ಬೆಂಗಳೂರು : ಸರಕಾರ ಕೊಡುವ ಬಿಟ್ಟಿ ಭಾಗ್ಯಗಳಲ್ಲಿ ರಾಜ್ಯದ ಜನತೆಗೆ ಮತ್ತೊಂದು ಭಾಗ್ಯ ಸಿಗಲಿದೆ ಅದುವೇ ಕತ್ತಲೆ ಭಾಗ್ಯ. ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಅನಿವಾರ್ಯ. ವಿದ್ಯುತ್ ಬೇಡಿಕೆ ಪ್ರತಿದಿನ ಏರಿಕೆ ಕಂಡಿದ್ದು. ಉತ್ಪಾದನೆ ಇಳಿಮುಖಗೊಂಡಿದೆ. ಸರ್ಕಾರ ಹೆಚ್ಚುವರಿ ವಿದ್ಯುತ್ ಖರೀದಿಗೆ ಮುಂದಾಗಿದೆ. ಈಗ ಪ್ರತಿ ಯೂನಿಟ್ ಖರೀದಿ ದರ ಸರಾಸರಿ 4ರೂ. ಇರುವುದು14-18 ರೂ. ತಲುಪಲಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ ದಿನದಲ್ಲಿ ೧ ಗಂಟೆಯೂ ಮೂರು ಫೇಸ್ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದು ಸಾಲದು ಎಂಬAತೆ ಕೇಂದ್ರಸರ್ಕಾರ ರಾಜ್ಯಕ್ಕೆ ನೀಡುವ ವಿದ್ಯುತ್ ಪಾಲನ್ನೂ ಕಡಿತಗೊಳಿಸಿದೆ.
ರಾಜ್ಯದಲ್ಲಿ 1500 ರಿಂದ 2000 ಮೆಗಾವ್ಯಾಟ್ ಕೊರತೆ ಉಂಟಾಗಿದೆ. ವಿದ್ಯುತ್ ಕೊರತೆಯ ತೀವ್ರತೆಯನ್ನು ಪರಿಗಣಿಸಿ ವಿದ್ಯುತ್ ಇಲಾಖೆ ಎಲ್ಲ ಕಂಪನಿಗಳ ಮುಖ್ಯಎಂಜಿನಿಯರ್‌ಗಳಿಗೆ ಪ್ರತಿ ಜಿಲ್ಲೆಯಲ್ಲೂ ವಿದ್ಯುತ್ ವಿತರಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದೆ. ಇಂಥ ತುರ್ತು ಸಂದರ್ಭ ಹಿAದೆ ಎಂದೂ ಬಂದಿರಲಿಲ್ಲ.
ಈವರ್ಷ ಮಳೆ ಕಡಿಮೆ ಬಂದಿರುವುದರಿAದ ಜಲ ವಿದ್ಯುತ್ ಕೇಂದ್ರಗಳಲ್ಲಿ ನೀರಿನ ಸಂಗ್ರಹ ಇಳಿಮುಖಗೊoಡಿದೆ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ೧೫೦೧೨ ಮೆಗಾವ್ಯಾಟ್ ತಲುಪಿದೆ. ಇದಕ್ಕೆ ಅನುಗುಣವಾಗಿ ಸೋಲಾರ್ ಮತ್ತು ಪವನ ವಿದ್ಯುತ್ ಉತ್ಪಾದನೆ ಅಧಿಕಗೊಂಡಿಲ್ಲ. ವಾಡಿಕೆ ಮಳೆಯಲ್ಲಿ ಶೇ.೨೮ ರಷ್ಟು ಕಡಿಮೆಯಾಗಿದೆ. ಇದರಿಂದ ೩ ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಇಳಿಮುಖಗೊಂಡಿದೆ. ರಾಜ್ಯದಲ್ಲಿ ೩೪ ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಮುಖಗೊಂಡಿರುವುದರಿAದ ರೈತರು ತಮ್ಮ ಬಾವಿಯಲ್ಲಿರುವ ನೀರನ್ನೇ ಹೆಚ್ಚು ಬಳಸಿಕೊಂಡು ತಮ್ಮ ಬೆಳೆಗಳನ್ನು ಕಾಪಾಡಲು ವಿದ್ಯುತ್ ಬಳಕೆಗೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಹೆಚ್ಚು ವಿದ್ಯುತ್ ನೀಡುವುದು ಅನಿವಾರ್ಯವಾಗಿದೆ.
ಆಗಸ್ಟ್ನಿಂದ ಮನೆಬಳಕೆಗೆ ೨೦೦ ಯೂನಿಟ್‌ವಿದ್ಯುತ್ ಉಚಿತ ಎಂದು ಸರ್ಕಾರ ಘೋಷಿಸಿದ ಮೇಲೆ ಮನೆಬಳಕೆಯಲ್ಲೂ ಅಧಿಕಗೊಂಡಿದೆ. ಹೀಗಾಗಿ ಈಗ ದಿನದ ಬಳಕೆಯಲ್ಲಿ ಅತಿ ಹೆಚ್ಚು ಎಂದರೆ ೧೬೯೫೦ ಮೆಗಾವ್ಯಾಟ್ ತಲುಪಿದೆ. ಅಲ್ಲದೆ ದಿನದ ಬಳಕೆ ಈಗ ೨೫೮ ದಶಲಕ್ಷ ಯೂನಿಟ್ ತಲುಪಿದ್ದು, ಇದು ಇನ್ನೂ ಅಧಿಕಗೊಳ್ಳುವ ಆತಂಕ ಮೂಡಿದೆ. ಪ್ರತಿದಿನ ೪೦-೫೦ ದಶಲಕ್ಷ ಯೂನಿಟ್ ಕೊರತೆ ಕಂಡು ಬಂದಿದೆ.
ಹೆಚ್ಚುವರಿ ವಿದ್ಯುತ್ ಖರೀದಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅನುಮತಿ ಪಡೆಯಲಾಗಿದೆ. ಹೆಚ್ಚುವರಿ ವಿದ್ಯುತ್ ಖರೀದಿಯ ದರವನ್ನೂ ಕೆಇಅರ್‌ಸಿ ಸೂಚಿಸಿದೆ. ಈಗ ಹೆಚ್ಚುವರಿ ವಿದ್ಯುತ್ ಖರೀದಿಗೆ ಪ್ರತಿ ಯೂನಿಟ್‌ಗೆ ೧೪-೧೮ರೂ. ನೀಡಬೇಕು. ಜಲ ವಿದ್ಯುತ್ ಕೇಂದ್ರ ದಿಂದ ಪ್ರತಿದಿನ ೧೧ ದಶಲಕ್ಷ ಯೂನಿಟ್ ಪಡೆಯಲು ಮಾತ್ರ ಸಾಧ್ಯವಿದೆ.ವಿದ್ಯುತ್ ಕಾಯ್ದೆ ಕಲಂ ೧೧ ರಂತೆ ಮುಕ್ತ ಮಾರುಕಟ್ಟೆಗೆ ವಿದ್ಯುತ್ ಮಾರಾಟ ಮಾಡುವವರಿಗೆ ಸಹಕರಿಸುವಂತೆ ಕೋರಲಾಗಿದೆ.
ರಾಜ್ಯದಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್ ಕೇಂದ್ರಗಳಿAದ ಒಟ್ಟು ೪೮ದಶದಲಕ್ಷ ಯೂನಿಟ್
ಪಡೆಯಲಾಗುತ್ತಿದ್ದು, ಇದನ್ನು ಹೆಚ್ಚಿಸಬೇಕು ಎಂದರೆ ಹೆಚ್ಚುವರಿ ಕಲ್ಲಿದ್ದಲು ಖರೀದಿ ಮಾಡಬೇಕು. ಈಗ ಸ್ವದೇಶಿ ಕಲ್ಲಿದ್ದಲಿನ ಗುಣಮಟ್ಟ ಉತ್ತಮವಾಗಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ. ವಿದೇಶಿ ಕಲ್ಲಿದ್ದಲು ಎಂದರೆ ಸ್ವದೇಶಿ ಕಲ್ಲಿದ್ದಲಿಗಿಂತ ಒAದೂವರೆ ಪಟ್ಟು ಹೆಚ್ಚು ಹಣ ನೀಡಬೇಕು ಎಂದು ತಜ್ಞರು ತಿಳಿಸಿದ್ದಾರೆ. ರಾಜ್ಯ ಕತ್ತಲಲ್ಲಿ ಮುಳುಗಬಾರದು ಎಂದರೆ ಹೆಚ್ಚುವರಿ ಹಣ ನೀಡಿ ಕಲ್ಲಿದ್ದಲು ಖರೀದಿ ಅನಿವಾರ್ಯ. ಕೇಂದ್ರದಲ್ಲಿ ಗಣಿ ಸಚಿವರು ಕರ್ನಾಟಕದವರೇ ಆಗಿರುವುದರಿಂದ ಅವರು ರಾಜ್ಯದ ಸಂಕಷ್ಟಕ್ಕೆ ನೆರವಾಗಬಹುದು ಎಂದು
ರಾಜ್ಯದ ಅಧಿಕಾರಿಗಳು ಆಶಿಸಿದ್ದಾರೆ.
ಇಂದಿನ ಬಳಕೆ 258.81 ದ.ಲ ಯೂನಿಟ್
ಕೊರತೆ 40-50 ದ.ಲ ಯೂನಿಟ್
ಹೆಚ್ಚುವರಿ ವಿದ್ಯುತ್ ಖರೀದಿಯ ದರ
ಪ್ರತಿ ಯೂನಿಟ್‌ಗೆ 14ರಿಂದ 18 ರೂ.
ರಾಜ್ಯದಲ್ಲಿರುವ ಮೂರು ಜಲ ವಿದ್ಯುತ್
ಕೇಂದ್ರಗಳಲ್ಲಿನ ನೀರು ಫೆಬ್ರವರಿಗೆ ಖಾಲಿ