Friday, March 13, 2026
Flats for sale
Homeಕ್ರೈಂಬೆಂಗಳೂರು : ಪ್ರಧಾನಿ ಮೋದಿ, ಸಿಎಂ ಯೋಗಿಗೆ ಬೆದರಿಕೆ ವಿಡಿಯೋ : ಯಾದಗಿರಿಯ ವ್ಯಕ್ತಿ ವಿರುದ್ಧ...

ಬೆಂಗಳೂರು : ಪ್ರಧಾನಿ ಮೋದಿ, ಸಿಎಂ ಯೋಗಿಗೆ ಬೆದರಿಕೆ ವಿಡಿಯೋ : ಯಾದಗಿರಿಯ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲು.

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಮತ್ತು ಬೆದರಿಕೆ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ್ದ ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಆರೋಪಿಯನ್ನು ಮೊಹಮ್ಮದ್ ರಸೂಲ್ ಕದ್ದರೆ ಎಂದು ಗುರುತಿಸಲಾಗಿದೆ. ಸುರಪುರ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 505 (1) (ಬಿ), 25 (1) (ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಯಾದಗಿರಿ ಜಿಲ್ಲೆಯ ಸುರಪುರದ ರಂಗಂಪೇಟೆ ನಿವಾಸಿಯಾದ ರಸೂಲ್ ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಹೈದರಾಬಾದ್‌ನಿಂದ ವಿಡಿಯೋವನ್ನು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದು ಹರಿತವಾದ ಆಯುಧವನ್ನು ಹಿಡಿದು ಆಕ್ಷೇಪಾರ್ಹ ಭಾಷೆ ಬಳಸಿದ್ದು ವರದಿಯಾಗಿದೆ.

ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular