ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ರೌಡಿಶೀಟರ್ಸ್ ಗಳ ಜೊತೆ ಬಿಂದಾಸ್ ಆಗಿ ಕುಳಿತುಕೊಂಡಿರುವ ಫೋಟೋ, ಸಹ ಕೈದಿಯ ಸ್ನೆಹಿತನ ಜೊತೆ ವೀಡಿಯೋ ಕಾಲ್ ಮುಖಾಂತರ ಮಾತನಾಡುತ್ತಿರುವ ಸ್ರೀನ್ ಶಾಟ್ ಫೋಟೋಗಳು ವೈರಲ್ ಆಗುತ್ತಿರುವುದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.ನಟ ದರ್ಶನ್ ಹೊರಗೆ ಯಾವ ರೀತಿ ಬಿಂದಾಸ್ ಜೀವನ ನಡೆಸುತ್ತಿದ್ದರೋ, ಅದೇ ರೀತಿ ಜೈಲಿನಲ್ಲಿಯೂ ದರ್ಶನ್ ಇರುವಂತೆ ಕಾಣಿಸುತ್ತಿದೆ. ದರ್ಶನ್ಗೆ ಬೇಕಿರೋ ವ್ಯವಸ್ಥೆಗಳೆಲ್ಲಾ ಮಾಡುತ್ತಿರುವ ಶಂಕೆಗೆ ಜೈಲಿಂದ ಸೋರಿಕೆ ಆಗಿರುವ ಫೋಟೋಗಳು ಕಾರಣವಾಗಿದೆ. ದಾಸನಿಗೆ ಸೆರೆಮನೆಯಲ್ಲಿ ಅರಮನೆವಾಸ ಕಲ್ಪಿಸಿಕೊಟ್ಟವರು ಯಾರು ಎಂಬುದರ ಹಿಂದೆ ತನಿಖೆ ನಡೆಯುತ್ತಿದೆ.
ಮಾಧ್ಯಮಗಳು ನಟನ ಪೋಟೋವನ್ನು ಬಿತ್ತರಿಸಿವೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಖುದ್ದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಜೈಲು ಸೇರಿದ್ದಾರೆ. ಕಳೆದ ಮೂರು ತಿಂಗಳಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಆದರೆ ಜೈಲಿನ ಒಳಗೆ ನಟನಿಗೆ ರಾಜಾತಿಥ್ಯ ನೀಡುತ್ತಿರುವ ಫೋಟೋಗಳು ಮತ್ತು ವಿಡಿಯೋ ಕರೆ ಮಾನಾಡಿರುವ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೈದಿಯೊಬ್ಬ ಜೈಲಿನ ಹೊರಗಿರುವ ವ್ಯಕ್ತಿಗೆ ವಿಡಿಯೋ ಕಾಲ್ ಮಾಡಿ, ದರ್ಶನ್ ಅವರಿಂದ ಹಾಯ್ ಹೇಳಿಸಿದ್ದಾನೆ. ಆ ವಿಡಿಯೋ ಈಗ ವೈರಲ್ ಆಗಿದೆ.


