Tuesday, October 21, 2025
Flats for sale
Homeರಾಜ್ಯಬೆಂಗಳೂರು : ಪ್ರಯಾಣಿಕರ ಬಳಿ ದುಬಾರಿ ಹಣ ಸುಲಿಗೆ ಮಾಡುತ್ತಿದ್ದ 1 ಸಾವಿರಕ್ಕೂ ಹೆಚ್ಚು ಆಟೋ...

ಬೆಂಗಳೂರು : ಪ್ರಯಾಣಿಕರ ಬಳಿ ದುಬಾರಿ ಹಣ ಸುಲಿಗೆ ಮಾಡುತ್ತಿದ್ದ 1 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾ ಜಪ್ತಿ..!

ಬೆಂಗಳೂರು : ಪ್ರಯಾಣಿಕರ ಬಳಿ ದುಬಾರಿ ಹಣ ಸುಲಿಗೆ ಮಾಡುತ್ತಿದ್ದ ಆಟೋ ಚಾಲಕರವಿರುದ್ಧ ಆರ್‌ಟಿಓ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಕಳೆದ ವಾರ ಒಂದು ಸಾವಿರಕ್ಕೂ ಹೆಚ್ಚು ಆಟೋಗಳಿಗೆ ಶಾಕ್ ನೀಡಿದ್ದಾರೆ.

ನಗರದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಆಟೋ ಚಾಲಕರು ಪ್ರಯಾಣಿಕರ ಬಳಿ ದುಪ್ಪಟ್ಟು ದರ ವಸೂಲಿಗೆ ಮುಂದಾದ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ತಂಡಗಳ ರಚನೆ ಮಾಡಿ ವಲಯ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಿತ್ತು. ಕಾರ್ಯಚರಣೆ ಭರ್ಜರಿ ಯಶಸ್ಸು ಸಾಧಿಸಿದ್ದು, ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋಗಳ ವಿರುದ್ಧ ಕ್ರಮಕೈಗೊಂಡಿದೆ.

ಕಳೆದ ಒಂದು ವಾರದಿಂದ ನಗರದ 11 ಆರ್‌ಟಿಓ ಕಚೇರಿ ವ್ಯಾಪ್ತಿಯಲ್ಲಿ 2೦ ತಂಡಗಳನ್ನ ರಚಿಸಿ ಸಾರಿಗೆ ಅಧಿಕಾರಿಗಳು ನಗರದಾದ್ಯಂತ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ವೇಳೆ ಒಟ್ಟು 3,531 ಆಟೋಗಳನ್ನು ತಪಾಸಣೆ ನಡೆಸಿದ್ದು, ಅದರಲ್ಲಿ ಪರ್ಮೀಟ್, ದುಪ್ಪಟ್ಟು ದರ ವಸೂಲಿ ವಿಮೆ,ಸರಿಯಾದ ದಾಖಲೆಯಿಲ್ಲದ 1,006 ವಾಹನಗಳ ವಿರುದ್ಧ ಕೇಸ್ ದಾಖಲಿಸಿ, 233 ಆಟೋಗಳನ್ನು ಜಪ್ತಿ ಮಾಡಿದ್ದಾರೆ.

ಆಟೋಗಳ ಪೈಕಿ ಅತಿ ಹೆಚ್ಚು ಆಟೋಗಳು ಆ್ಯಪ್ ಆಧಾರಿತ ಸಂಚಾರ ಮಾಡುತ್ತಿದ್ದ ಆಟೋಗಳೇ. ನಗರವ್ಯಾಪಿ ಆಪ್ ಆಧಾರಿತ ಆಟೋಗಳ ಮೇಲೆಯೇ ಅತಿ ಹೆಚ್ಚು ದೂರಗಳಿದ್ದು, ಅದರಂತೆ ಆಯಾ ವ್ಯಾಪ್ತಿಯಲ್ಲಿ ಹೆಚ್ಚುವರಿ ದರ ಪಡೆದು ಸಂಚಾರ ಮಾಡುತ್ತಿದ್ದ ಆ್ಯಪ್ ಆಧಾರಿತ ಆಟೋಗಳಿಗೂ ಆರ್‌ಟಿಓ ಬಿಸಿ ಮುಟ್ಟಿಸಿದೆ.

ಆ್ಯಪ್‌ಗಳ ಆಟೋ ವಿರುದ್ಧ ಕ್ರಮ ಆ್ಯಪ್- ಕೇಸ್ ದಾಖಲು ಸೀಜ್ಓ ಲಾ -35 – 4ಊಬರ್ – 59 – 14ರ‍್ಯಾಪಿಡೋ – 92 – 32 ನಮ್ಮಯಾತ್ರಿ – 25 – 4 ಇತರೆ ಆಪ್ – 795 – 129

RELATED ARTICLES

LEAVE A REPLY

Please enter your comment!
Please enter your name here

Most Popular