ಬೆಂಗಳೂರು : ದೇಶದ ಹೊರಗಿನ ಉಗ್ರರಿಗಿಂತ ದೇಶದ ಒಳಗಿನ ಉಗ್ರರನ್ನು ಸೆದೆಬಡೆಯಬೇಕೆಂದು ಹಲವು ಕಾರ್ಯಕರ್ತರು ಆಡಿದ ಮಾತಂತೂ ನಿಜ ಅದರಂತೆಯೇ ನಮ್ಮ ದೇಶದಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಮಾತಾಡುವವರನ್ನು ಗಡಿಪಾರು ಮಾಡಬೇಕೆಂದು ಹಲುವು ಹಿಂದೂ ಸಂಘಟನೆಗಳು ಆಗ್ರಹಿಸಿದೆ.
ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನವಾಜ್ ಎಂಬಾತನು ಪ್ರಚೋದನಾಕಾರಿ ಹೇಳಿಕೆ ನೀಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದು ಇದೀಗ ಯುವಕನನ್ನು ಬೆಂಗಳೂರಿನ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದು ಆತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ಪಬ್ಲಿಕ್ ಸರ್ವೆಂಟ್ ಐಡಿಯಲ್ಲಿ ಆರೋಪಿ ನವಾಜ್ ಮೋದಿ ಮನೆಗೆ ಮೊದಲು ಬಾಂಬ್ ಹಾಕಿ ಎಂದಿದ್ದು “ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಯಾಕೆ ಪಾಕಿಸ್ತಾನ ಬಾಂಬ್ ಹಾಕಿಲ್ಲ? ಜನರೆಲ್ಲ ಸುಮ್ಮನೆ ನೆಮ್ಮದಿಯಿಂದ ಇರುವಾಗ ಈ ಪರಿಸ್ಥಿತಿ ಸೃಷ್ಟಿಸಿದ್ದು ಮೋದಿ. ಮೊದಲು ಮೋದಿ ಮನೆ ಮೇಲೆ ಬಾಂಬ್ ಹಾಕಬೇಕು” ಎಂಬ ನವಾಜ್ ಹೇಳಿಕೆ ನೀಡಿದ ಎಂದು ವೈರಲ್ ಆಗಿದೆ.ಈ ವಿಡಿಯೋ ಬಗ್ಗೆ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದು ದೇಶದ್ರೋಹಿ ನವಾಜ್ ನನ್ನ ಬಂಧಿಸಿ ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.ಈ ವಿಡಿಯೋ ಆದರಿಸಿ ಬಂಡೆಪಾಳ್ಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಟ್ಟಿದ್ದಾರೆ.