ಬೆಂಗಳೂರು : ಪಕ್ಕದ ಸೆಲ್ನಲ್ಲಿರುವ ಪಾಕಿಸ್ತಾನಿ ಆರೋಪಿಗಳಿಗೆ ಕೇರಂ, ಚೆಸ್ ಕೊಡುತ್ತಾರೆ, ಆದರೆ ನಮಗೆ ದಿಂಬು ಹಾಸಿಗೆ ಕೊಡುತ್ತಿಲ್ಲ ಎಂದು ಕೊಲೆ ಆರೋಪಿ ದರ್ಶನ್ ಪರ ವಕೀಲರು ನ್ಯಾಯಾಧೀಶರ ಬಳಿ ಅಲವತ್ತುಕೊಂಡಿದ್ದಾರೆ. 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಬುಧವಾರ ದರ್ಶನ್ ಪರ ವಕೀಲರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ವಾದ ಮಂಡಿಸಿದ ದರ್ಶನ್ ಪರ ವಕೀಲರು ಕೋರ್ಟ್ ಆದೇಶ ನೀಡಿದ್ದರೂ ಹಾಸಿಗೆ, ದಿಂಬು ಕೊಡುತ್ತಿಲ್ಲ. ಕಂಬಳಿ, ಚಾಪೆ, ನೀಡಿದ್ದಾರೆ ಅಂತ ಸರ್ಕಾರದ ವಕೀಲರು ಹೇಳುತ್ತಿದ್ದಾರೆ. ಆದರೆ ನಾವು ಕೇಳಿದ್ದನ್ನು ಕೊಡುತ್ತಿಲ್ಲಎಂದು ಹೇಳಿದ್ದಾರೆ.
ಪ್ರಾಸಿಕ್ಯೂಟರ್ ವಾದ ಜೈಲ್ ಮ್ಯಾನ್ಯುಯೆಲ್ನಂತೆ ನೀಡಬೇಕಾದ ಕಂಬಳಿ, ಬ್ಲಾಂಕೆಟ್, ಲೋಟ, ತಟ್ಟೆ ನೀಡಿದ್ದಾರೆ. ಬೆಳಗ್ಗೆ 1 ಗಂಟೆ, ಸಂಜೆ 1 ಗಂಟೆ ವಾಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ದರ್ಶನ್ ವಕೀಲರ ಆಕ್ಷೇಪಕ್ಕೆ ಕೋರ್ಟ್ ಆದೇಶ ನೀಡಿದ್ದರೂ ಹಾಸಿಗೆ, ದಿಂಬು ನೀಡುತ್ತಿಲ್ಲ, ಕೇಳಿದ್ದನ್ನು ಕೊಡುತ್ತಿಲ್ಲ.ಜೈಲಿನಲ್ಲಿ ಕೇವಲ ಕಂಬಳಿ, ಚಾಪೆ ಮಾತ್ರ ನೀಡಿ, ನನ್ನನ್ನು ಕ್ವಾರಂಟೈನ್ನಲ್ಲಿ ಇರಿಸಿದ್ದಾರೆ ಎಂದು ಕೇಳಿಕೊಂಡಿದ್ದಾರೆ.


