ಕೈದಿ
ಸಂಖ್ಯೆ
ಬೆಂಗಳೂರು ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಸಲ ಬಂಧನವಾಗಿ ಪರಪ್ಪನ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಕೈದಿ
ಸಂಖ್ಯೆ 7314ಹಾಗೂ ಗೆಳತಿ ಪವಿತ್ರಾ ಗೌಡಗೆ ಕೈದಿ ನಂ. 7313 ಅನ್ನು ನೀಡಲಾಗಿದೆ.
ಗುರುವಾರ ರಾತ್ರಿ ಜೈಲಿನಲ್ಲಿ ಪವಿತ್ರಾ ಗೌಡ ಏನೂ ತಿನ್ನದೆ ಅಳುತ್ತ ಕುಳಿತಿದ್ದು, ದರ್ಶನ್ ಎಂದಿನAತೆ ಇದ್ದರು ಎಂದು ಜೈಲಿನ ಮೂಲಗಳು ತಿಳಿಸಿವೆ. ದರ್ಶನ್, ನಾಗರಾಜ್,ಲಕ್ಷ್ಮಣ್ , ಪ್ರದೋಶ್‌ರನ್ನು ಒಂದೇ ಬ್ಯಾರಕ್‌ನಲ್ಲಿಇಡಲಾಗಿದ್ದು, ಪವಿತ್ರಾ ಗೌಡ ಅವರನ್ನು ಜೈಲಿನ ಮಹಿಳಾ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಪ್ರದೋಶ್‌ಗೆ 7317, ನಾಗರಾಜ್‌ಗೆ 7315 ಹಾಗೂ ಲಕ್ಷ್ಮಣ್‌ಗೆ 7316 ಕೈದಿ ಸಂಖ್ಯೆ ನೀಡಲಾಗಿದೆ. ಕಳೆದ ಬಾರಿ ದರ್ಶನ್ ಬಂಧನಕ್ಕೆ ಒಳಗಾದಾಗ ವಿಚಾರಣಾಧೀನ ಕೈದಿ ಸಂಖ್ಯೆ 6101 ನೀಡಲಾಗಿತ್ತು.
ಬಿಕ್ಕಿ ಬಿಕ್ಕಿ ಅತ್ತ ಪ್ರದೋಶ್ : ಸಾಫ್ಟ್ವೇರ್ ಇಂಜಿನಿಯರ್ ಪ್ರದೋಶ್ ಕೂಡ ಎರಡನೇ ಬಾರಿ ಜೈಲು ಸೇರಿದ್ದು, ರಾತ್ರಿ ಬ್ಯಾರಕ್‌ಗೆ ಹೋದ ಕೂಡಲೇ ದರ್ಶನ್, ನಾಗರಾಜ್, ಲಕ್ಷ್ಮಣ್ ಮಾತನಾಡಿ ಕೊಂಡು ಕುಳಿತಿದ್ದರೆ, ಪ್ರದೋಶ್ ಯಾರೊಟ್ಟಿಗೂ ಮಾತನಾಡದೇ ಮೂಲೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದರು ಎಂದು ತಿಳಿದು ಬಂದಿದೆ.
ಊಟವೇ ಮಾಡದ ಪವಿತ್ರಾ : ರಾತ್ರಿ ಬ್ಯಾರಕ್‌ನಲ್ಲಿದ್ದ ಪವಿತ್ರಗೌಡ ಅವರಿಗೆ ಜೈಲು ಸಿಬ್ಬಂದಿ ಚಪಾತಿ, ಅನ್ನ ಸಾಂಬರ್ ಕೊಟ್ಟರು. ಎಡಗೈಯಿಂದ ತಟ್ಟೆಯನ್ನು ದೂರ ಸರಿಸಿದ ಪವಿತ್ರ ಊಟವಿಲ್ಲದೇ ಅಳುತ್ತ ಕುಳಿತಿದ್ದರು ಎಂದು ಮೂಲಗಳು ತಿಳಿಸಿವೆ.