ಬೆಂಗಳೂರು : ಇತ್ತಿಚ್ಚಿನ ದಿನಗಳಲ್ಲಿ ಅನೈತಿಕ ಸಂಬಂಧದಿಂದ ಅದೆಷ್ಟೋ ಕುಟುಂಬಗಳು ದ್ವೇಷಕ್ಕೆ ಬಲಿಯಾದ ಘಟನೆಗಳು ನಡೆಯುತ್ತಲೇ ಇದೆ .ಇದೀಗ ಶೀಲ ಶಂಕಿಸಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಆರ್ಬಿಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ.ಪೈತಮ್ಮ (40), ಗಣೇಶ್ ಕುಮಾರ್ ಕೊಲೆಯಾದವರು. ಗೊಲ್ಲಬಾಬು ಕೊಲೆಗೈದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇವರೆಲ್ಲರೂ ಮೂಲತಃ ಆಂಧ್ರ ಪ್ರದೇಶದವರು ಎಂದು ತಿಳಿದು ಬಂದಿದೆ.
ಪೈತಮ್ಮ (40), ಗೊಲ್ಲಬಾಬು (45) ದಂಪತಿ ಕೆಲಸ ಅರಸಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದರು. ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಪತ್ನಿ ಪೈತಮ್ಮ ಮೇಲೆ ಆಗಾಗ ಗೊಲ್ಲಬಾಬು ಅನುಮಾನ ವ್ಯಕ್ತ ಪಡಿಸಿದ್ದ. ನಿನ್ನೆ ತಡರಾತ್ರಿಯಲ್ಲಿ ಗಣೇಶ್ ಕುಮಾರ್ ಜತೆಗಿದ್ದಾಗಲೇ ಪೈತಮ್ಮ ಪತಿಗೆ ಸಿಕ್ಕಿಬಿದ್ದಿದ್ದಳು ಈ ಹಿನ್ನೆಲೆ ನಿರ್ಮಾಣ ಹಂತದ ಕಟ್ಟಡದಲ್ಲಿ ಮರದ ತುಂಡಿನಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಹಲ್ಲೆ ನಡೆಸಿ, ಪತಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಡಬಲ್ ಮರ್ಡರ್ ಮಾಡಿದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.