Thursday, March 12, 2026
Flats for sale
Homeರಾಜ್ಯಬೆಂಗಳೂರು : ಪ್ರಯಾಣ ಮಾಡುತ್ತಿದ್ದ ವೇಳೆ ನಿದ್ರೆಗೆ ಜಾರಿದ ಚಾಲಕ : ಗ್ರಾಹಕನಿಂದ ಕ್ಯಾಬ್ ಚಾಲನೆ..!

ಬೆಂಗಳೂರು : ಪ್ರಯಾಣ ಮಾಡುತ್ತಿದ್ದ ವೇಳೆ ನಿದ್ರೆಗೆ ಜಾರಿದ ಚಾಲಕ : ಗ್ರಾಹಕನಿಂದ ಕ್ಯಾಬ್ ಚಾಲನೆ..!

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಕ್ಯಾಬ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಗ್ರಾಹಕನೊಬ್ಬ ಚಾಲಕನು ನಿದ್ರೆಗೆ ಜಾರುತ್ತಿದ್ದನ್ನು ಗಮನಿಸಿ ಆತನೇ ಕ್ಯಾಬ್ ಚಾಲನೆ ಮಾಡಿಕೊಂಡು ಮನೆಗೆ ತಲುಪಿ ಮಾನವೀಯತೆ ಮೆರೆದ ಪ್ರಕರಣ ಶನಿವಾರ ಮುಸುಕಿನ ಜಾವ ೩ ಗಂಟೆಗೆ ನಡೆದಿದೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊAಡಿರುವ ಮಿಲಿಂದ್ ಚಂದ್ವಾನಿ ಎಂಬ ಐಐಎಂನ ಎಂಬಿಎ ಪದವೀಧರ ಗ್ರಾಹಕ, `ಜೀವನದಲ್ಲಿ ಕೆಲವೊಮ್ಮೆ ಅಸಹಜ ಕೆಲಸಗಳನ್ನು ನಾವು ಮಾಡಬೇಕಾದ ಸಂದರ್ಭಗಳು ಒದಗಿ ಬರುತ್ತದೆ’ ಎಂದು ಬರೆದುಕೊAಡಿದ್ದಾರೆ.

ವಿಮಾನ ನಿಲ್ದಾಣದಿಂದ ಕ್ಯಾಬ್ ಏರಿಕೊಂಡು ಬೆAಗಳೂರಿನೆಡೆಗೆ ಸಾಗುವಾಗ ಕ್ಯಾಬ್ ಚಾಲಕ ತೂಕಡಿಸುತ್ತಿದ್ದ, ಹೋಗುವ ದಾರಿಯಲ್ಲಿ ನಿಲ್ಲಿಸಿ ಒಂದು ಟೀಯೊಂದಿಗೆ ಸಿಗರೇಟ್ ಸೇದಿದರೂ ಆತನನ್ನು ನಿದ್ದೆ ಬಿಡುತ್ತಿರಲಿಲ್ಲ.
ಇದರಿಂದಾಗಿ ತೊಂದರೆಯಾಗುವ ಸಂಭವ ಮನಗಂಡು `ನಾನೇ ಕ್ಯಾಬ್ ಚಾಲನೆ ಮಾಡುತ್ತೇನೆ’ ಎಂದು ಚಾಲಕನಿಗೆ ಹೇಳಿದಾಕ್ಷಣ ಆತನು ದಿಢೀರ್ ಎಂದು ಕ್ಯಾಬ್‌ನ ಕೀ ಕೊಟ್ಟು, ಗೂಗಲ್ ಮ್ಯಾಪ್ ತೊರಿಸಿದ ದಾರಿಯಲ್ಲಿ ಸಾಗಲು ಹೇಳಿದ್ದಾನೆ. ನಂತರ ಚಾಲಕನ ಪಕ್ಕದ ಸೀಟ್‌ನ್ನು ಹಿಂದಕ್ಕೆ ಸರಿಸಿಕೊಂಡು ನೆಮ್ಮದಿಯಿAದ ನಿದ್ರಿಸಿದ್ದಾನೆ.

ಆತನಿಗೆ ಕ್ಯಾಬ್‌ನ ಆಪ್‌ನಲ್ಲಿ ಐದು ಸ್ಟಾರ್ ರೆಟೀಂಗ್ ನೀಡಿ. ರೂ. 100 ಟಿಪ್ಸ್ ಸಹ ಕೊಟ್ಟೆ, ಇದೊಂದು ಒಳ್ಳೆಯ ಡೀಲ್ ಆಗಿದ್ದು, ಕಾರು ಓಡಿಸಲು ಬರುವುದು ಕೆಲವೊಮ್ಮೆ ಅನುಕೂಲಕರ’ ಎಂದು ಚಂದ್ವಾನಿ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular