ಬೆಂಗಳೂರು : ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದು, ಅನೇಕ ಟೆಕ್ ಉದ್ಯೋಗಿಗಳು ತಾತ್ಕಾಲಿಕವಾಗಿ ನಗರವನ್ನು ತೊರೆಯುತ್ತಿದ್ದಾರೆ ಮತ್ತು ಅನೇಕರು ಹುಟ್ಟೂರುಗಳಿಗೆ ಹೋಗುತ್ತಿದ್ದಾರೆ. ಕುಡಿಯುವ ನೀರಿಗೆ ಬರ ಎದುರಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಳವಡಿಕೆ ಮಾಡಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಬಳಿ ಒಬ್ಬರಿಗೆ ಒಂದೇ ಕ್ಯಾನ್ ನೀರು ಎಂದು ನಿಗದಿ ಮಾಡಲಾಗಿದೆ.ನಗರದಲ್ಲಿ ನೀರಿನ ಬಿಕ್ಕಟ್ಟು ಎಷ್ಟರ ಮಟ್ಟಿಗೆ ತಲೆದೋರಿದೆ ಎಂದರೆ ಬಹುರಾಷ್ಟ್ರೀಯ ಸಂಸ್ಥೆಗಳ ಅನೇಕ ಟೆಕ್ ಉದ್ಯೋಗಿಗಳು ಮೈಸೂರಿನಲ್ಲಿ ಆಶ್ರಯ ಪಡೆದಿದ್ದಾರೆ.ಆದರೆ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನೀರಿನ ಕೊರತೆ ಇಲ್ಲ, ನಗರದಲ್ಲಿ ನೀರಿನ ಕೊರತೆಯ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂರಿದೆ.
ಈ ನಡುವೆ ನೀರಿನ ಸಮಸ್ಯೆಯಿಂದಾಗಿ ಐಟಿ ಉದ್ಯೋಗಿಗಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಯುವಕನೊಬ್ಬ ಟ್ವೀಟ್ ಮೂಲಕ ರಾಹುಲ್‌ಗಾಂಧಿಗೆ ಮನವಿ ಮಾಡಿದ್ದಾರೆ. ನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯಿಂದಾಗಿ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದ್ದು, ಈ ಸ್ಥಿತಿಯಲ್ಲೂ ಫ್ಲಾಟ್‌ಗೆ ಮಾಸಿಕ 25 ಸಾವಿರ ರೂ. ಬಾಡಿಗೆ ನೀಡುತ್ತಿದ್ದೇವೆ. ತನ್ನ ಸಂಸ್ಥೆಯು ಮನೆಯಿಂದಲ ಕೆಲಸ ಮಾಡಲು ಅವಕಾಶ ನೀಡದಿರುವುದು ಪರಿಸ್ಥಿತಿ ಮತ್ತಷ್ಟು ದುರ್ಬಲಗೊಳ್ಳಲು ಕಾರಣವಾಯಿತು ಎಂದು ಕೆಆರ್ ಪುರಂನ ನಿವಾಸಿ ತಾವು ಮತ್ತು ತಮ್ಮ ಪತ್ನಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಮೂಲಭೂತ ಅವಶ್ಯಕತೆಗಳಿಗಾಗಿಯೂ ಹೆಣಗಾಡುತ್ತಿದ್ದೇವೆ ತಿಳಿಸಿದ್ದಾರೆ.
ಶುದ್ಧ ನೀರಿನ ಘಟಕಗಳಲ್ಲಿ 5 ರೂ. ನಾಣ್ಯ ಹಾಕಿದರೆ 20 ಲೀಟರ್ ನೀರು ಲಭ್ಯವಾಗುತ್ತದೆ. ಈ ಹಿಂದೆ ಎಷ್ಟು ಕ್ಯಾನ್‌ಗಳಲ್ಲಿ ಬೇಕಾದರೂ ನೀರನ್ನು ಸಂಗ್ರಹಿಸಬಹುದಾಗಿತ್ತು. ಆದರೆ ಈಗ ನೀರಿನ ಅಭಾವ ಇರುವುದರಿಂದ ಹಾಗೂ ಕ್ಯಾನ್‌ಗಳಲ್ಲಿ ನೀರನ್ನು ಭರ್ತಿ ಮಾಡಿಕೊಂಡು ಮಾರಾಟ ಮಾಡುವ ಸಾಧ್ಯತೆಗಳನ್ನು ಗಮನಿಸಿರುವ ಬಿಬಿಎಂಪಿ ಹಾಗೂ ಜಲಮಂಡಳಿಗಳು ಶುದ್ಧ ನೀರಿನ ಘಟಕಗಳ ಬಳಿ ಫಲಕವೊಂದನ್ನು ಅಳವಡಿಸಿದ್ದು ಒಬ್ಬರಿಗೆ ಒಂದು ಕ್ಯಾನ್ ನೀರು ಮಾತ್ರ ಎಂದು ಹೇಳಿದೆ.ಮತ್ತೊಬ್ಬ ಐಟಿ ಉದ್ಯೋಗಿ ಅವರು ಮುಂಬೈಗೆ ತೆರಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ನಗರದಲ್ಲಿ ಸ್ಥಾಪನೆ ಮಾಡಲಾಗಿರುವ ಶುದ್ಧ ನೀರಿನ ಘಟಕಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಎರಡು ಗಂಟೆಗಳ ಕಾಲ ಮಾತ್ರ ನೀರನ್ನು ಒದಗಿಸಲಾಗುತ್ತಿದೆ. ಈ ಹಿಂದೆ ಮಧ್ಯಾಹ್ನದ ವೇಳೆ ಸ್ಥಗಿತ ಮಾಡಲಾಗುತ್ತಿತ್ತು. ಈಗ ಬೆಳಗ್ಗೆ 7 ರಿಂದ 9 ಗಂಟೆ ಸಂಜೆ 5 ರಿಂದ 7 ಗಂಟೆವರೆಗೆ ಮಾತ್ರ ನೀರನ್ನು ಒದಗಿಸುವ ಕಾರ್ಯವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಈ ಘಟಕಗಳಿಗೆ ನೀರು ಪೂರೈಕೆ ಮಾಡುವ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದಾಗಿದೆ. ಇನ್ನು ಜಲಮಂಡಳಿಯಿAದ ಪ್ರತಿದಿನ ಕೆಲವು ಘಟಕಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತದೆ. ಇದು ಕೂಡಾ ಬೆಳಗ್ಗೆ ಮಾತ್ರ. ಇದರಿಂದಾಗಿಯೇ ಶುದ್ಧ ನೀರಿನ ಘಟಕಗಳಲ್ಲಿ ನೀರಿಗೂ
ಪಡಿತರ ಮಾದರಿ ಅಳವಡಿಸಲಾಗಿದೆ.
ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ ನೀರಿನ ಕೊರತೆಯ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ. ನಗರದಲ್ಲಿ ನೀರಿನ ಕೊರತೆಯಿಲ್ಲ. ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಅನುಮತಿ ನೀಡುವಂತೆ ಕೇಳಲಿ ಎಂದು ಹೇಳಿದ್ದಾರೆ.