Thursday, November 21, 2024
Flats for sale
Homeರಾಶಿ ಭವಿಷ್ಯಬೆಂಗಳೂರು : ನಾಡಿನೆಲ್ಲೆಡೆ ಆಯುಧ ಪೂಜೆಯ ಸಂಭ್ರಮ, ಶಕ್ತಿ ದೇವತೆಗಳಿಗೆ ವಿಶೇಷ ಪೂಜೆಯ ದಿನ ,ಬೆಲೆ...

ಬೆಂಗಳೂರು : ನಾಡಿನೆಲ್ಲೆಡೆ ಆಯುಧ ಪೂಜೆಯ ಸಂಭ್ರಮ, ಶಕ್ತಿ ದೇವತೆಗಳಿಗೆ ವಿಶೇಷ ಪೂಜೆಯ ದಿನ ,ಬೆಲೆ ಗಗನಕ್ಕೇರಿದರೂ ದೈವನಿಷ್ಠೆಗಾಗಿ ಹೂವು-ಹಣ್ಣು ಖರೀದಿ ಜೋರು…!

ಬೆಂಗಳೂರು : ನವರಾತ್ರಿ ಹಬ್ಬವೂ ಕೊನೆಯ ಹಂತದಲ್ಲಿದ್ದು, ನಾಳೆ (ಅಕ್ಟೋಬರ್ 11) ಆಯುಧ ಪೂಜೆ, ನಾಡಿದ್ದು (ಅಕ್ಟೋಬರ್ 12) ವಿಜಯದಶಮಿ ಆಚರಣೆಗೆ ರಾಜ್ಯಕ್ಕೆ ರಾಜ್ಯವೇ ಸಜ್ಜಾಗಿದೆ. ಹೂವು, ಹಣ್ಣು, ತರಕಾರಿ ಬೆಲೆ ಗಗನಮುಖಿಯಾಗಿವೆ. ಹೂವು ಮತ್ತು ಬೂದುಗುಂಬಳದ ಬೆಲೆ ಏರತೊಡಗಿದೆ. ಹಬ್ಬದ ದಿನದ ಬೆಲೆ ಏರಿಕೆ ಬಿಸಿ ತಟ್ಟದಂತೆ ಎರಡು ದಿನ ಮುಂಚಿತವಾಗಿಯೆ ಹೂವು, ಹಣ್ಣು, ತರಕಾರಿ ಖರೀದಿಗೆ ಜನ ಮಾರುಕಟ್ಟೆಗಳಲ್ಲಿ ಬಂದಿರುವುದು ಬುಧವಾರವೇ ಕಂಡುಬಂತು. ಇಂದು (ಅಕ್ಟೋಬರ್ 10) ಕೂಡ ಮಾರುಕಟ್ಟೆಗಳಲ್ಲಿ ಬೆಳಗ್ಗೆಯೇ ಜನದಟ್ಟಣೆ ಇತ್ತು. ಶುಕ್ರವಾರದ ಆಯುಧ ಪೂಜೆ ಸಂದರ್ಭದಲ್ಲಿ ವಾಹನಪೂಜೆ, ಕೈಗಾರಿಕಾ ಸ್ಥಾಪನೆಗಳಲ್ಲಿ ಪೂಜೆ ನಡೆಯುವುದು ವಾಡಿಕೆ. ಆದ್ದರಿಂದಲೇ ಹೂವು, ಬೂದುಗುಂಬಳಕ್ಕೆ ಭಾರಿ ಬೇಡಿಕೆ. ಶುಕ್ರವಾರ, ಶನಿವಾರ, ಭಾನುವಾರ ರಜೆ ಇರುವ ಕಾರಣ ಅನೇಕ ಕಡೆ ಇಂದೇ ಆಯುಧ ಪೂಜೆ ಮಾಡುತ್ತಿದ್ದಾರೆ. ಹೀಗಾಗಿ ಹೂವು ಮತ್ತು ಬೂದುಗುಂಬಳ ರೇಟ್ ನಿಧಾನವಾಗಿ ಏರತೊಡಗಿದೆ. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಮಡಿವಾಳ, ದಾಸರಹಳ್ಳಿ, ವಿಜಯನಗರ, ಗಾಂಧಿ ಬಜಾರ್, ಜಯನಗರ ಸೇರಿ ಬೆಂಗಳೂರಿನ ಕೆಲವು ತಾತ್ಕಾಲಿಕ ಮಾರುಕಟ್ಟೆಗಳು ತುಂಬಿತುಳುಕತೊಡಗಿವೆ.

ಆಯುಧ ಪೂಜಾ ಸುದ್ದಿ ಮೈಸೂರು ಅರಮನೆ ಸೇರಿದಂತೆ ರಾಜ್ಯಾದ್ಯಂತ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದ್ದು, ದಸರಾ ಹಬ್ಬದ ಕೊನೆಯ ದಿನ ಶಸಾಸ್ತ್ರ ಹಾಗೂ ಸಾಧನಗಳನ್ನು ಪೂಜೆಸಲಾಗುತ್ತದೆ. ಮನೆ ಹಾಗೂ ಕಚೇರಿಯನ್ನು ಹೂಗಳಿಂದ ಅಲಂಕರಿಸಿ, ಶಸಾಸ್ತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಶಕ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿ ದೇವಿಯನ್ನು ಪೂಜೆಸಲಾಗುತ್ತಿದೆ. ಯಂತ್ರಗಳು, ವಾಹನಗಳು ಮತ್ತಿತರ ಸಾಧನಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಮೈಸೂರಿನ ಅರಮನೆ ಮೈದಾನದೊಳದೆ ರಾಜಮನೆತನದಿಂದ ಆಯಧ ಪೂಜೆಯನ್ನು ಆಚರಿಸಲಾಗುತ್ತಿದೆ.

ಮಹಾನವಮಿ ಅಥವಾ ಆಯುಧಪೂಜೆಯನ್ನು ನವರಾತ್ರಿಯ 9ನೇ ದಿನ ಆಚರಿಸುತ್ತಾರೆ ಆಶ್ವಿಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಈ ದಿನ ಹೆಸರೇ ಹೇಳುವಂತೆ ಆಯುಧಗಳಿಗೆ ಪೂಜೆ ಮಾಡುವ ದಿನ. ಹಿಂದೆ ಮೈಸೂರಿನ ಮಹಾರಾಜರು ಮಹಾನವಮಿಯ ದಿನ ಎಲ್ಲಾ ಆಯುಧಗಳನ್ನು, ತಮ್ಮ ಪಟ್ಟದ ಕತ್ತಿಯನ್ನೂ ಸಹ ತೆಗೆದಿಟ್ಟು ಪೂಜೆ ಮಾಡುತ್ತಿದ್ದರು.

ಈ ದಿನ ಅವುಗಳಿಗೆ ವಿರಾಮ/ವಿಶ್ರಾಂತಿ/ರಜಾ ದಿನ. ಈ ಆಯುಧಗಳು ನಮ್ಮನ್ನು ವರುಷವೆಲ್ಲ ಕಾಪಾಡಿವೆ. ಈ ಒಂದು ದಿನ ಅವುಗಳಿಗೆ ವಿರಾಮ ಕೊಟ್ಟು, ಅವುಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ವರ್ಷವೂ ಹೀಗೆ ನಮ್ಮನ್ನು ಕಾಪಾಡಲಿ ಎಂದು ಅವುಗಳಿಗೆ ಪೂಜೆ ಮಾಡುತ್ತಿದ್ದರು. ರಾಜರ ಆಳ್ವಿಕೆ ಮುಗಿದರೂ, ಈ ಆಯುಧ ಪೂಜೆ ಇಂದಿಗೂ ಎಲ್ಲರೂ ಆಚರಿಸುತ್ತಾರೆ. ಅದರಂತೆ ನಾಡಿನ ಸಮಸ್ತ ಭಕ್ತವೃಂದದವರು ತಮ್ಮ ವೃತ್ತಿ ಕೌಶಲ್ಯತೆಯಲ್ಲಿ ಬಳಸಲ್ಪಡುವ ಪ್ರತಿಯೊಂದು ಆಯುಧವನ್ನು ಹಾಗೂ ವಾಹನಾಧಿಗಳನ್ನು ಆಯುಧ ಪೂಜೆಯ ದಿನದಂದು ಶುಭ್ರಗೊಳಿಸಿ ಪೂಜಿಸುವ ವಾಡಿಕೆಯಿದೆ.

ತಮಿಳುನಾಡು, ಆಂಧ್ರದಿಂದ ಬೂದುಗುಂಬಳ ಬೆಂಗಳೂರಿಗೆ
ಆಯುಧ ಪೂಜೆಗೆ ಬೂದುಗುಂಬಳವೇ ಮುಖ್ಯ. ಕಾರ್ಖಾನೆ, ಕಚೇರಿ, ಅಂಗಡಿ ಮುಂಗಟ್ಟು, ಮನೆಗಳಲ್ಲಿ ಆಯುಧ ಪೂಜೆಗೆ, ವಾಹನ ಪೂಜೆಗೂ ಬೂದುಗುಂಬಳ ಒಡೆಯುವುದು ವಾಡಿಕೆ. ಬೆಂಗಳೂರಿಗೆ ಹೆಚ್ಚಾಗಿ ತಮಿಳುನಾಡು ಮತ್ತು ಆಂಧ್ರದಿಂದಲೇ ಬೂದುಗುಂಬಳ ಪೂರೈಕೆಯಾಗುತ್ತದೆ. ಈ ಬಾರಿ ಕೂಡ ಅಲ್ಲಿಂದ ಬೂದುಗುಂಬಳ ಬೆಂಗಳೂರು ತಲುಪಿವೆ. ಆದರೆ ದರ ಏರಿಕೆಯಾಗಿದೆ. ಮಳೆ ಕಾರಣ ಇಳುವರಿ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಬೂದುಗುಂಬಳ ಸಗಟು ದರ ಕಿಲೋಗೆ 30 ರೂಪಾಯಿಯಿಂದ 35 ರೂಪಾಯಿ ಇದ್ದರೆ, ಚಿಲ್ಲರೆ ಮಾರಾಟ ದರ 40 ರಿಂದ 50 ರೂಪಾಯಿ ತನಕ ಇದೆ. ಕೆಲವರು ತೂಕದ ಬದಲು ಗಾತ್ರ ನೋಡಿ ದರ ನಿಗದಿ ಮಾಡುತ್ತಾರೆ. ಸಣ್ಣ ಗಾತ್ರದ ಕುಂಬಳ ಕಾಯಿ 100 ರೂ.ನಿಂದ 150 ರೂಪಾಯಿಗೆ ಮಾರಾಟವಾದರೆ ಮಧ್ಯಮ ಗಾತ್ರದ್ದು 200 ರೂಪಾಯಿ ಆಸುಪಾಸಿನಲ್ಲೂ, ದೊಡ್ಡ ಗಾತ್ರದ್ದು ಇನ್ನೂ ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿದೆ.

ದುಬಾರಿಯಾಗಿದೆ ಹೂವು, ಹಣ್ಣು
ಮಳೆ ಹಿನ್ನೆಲೆಯಲ್ಲಿ ಹೂವಿನ ದರ ಏರಿಕೆಯಾಗಿದೆ. ಬುಧವಾರ ಕೆ.ಆರ್. ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವು ಕೆ.ಜಿ.ಗೆ 100-300 ರೂ., ಚೆಂಡು ಹೂವು ಕೆ.ಜಿ.ಗೆ 60 ರಿಂದ 80 ರೂ. ಕನಕಾಂಬರಿ 600 ರೂ., ಕಾಕಡ 600, ಮಲ್ಲಿಗೆ ಮೊಗ್ಗು 500 ರೂ., ಸುಗಂಧರಾಜ ಕೆ.ಜಿ. 400 ರೂ.ಗೆ ಮಾರಾಟವಾಯಿತು. ಪಾಲಿ ಹೌಸ್‌ಗಳಲ್ಲಿ ಬೆಳೆದ ಸೇವಂತಿಗೆ, ಚೆಂಡು ಹೂವಿಗೆ ಬೇಡಿಕೆ ಹೆಚ್ಚಿದೆ.

ಆಯುಧ ಪೂಜೆ ಪೌರಾಣಿಕ ಹಿನ್ನೆಲೆಯ ಮಹತ್ವ : ಪೌರಾಣಿಕ ಹಿನ್ನೆಲೆಯ ಪ್ರಕಾರ ದುರ್ಗೆಯು ಚಾಮುಂಡಿಯ ಅವತಾರವನ್ನು ತಾಳಿ ದುಷ್ಟನಾದ ಮಹಿಷಾಸುರನನ್ನು ಸಂಹರಿಸುತ್ತಾಳೆ. ಮಹಿಷನನ್ನು ಸಂಹರಿಸಲು ದೇವಿ ಉಪಯೋಗಿಸಿದ ಆಯುಧಗಳನ್ನು ಆಕೆ ಮತ್ತೆ ಬಳಸದೇ ಭೂಲೋಕದಲ್ಲಿ ಎಸೆದು ಹೋಗುತ್ತಾಳೆ. ನಂತರ ದೇವಿ ಎಸೆದ ಆಯುಧಗಳನ್ನು ಮನುಷ್ಯರು ತಂದು ಪೂಜಿಸಲು ಆರಂಭಿಸಿದರು ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು ಎನ್ನಲಾಗುತ್ತದೆ.

ದುರ್ಗಾ ದೇವಿಯು ಅರುಣೋದಯ ಕಾಲದಲ್ಲಿ ಶಂಭಾಸುರ, ರಕ್ತಬಬೀಜಾಸುರನನ್ನು ಸಂಹರಿಸಿದಳು ಆದ್ದರಿಂದ ಉದಯದಿಂದ ಆರು ಘಳಿಗೆ ಅಷ್ಟಮೀಯುಕ್ತವಾಗಿದ್ದಲ್ಲಿ ಅದು ಮಹಾನವಮಿ ಎಂದೆನಿಸುತ್ತದೆ. ಆಶ್ವಿನಿ ಮಾಸದ ಶುಕ್ಲ ನವಮಿಯು ರಾತ್ರಿಯವರೆಗೂ ವ್ಯಾಪಿಸಿದ್ದರೆ ಅದು ಕುದುರೆ, ಆನೆ, ಶಸ್ತ್ರ್ರಾಸ್ತ್ರಗಳ ಪೂಜೆಗೆ ಯೋಗ್ಯ ಘಳಿಗೆ ಎನ್ನಲಾಗುತ್ತದೆ. ದ್ವಾಪರ ಯುಗದಲ್ಲಿ ಪಾಂಡವರು 12 ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸ ಮುಗಿಸಿ ಬಂದ ದಿನವೇ ವಿಜಯದಶಮಿ ಎನ್ನಲಾಗುತ್ತದೆ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನೀ ಮರದಲ್ಲಿ ಬಚ್ಚಿಟ್ಟಿರುತ್ತಾರೆ. ಅಜ್ಞಾತವಾಸ ಕಳೆದ ವಿಜಯದಶಮಿಯಂದು ಬನ್ನೀ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿ, ನಂತರ ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು ಎಂಬ ನಂಬಿಕೆ ಇದೆ.

ಆಯುಧ ಪೂಜಾ ವಿಧಿ-ವಿಧಾನ : ದುರ್ಗಾದೇವಿಯು ದುಷ್ಟರ ಸಂಹಾರಕ್ಕಾಗಿ ಅಷ್ಟಭುಜಗಳಿಂದ ಕೂಡಿದವಳಾಗಿ ಅವತರಿಸಿದಳು. ಹಾಗಾಗಿ ಅವಳು ಧರಿಸಿರುವ ಆಯುಧಗಳಾದ ಬಿಲ್ಲು ,ಶೂಲ ,ಬಾಣ ,ಗುರಾಣಿ ,ಕತ್ತಿ ,ಶಂಖ ,ಚಕ್ರ , ಗದೆಗಳನ್ನು ಮಹಾನವಮಿಯಂದು ಪೂಜಿಸಬೇಕು ಎನ್ನಲಾಗುತ್ತದೆ. ಆಯುಧ ಪೂಜೆಯಂದು ಆಯುಧಗಳನ್ನು ಇರಿಸಿ ಕಲಶವನ್ನು ಸ್ಥಾಪಿಸಿ ದುರ್ಗಾ ದೇವಿ ಹಾಗೂ ನರಸಿಂಹ ದೇವರನ್ನು ಶೋಡಷೋಚಾರ ಪೂಜೆಗಳಿಂದ ಪೂಜಿಸಬೇಕು.

ಆಯುಧ ಪೂಜೆಗೆ ಅಗತ್ಯವಾಗಿ ಬೇಕಾಗುವ ಪೂಜಾ ಸಾಮಗ್ರಿಗಳು : ಅರಿಶಿಣ, ಸಿಂಧೂರ ಅಥವಾ ಕುಂಕುಮ, ಅಡಿಕೆ- ವೀಳ್ಯದೆಲೆ, ಮಂಡಕ್ಕಿ,ಬಿಳಿಕುಂಬಳಕಾಯಿ ಅಥವಾ ನಿಂಬೆಹಣ್ಣು,ಬಾಳೆಹಣ್ಣು, ಹಣ್ಣುಗಳು, ಕಬ್ಬುಗಳ ತುಂಡು, ಪುಡಿ ಮಾಡಿದ ಬೆಲ್ಲ,ಕಾಯಿ ತುರಿ ಹಾಗೂ ಒಂದು ತೆಂಗಿನಕಾಯಿ,ಬಾಳೆಎಲೆ, ಅಗರಬತ್ತಿ ಕಪರ್ೂರ ನೈವೇದ್ಯದ ಖಾದ್ಯಗಳು ಇವೆಲ್ಲ ಪೂಜಾ ಸಾಮಗ್ರಿಗಳನ್ನು ಬಳಸುವುದು ತಲೆತಲಾಂತರದಿಂದ ಬಳಸಿಕೊಂಡು ಆಯುಧ ಪೂಜೆಯನ್ನು ಮಾಡುವ ವಾಡಿಕೆಯು ನಡೆದುಕೊಂಡು ಬಂದಿರುತ್ತದೆ.

ಪರಸ್ಪರರ ನಡುವೆ ಶಮೀ ಎಲೆಗಳನ್ನು ವಿನಿಮಯ : ಜನರು ದಸರಾ ಮತ್ತು ವಿಜಯದಶಮಿ ದಿನದಂದು ಶಮೀ ಮರದ ಎಲೆಗಳನ್ನು ವಿತರಿಸುತ್ತಾರೆ. ಈ ಆಚರಣೆಯಲ್ಲಿ, ಶಮೀ ಮರದ ಎಲೆಗಳು ಸಾಂಕೇತಿಕವಾಗಿ ಚಿನ್ನ ಅಥವಾ ಸೋನಾವನ್ನು ಪ್ರತಿನಿಧಿಸುತ್ತವೆ. ಜನರು ಸ್ನೇಹಿತರು, ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ಶಮೀ ಮರದ ಎಲೆಗಳನ್ನು ಅಪರ್ಿಸಿ ದಸರಾ ಶುಭಾಶಯಗಳನ್ನು ಕೋರುತ್ತಾರೆ. ದಸರಾದಲ್ಲಿ ಶಮಿ ಮರದ ಎಲೆಗಳನ್ನು ಏಕೆ ನೀಡಲಾಗುತ್ತದೆ ಎಂಬುದಕ್ಕೆ ಆಸಕ್ತಿದಾಯಕ ಕಥೆಯಿದೆ.

ಗುರು ದಕ್ಷಿಣೆ ಮತ್ತು ಶಮೀ ವೃಕ್ಷದ ಬಗ್ಗೆ ಒಂದು ಕಥೆಯಿದೆ : ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ಕೌತ್ಸ ಎಂಬ ಯುವ ಬ್ರಾಹ್ಮಣ, ಒಮ್ಮೆ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಗುರು ತನ್ನ ಗುರುಗಳಿಗೆ ಗುರು ದಕ್ಷಿನಾವನ್ನು ಸ್ವೀಕರಿಸಲು ಕೇಳಿದನು – ವಿದ್ಯಾಥರ್ಿಗಳು ವರತಂತು ಎಂಬ ಗುರುವಿಗೆ ಅಪರ್ಿಸುವ ಉಡುಗೊರೆಯನ್ನು ಸ್ವೀಕರಿಸಲು. ಅಧ್ಯಯನಗಳು. ಗುರು ಶ್ರೀ ವರತಂತು ಮೊದಮೊದಲು ತನಗೆ ದಕ್ಷಿಣೆ ಬೇಡ ಎಂದಿದ್ದರು. ಆದರೆ ಯುವಕ ಕೌತ್ಸನು ತಾನು ದಕ್ಷಿಣೆಯನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದನು. ಕೌತ್ಸವನ್ನು ತೊಡೆದುಹಾಕಲು ಗುರು ವರತಂತು 14 ಕೋಟಿ (140 ಮಿಲಿಯನ್) ಚಿನ್ನದ ನಾಣ್ಯಗಳನ್ನು ಕೇಳಿದರು. ಕಲಿಸಿದ ಪ್ರತಿ ವಿಷಯಕ್ಕೆ ನೂರು ಮಿಲಿಯನ್. ನಂತರ ವಿದ್ಯಾರ್ಥಿಯು ಅಯೋಧ್ಯೆಯನ್ನು ಆಳುತ್ತಿದ್ದ ಶ್ರೀ ರಾಮಚಂದ್ರ ದೇವರ ಬಳಿಗೆ ಹೋಗಿ ತನ್ನ ಗುರು ದಕ್ಷಿಣೆಯನ್ನು ಪಾವತಿಸಲು ಬೇಕಾದ ಚಿನ್ನದ ನಾಣ್ಯಗಳನ್ನು ಕೇಳಿದನು. ಶ್ರೀ ರಾಮಚಂದ್ರನು ಕೌತ್ಸನಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದನು ಮತ್ತು ಶಮೀಯ ಬಳಿ ಕಾಯಲು ಹೇಳಿದನು (ರಾಮಚಂದ್ರನಿಗೆ ಶಮೀ ಮರವು ಪ್ರಿಯವಾಗಿದೆ). ಮೂರು ದಿನಗಳಲ್ಲಿ ಶ್ರೀರಾಮಚಂದ್ರನು ಭಗವಾನ್ ಕುಬೇರನ ಸಹಾಯದಿಂದ ದೇವರ ಸಂಪತ್ತನ್ನು ಶಮೀ ವೃಕ್ಷದ ಎಲೆಗಳಿಂದ ಚಿನ್ನದ ನಾಣ್ಯಗಳನ್ನು ಸುರಿಸಿದನು. ಮರಗಳ ಎಲೆಗಳು ಚಿನ್ನದ ನಾಣ್ಯಗಳಾದವು. ಕೌತ್ಸನು ನಾಣ್ಯಗಳನ್ನು ಸಂಗ್ರಹಿಸಿ 140 ಮಿಲಿಯನ್ ಚಿನ್ನದ ನಾಣ್ಯಗಳನ್ನು ಗುರು ಶ್ರೀ ವರತಂತುಗೆ ನೀಡಿದನು. ಉಳಿದ ನಾಣ್ಯಗಳನ್ನು ಕೌತ್ಸದಿಂದ ನಿರ್ಗತಿಕರಿಗೆ ವಿತರಿಸಲಾಯಿತು. ಇದು ನಡೆದಿದ್ದು ದಸರಾ ದಿನದಂದು. ಈ ಘಟನೆಯ ಸ್ಮರಣಾರ್ಥ ಇಂದಿಗೂ ಜನರು ಶಮಿ ಮರದ ಎಲೆಗಳನ್ನು ಸಂಗ್ರಹಿಸಿ ಅದನ್ನು ಚಿನ್ನವಾಗಿ ಅಪರ್ಿಸುತ್ತಾರೆ.

ವಿಜಯದಶಮಿಯ ವೈವಿಧ್ಯೆಮಯ ಆಚರಣೆಗಳು : ಉತ್ತರ ಭಾರತದಲ್ಲಿ ಆಶ್ವಯುಜ ಮಾಸದ ಮೊದಲ ದಿನದಂದು ಬಾರ್ಲಿ ಬೀಜಗಳನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿಡುತ್ತಾರೆ. ವಿಜಯದಶಮಿಯ ದಿನ ಮೊಳಕೆಗಳು ಬಂದಿರುವ ಈ ಬಾಲರ್ಿಗಳನ್ನು ತೆಗೆದುಕೊಂಡು ಹೋಗಿ ನೆಡುತ್ತಾರೆ. ಅವರ ಪ್ರಕಾರ ಇವು ಅದೃಷ್ಟವನ್ನು ತರುವ ಸಸಿಗಳಾಗಿರುತ್ತವೆಯಂತೆ. ಇವನ್ನು “ನೊರಾತ್ರಗಳು” ಎಂದು ಕರೆಯುತ್ತಾರೆ. ಅಂದರೆ, ಒಂಬತ್ತು ರಾತ್ರಿಯಷ್ಟು ವಯಸ್ಸಾದವು ಎಂದು ಹೆಸರು.

ಶ್ರೀ ದುರ್ಗಾ ಸಹಸ್ರನಾಮ: ಧೈರ್ಯ, ಸಮೃದ್ಧಿಗಾಗಿ ತಪ್ಪದೇ ಪಠಿಸಿ ಶ್ರೀ ದುಗರ್ಾ ಸಹಸ್ರನಾಮ..!ದಕ್ಷಿಣ ಭಾರತದಲ್ಲಿ ವಿಜಯದಶಮಿಯನ್ನು ಚಾಮುಂಡೇಶ್ವರಿ ಅಥವಾ ದುಗರ್ಾ ದೇವಿಯ ಆರಾಧನೆ ಮಾಡಲು ಆಚರಿಸುತ್ತಾರೆ. ದೇವಾನುದೇವತೆಗಳ ಬಣ್ಣ ಬಣ್ಣದ ಬೊಂಬೆಗಳನ್ನು ತಯಾರಿಸಿ ಮನೆಗಳಲ್ಲಿ ಇಡುತ್ತಾರೆ. ಇದನ್ನು ತಮಿಳು ನಾಡಿನಲ್ಲಿ “ಗೋಲು” ಎಂದು, ಕರ್ನಾಟಕದಲ್ಲಿ “ಗೊಂಬೆ ಹಬ್ಬ” ಎಂದು ಕರೆಯುತ್ತಾರೆ. ಆತ್ಮವನ್ನೇ ಜಾಗೃತಗೊಳಿಸುತ್ತೆ ಪೂಜಾ ಆರತಿ..! ಆರತಿಯ ಪ್ರಯೋಜನ ಗೊತ್ತೇ..? : ಪೂರ್ವ ಭಾರತ ಮತ್ತು ಬಂಗಾಳದಲ್ಲಿ ವಿಜಯದಶಮಿಯನ್ನು, ಐದು ದಿನಗಳ ದುಗರ್ಾ ಪೂಜೆಯ ಪರಾಕಾಷ್ಠೆಯ ದಿನವಾಗಿ ಆಚರಿಸಲಾಗುತ್ತದೆ. ಐದು ದಿನಗಳ ಮಾತೆ ದುರ್ಗೆಯ ವಿಗ್ರಹವನ್ನು ಅದ್ಧೂರಿಯಾಗಿ ಆರಾಧನೆ ಮಾಡುತ್ತಾರೆ. ವಿಜಯದಶಮಿಯ ದಿನದಂದು, ದುಗರ್ಾ ದೇವಿಯು ಹಿಮಾಲಯದಲ್ಲಿರುವ ತನ್ನ ಪತಿ ಪರಮೇಶ್ವರನ ಬಳಿಗೆ ತೆರಳಲು ಬೀಳ್ಕೊಡುಗೆಯನ್ನು ಪಡೆಯುತ್ತಾಳೆ ಎಂಬ ನಂಬಿಕೆ ಇದೆ. ಈ ದಿನ ದುಗರ್ಾ ದೇವಿಯ ವಿಗ್ರಹವನ್ನು ಗಂಗೆಯಲ್ಲಿ ವಿಸರ್ಜಿಸಲಾಗುತ್ತದೆ. ಪರಸ್ಪರ ಎಲ್ಲರೂ ಸಿಹಿಯನ್ನು ಹಂಚಿಕೊಂಡು ಶುಭಾಶಯಗಳ ವಿನಿಮಯವನ್ನು ಮಾಡಿಕೊಳ್ಳುತ್ತಾರೆ. ಕಿರಿಯರು ಈ ಸಂದರ್ಭದಲ್ಲಿ ಹಿರಿಯರ ಆಶೀರ್ವಾದವನ್ನು ಪಡೆಯುತ್ತಾರೆ ಮಹಾನವಮಿಯ ಆಯುಧ ಪೂಜೆ ಐತಿಹಾಸಿಕ ಹಿನ್ನೆಲೆಯ ಮಹತ್ವ ಹಾಗೂ ಪೂಜಾ ವಿಧಾನ (ಇಂದು ನಾಡಿನಾದ್ಯೆಂತ ಮಹಾನವಮಿ, ಆಯುಧಪೂಜೆ ಹಾಗೂ ವಿಜಯದಶಮಿಯ ಶಮೀ ವಿನಿಮಯ ಮಾಡಿಕೊಳ್ಳುವ ಹಬ್ಬದ ಆಚರಣೆಯ ಪ್ರಯುಕ್ತ ವಿಶೇಷ ಲೇಖನ) ಮಹಾನವಮಿ ಅಥವಾ ಆಯುಧಪೂಜೆಯನ್ನು ನವರಾತ್ರಿಯ 9ನೇ ದಿನ ಆಚರಿಸುತ್ತಾರೆ ಆಶ್ವಿಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಈ ದಿನ ಹೆಸರೇ ಹೇಳುವಂತೆ ಆಯುಧಗಳಿಗೆ ಪೂಜೆ ಮಾಡುವ ದಿನ. ಹಿಂದೆ ಮೈಸೂರಿನ ಮಹಾರಾಜರು ಮಹಾನವಮಿಯ ದಿನ ಎಲ್ಲಾ ಆಯುಧಗಳನ್ನು, ತಮ್ಮ ಪಟ್ಟದ ಕತ್ತಿಯನ್ನೂ ಸಹ ತೆಗೆದಿಟ್ಟು ಪೂಜೆ ಮಾಡುತ್ತಿದ್ದರು. ಈ ದಿನ ಅವುಗಳಿಗೆ ವಿರಾಮ/ವಿಶ್ರಾಂತಿ/ರಜಾ ದಿನ. ಈ ಆಯುಧಗಳು ನಮ್ಮನ್ನು ವರುಷವೆಲ್ಲ ಕಾಪಾಡಿವೆ. ಈ ಒಂದು ದಿನ ಅವುಗಳಿಗೆ ವಿರಾಮ ಕೊಟ್ಟು, ಅವುಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ವರ್ಷವೂ ಹೀಗೆ ನಮ್ಮನ್ನು ಕಾಪಾಡಲಿ ಎಂದು ಅವುಗಳಿಗೆ ಪೂಜೆ ಮಾಡುತ್ತಿದ್ದರು. ರಾಜರ ಆಳ್ವಿಕೆ ಮುಗಿದರೂ, ಈ ಆಯುಧ ಪೂಜೆ ಇಂದಿಗೂ ಎಲ್ಲರೂ ಆಚರಿಸುತ್ತಾರೆ. ಅದರಂತೆ ನಾಡಿನ ಸಮಸ್ತ ಭಕ್ತವೃಂದದವರು ತಮ್ಮ ವೃತ್ತಿ ಕೌಶಲ್ಯತೆಯಲ್ಲಿ ಬಳಸಲ್ಪಡುವ ಪ್ರತಿಯೊಂದು ಆಯುಧವನ್ನು ಹಾಗೂ ವಾಹನಾಧಿಗಳನ್ನು ಆಯುಧ ಪೂಜೆಯ ದಿನದಂದು ಶುಭ್ರಗೊಳಿಸಿ ಪೂಜಿಸುವ ವಾಡಿಕೆಯಿದೆ. ಆಯುಧ ಪೂಜೆ ಪೌರಾಣಿಕ ಹಿನ್ನೆಲೆಯ ಮಹತ್ವ : ಪೌರಾಣಿಕ ಹಿನ್ನೆಲೆಯ ಪ್ರಕಾರ ದುರ್ಗೆಯು ಚಾಮುಂಡಿಯ ಅವತಾರವನ್ನು ತಾಳಿ ದುಷ್ಟನಾದ ಮಹಿಷಾಸುರನನ್ನು ಸಂಹರಿಸುತ್ತಾಳೆ. ಮಹಿಷನನ್ನು ಸಂಹರಿಸಲು ದೇವಿ ಉಪಯೋಗಿಸಿದ ಆಯುಧಗಳನ್ನು ಆಕೆ ಮತ್ತೆ ಬಳಸದೇ ಭೂಲೋಕದಲ್ಲಿ ಎಸೆದು ಹೋಗುತ್ತಾಳೆ. ನಂತರ ದೇವಿ ಎಸೆದ ಆಯುಧಗಳನ್ನು ಮನುಷ್ಯರು ತಂದು ಪೂಜಿಸಲು ಆರಂಭಿಸಿದರು ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು ಎನ್ನಲಾಗುತ್ತದೆ. ದುಗರ್ಾ ದೇವಿಯು ಅರುಣೋದಯ ಕಾಲದಲ್ಲಿ ಶಂಭಾಸುರ, ರಕ್ತಬಬೀಜಾಸುರನನ್ನು ಸಂಹರಿಸಿದಳು ಆದ್ದರಿಂದ ಉದಯದಿಂದ ಆರು ಘಳಿಗೆ ಅಷ್ಟಮೀಯುಕ್ತವಾಗಿದ್ದಲ್ಲಿ ಅದು ಮಹಾನವಮಿ ಎಂದೆನಿಸುತ್ತದೆ. ಆಶ್ವಿನಿ ಮಾಸದ ಶುಕ್ಲ ನವಮಿಯು ರಾತ್ರಿಯವರೆಗೂ ವ್ಯಾಪಿಸಿದ್ದರೆ ಅದು ಕುದುರೆ, ಆನೆ, ಶಸ್ತ್ರ್ರಾಸ್ತ್ರಗಳ ಪೂಜೆಗೆ ಯೋಗ್ಯ ಘಳಿಗೆ ಎನ್ನಲಾಗುತ್ತದೆ. ದ್ವಾಪರ ಯುಗದಲ್ಲಿ ಪಾಂಡವರು 12 ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸ ಮುಗಿಸಿ ಬಂದ ದಿನವೇ ವಿಜಯದಶಮಿ ಎನ್ನಲಾಗುತ್ತದೆ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನೀ ಮರದಲ್ಲಿ ಬಚ್ಚಿಟ್ಟಿರುತ್ತಾರೆ. ಅಜ್ಞಾತವಾಸ ಕಳೆದ ವಿಜಯದಶಮಿಯಂದು ಬನ್ನೀ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿ, ನಂತರ ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು ಎಂಬ ನಂಬಿಕೆ ಇದೆ.

ಆತ್ಮವನ್ನೇ ಜಾಗೃತಗೊಳಿಸುತ್ತೆ ಪೂಜಾ ಆರತಿ..! ಆರತಿಯ ಪ್ರಯೋಜನ ಗೊತ್ತೇ..? : ಪೂರ್ವ ಭಾರತ ಮತ್ತು ಬಂಗಾಳದಲ್ಲಿ ವಿಜಯದಶಮಿಯನ್ನು, ಐದು ದಿನಗಳ ದುಗರ್ಾ ಪೂಜೆಯ ಪರಾಕಾಷ್ಠೆಯ ದಿನವಾಗಿ ಆಚರಿಸಲಾಗುತ್ತದೆ. ಐದು ದಿನಗಳ ಮಾತೆ ದುಗರ್ೆಯ ವಿಗ್ರಹವನ್ನು ಅದ್ಧೂರಿಯಾಗಿ ಆರಾಧನೆ ಮಾಡುತ್ತಾರೆ. ವಿಜಯದಶಮಿಯ ದಿನದಂದು, ದುಗರ್ಾ ದೇವಿಯು ಹಿಮಾಲಯದಲ್ಲಿರುವ ತನ್ನ ಪತಿ ಪರಮೇಶ್ವರನ ಬಳಿಗೆ ತೆರಳಲು ಬೀಳ್ಕೊಡುಗೆಯನ್ನು ಪಡೆಯುತ್ತಾಳೆ ಎಂಬ ನಂಬಿಕೆ ಇದೆ. ಈ ದಿನ ದುರ್ಗಾ ದೇವಿಯ ವಿಗ್ರಹವನ್ನು ಗಂಗೆಯಲ್ಲಿ ವಿಸರ್ಜಿಸಲಾಗುತ್ತದೆ. ಪರಸ್ಪರ ಎಲ್ಲರೂ ಸಿಹಿಯನ್ನು ಹಂಚಿಕೊಂಡು ಶುಭಾಶಯಗಳ ವಿನಿಮಯವನ್ನು ಮಾಡಿಕೊಳ್ಳುತ್ತಾರೆ. ಕಿರಿಯರು ಈ ಸಂದರ್ಭದಲ್ಲಿ ಹಿರಿಯರ ಆಶೀರ್ವಾದವನ್ನು ಪಡೆಯುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular