ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮತಾಂತರ,ಲವ್ ಜಿಹಾದ್ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದು ಇದಕ್ಕೆ ಸಾಕ್ಷಿಯಾಗಿ ನೇಹಾ ಕೊಲೆ ಪ್ರಕರಣ ರಾಜ್ಯದೆಲ್ಲೆಡೆ ಭಾರೀ ಸದ್ದು ಮಾಡಿದೆ.ಇದೆ ಹೊತ್ತಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಅನ್ಯಕೋಮಿನ ಯುವಕರು ಪ್ರೀತಿ ಹೆಸರಲ್ಲಿ ಮತಾಂತರಕ್ಕೆ ಯತ್ನಿಸಿರುವ ಘಟನೆಗಳು ಬೆಳಕಿಗೆಬಂದಿದೆ.
ಇದೇ ಹೊತ್ತಲ್ಲಿ ಬೆಳಗಾವಿ ಜಿಲ್ಲೆಯ ಮುನವಳ್ಳಿಯಲ್ಲಿ ಮತಾಂತರ ಯತ್ನ ಆರೋಪ ಕೇಳಿಬಂದಿದ್ದು, ಏಳು ಜನರ ವಿರುದ್ಧ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ. ಎಲ್ಲಕಡೆಯೂ ಅನ್ಯಕೋಮಿನ ಪ್ರೇಮದಾಟ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನೇಹಾ ಹಿರೇಮಠ ಹತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಫಯಾಜ್ಗೆ ಕಠಿಣ ಶಿಕ್ಷೆ ಆಗ್ಬೇಕೆಂದು ಧರ್ಮಾತೀತವಾಗಿ ಎಲ್ಲ ಸಮುದಾಯದವರು ನೇಹಾ ಸಾವಿನ ನ್ಯಾಯಕ್ಕೆ ಆಗ್ರಹಿಸುತ್ತಿದ್ದಾರೆ. ನೇಹಾ ಲವ್ ಜಿಹಾದ್ಗೆ ಬಲಿಯಾಗಿದ್ದಾಳೆಂದು ಪೋಷಕರು ಆರೋಪಿಸ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಮುನವಳ್ಳಿಯಲ್ಲಿ ಸಂತ್ರಸ್ತೆಯ ಪತಿ ಕಿರಾಣಿ ಅಂಗಡಿ ಹೊಂದಿದ್ದ,ಪತಿ ಇಲ್ಲದ ವೇಳೆ ಅಂಗಡಿಯಲ್ಲಿ ಪತ್ನಿ ಇರುವುದನ್ನು ಗಮನಿಸಿ ಆರೀಫ್ ಬೇಪಾರಿ ಸ್ಕೆಚ್ ಹಾಕಿದ್ದು ಮಹಿಳೆಯ ಸಂಪರ್ಕ ಸಾಧಿಸಲು ನೆರೆಯವರೆಂದು ಪರಿಚಯ ಮಾಡಿಕೊಂಡು ಫೋನ್ ನಂಬರ್ ಲಪಟಾಯಿಸಿ ಮಹಿಳೆಯನ್ನು ಜಾಬ್ ಕೊಡಿಸೋದಾಗಿ ನಂಬಿಸಿ ಎರಡು ಮಕ್ಕಳ ತಾಯಿಯನ್ನು ಬೆಳಗಾವಿಗೆ ಕರೆ ತಂದು, ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಲೈಂಗಿಕ ದೌರ್ಜನ್ಯದ ಫೋಟೋ ಸೆರೆಹಿಡಿಟ್ಟು ಮಹಿಳೆಗೆ ಮತಾಂತರಗೊಳ್ಳಬೇಕೆಂದು ನಿರಂತರ ಪೀಡಿಸಿದ್ದು ಆರೀಫ್ ಬೇಪಾರಿಯ ಕೃತ್ಯಕ್ಕೆ ಐವರು ದುಷ್ಕರ್ಮಿಗಳು ಸಾಥ್ ನೀಡಿದ್ದಾರೆ. ಮಹಿಳೆಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಅಮೀಷಾ ಹೊಡ್ದಿದ್ದು ಮತಾಂತರ ವಾಗದಿದ್ದರೆ ಲೈಂಗಿಕ ಕ್ರಿಯೆಯ ಫೋಟೊ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ ,ಅಷ್ಟೇ ಅಲ್ಲದೆ ಮಹಿಳೆಗೆ ಬಲವಂತವಾಗಿ ಬುರ್ಖಾ ಹಾಕಿಸಿದ್ದು,ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.ಸದ್ಯ ಮಹಿಳೆ 7 ಜನರ ವಿರುದ್ಧ ದೂರು ದಾಖಲಸಿದ್ದು ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಇನ್ನು ಬೀದರ್ ನಲ್ಲೂ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪ್ರೀತಿ ಹೆಸರಲ್ಲಿ ನಂಬಿಸಿ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದ್ದು ಆರೋಪಿ ಲಾಯಕ್ ಅಲಿ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯನ್ನು ತನ್ನ ಬಾಡಿಗೆ ಮನೆಗೆ ಕರೆದೊಯ್ಯುವಾಗ ಭಜರಂಗದಳದ ಕಾರ್ಯಕರ್ತರು, ಹಿಡಿದು ವಿಚಾರಿಸಿದ್ದಾರೆ. ಆಗ ವಿಷ್ಯ ಬೆಳಕಿಗೆ ಬಂದಿದೆ. ಸದ್ಯ ವಿದ್ಯಾರ್ಥಿನಿಯ ತಾಯಿ ಬೀದರ್ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಲಾಯಕ್ ಅಲಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ಲವ್ ಜಿಹಾದ್,ಅತ್ಯಾಚಾರ ,ಮತಾಂತರ ನಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಂತ್ರಸ್ತ ಯುವತಿಯರ ಪೋಷಕರು ಆರೋಪಿಸಿದ್ದಾರೆ.