಚ್ಚಿಕೊಂಡು ಜೀವ ಬಿಟ್ಟ ಪಾಗಲ್ ಪ್ರೇಮಿ.

ಬೆಂಗಳೂರು ; ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಮಾರಾಕಾಸ್ತ್ರದಿಂದ ಚುಚ್ಚಿಕೊಂಡು ಜೀವ ಬಿಟ್ಟ ಪಾಗಲ್ ಪ್ರೇಮಿ.

ಬೆಂಗಳೂರು ; ಪ್ರೀತಿ ಮಾಡಬಾರದು ಮಾಡಿದರೆ ಜಾಗಕ್ಕೆ ಹೆದರಬಾರದು ಎಂಬ ಹಾಡು ನಿಜ .ಆದರೆ ಎಲ್ಲ ಪ್ರೇಮಿಗಳು ಪ್ರೀತಿಸಿ ಒಂದಾಗೋದು ಕಷ್ಟದ ವಿಷಯ. ಪ್ರಿಯತಮೆ ದೂರ ಆಗಿದ್ದಕ್ಕೆ ನೊಂದ ಪ್ರಿಯಕರ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ನಂದಿನಿ ಲೇಔಟ್ ನಲ್ಲಿ ಘಟನೆ ನಡೆದಿದೆ.

ಮೃತ ದುರ್ದೈವಿದಾವಣಗೆರೆ ಮೂಲದ ಚೇತನ್ (21) ಎಂದು ತಿಳಿದಿದೆ. ಎರಡು ವರ್ಷದಿಂದ ಚೇತನ್​ ಯುವತಿಯನ್ನು ಪ್ರೀತಿಸುತ್ತಿದ್ದ,ಇಬ್ಬರು ಕಾಲೇಜಿನಲ್ಲಿ ಓದುವ ವೇಳೆ ಪರಿಚಯವಾಗಿ ಲವ್ ಆಗಿತ್ತು. ಈ ವಿಷಯ ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು. ಈ ಹಿನ್ನಲೆ ಹುಡುಗಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ ಎಂದು ಹುಡುಗಿ ಹೇಳಿದ್ದಾಳೆ.ನೀನು ಬೇರೆ ಹುಡುಗಿ ಮದುವೆಯಾಗುವಂತೆ ಪ್ರಿಯತಮೆ ಜನನಿ ಹೇಳಿದ್ದಾಳೆ. ತಾನು ಇಷ್ಟಪಟ್ಟ ಹುಡುಗಿ ದೂರವಾಗಿದಕ್ಕೆ ಮನನೊಂದಿದ್ದ ಚೇತನ್, ನಿನ್ನೆ(ಮಾ.07) ರಾತ್ರಿ 11 ಗಂಟೆಗೆ ಹುಡುಗಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ಜನನಿ ಸಿಗದಿದ್ರೆ, ಸಾಯುವುದಾಗಿ ಹೇಳಿದ್ದಾನೆ. ಮನನೊಂದಿದ್ದ ಚೇತನ್ ಯುವತಿ ಮನೆ ಬಳಿ ಹೋಗಿ ಗಲಾಟೆ ಮಾಡಿಕೊಂಡಿದ್ದಾನೆ. ಈ ವೇಳೆ ನೀನು ನನ್ನಿಂದ ದೂರ ಆದರೆ ಸಾಯುವುದಾಗಿ ಹೇಳಿ ಕತ್ತರಿಯಿಂದ ಹೊಟ್ಟೆಗೆ ತಿವಿದುಕೊಂಡಿದ್ದಾನೆ.ಬಳಿಕ ಜನನಿ ಕಡೆಯವರು ಚೇತನ್ ತಂದೆ-ತಾಯಿಗೆ ವಿಷಯ ತಿಳಿಸಿದ್ದಾರೆ.ಚೇತನ್ ಆಟೋದಲ್ಲಿ ಬಿದ್ದಿರುವುದನ್ನು ಗಮನಿಸಿ ನಾಗರಬಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಚೇತನ ಸಾವನ್ನಪ್ಪಿದ್ದಾನೆ. 

RELATED ARTICLES

LEAVE A REPLY

Please enter your comment!
Please enter your name here

Most Popular