Thursday, September 18, 2025
Flats for sale
Homeರಾಜ್ಯಬೆಂಗಳೂರು : ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್ ನ್ಯಾಯಾಂಗ ತನಿಖೆಗೆ ಆಗ್ರಹ..!

ಬೆಂಗಳೂರು : ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್ ನ್ಯಾಯಾಂಗ ತನಿಖೆಗೆ ಆಗ್ರಹ..!

ಬೆಂಗಳೂರು : ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್ಪ್ರ ಕರಣವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯಂತೆ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ನಕ್ಸಲ್ಶ ರಣಾಗತಿ ಮತ್ತು ಪುನರ್ವಸತಿ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಪಾರ್ವತೀಶ ಬಿಳಿದಾಳೆ, ಕೆ.ಪಿ.ಶ್ರೀಪಾಲ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಪರಧಿಯಿಂದಾಚೆ ಪೊಲೀಸ್ ಪಡೆಗಳಿಂದ ನಡೆಯುವ ಎನ್‌ಕೌಂಟರ್‌ಗಳ ಕುರಿತು ಪಾರದರ್ಶಕ ತನಿಖೆ ನಡೆಸುವುದು ಸರ್ಕಾರದ ಹೊಣೆ, ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶವನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದರು.

ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ನಿಷೇಧಿತ ಸಿಪಿಐಎಂಎಲ್-ಮಾವೋವಾದಿ ಪಕ್ಷದ ಕಾರ್ಯಕರ್ತರ ಮನವೊಲಿಸಿ ಮುಖ್ಯವಾಮಹಿನಿಗೆ ಕರೆ ತರುವ ಪ್ರಯತ್ನವನ್ನು ಸಮಿತಿ ಮಾಡುತ್ತಿದೆ. ಜೀವಹಾನಿಯಾಗದಂತೆ ಈ ಸಮಸ್ಯೆಯನ್ನು ಬಗೆಹರಿಸಲು ನಾವು ಬದ್ಧವಾಗಿದ್ದೇವೆ. ಇಲ್ಲಿರುವ ಆದಿವಾಸಿಗಳು, ಕೃಷಿಕರ ಸಮಸ್ಯೆಗಳು ಮತ್ತು ಆತಂಕಗಳನ್ನು ನಿವಾರಿಸುವ ಮೂಲಕ ಮಾವೋವಾದಿ ನಕ್ಸಲರಿಗೆ ಹೋರಾಡಲು ವಿಷಯಗಳಿರದಂತೆ ಸರ್ಕಾರ ನೋಡಿಕೊಳ್ಳಬೇಕೆಂದರು.

ಸಮಿತಿಯು ಈಗಾಗಲೇ ವಿಕ್ರಂಗೌಡ ಅವರ ಎನ್‌ಕೌಂಟರ್ ನಡೆದ ಸ್ಥಳ ಸೇರಿದಂತೆ ಹೆಬ್ರಿ ತಾಲೂಕಿನ ಹಲವು ಸ್ಥಳಗಳಿಗೆ ಭೇಟಿ ನೀಡಿದೆ. ಅಲ್ಲಿರುವ ಆದಿವಾಸಿಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಕೊರತೆಗಳ ಲಾಭಪಡೆದು ಕೆಲ ತೀವ್ರಗಾಮಿ ಸಂಘಟನೆಗಳು ಅಲ್ಲಲ್ಲಿ ಸಂಚರಿಸುತ್ತಿರಬಹುದು. ಸರ್ಕಾರ ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದರು. ಅರಣ್ಯದೊಳಗೆ ರೈತರು ಮತ್ತು ಆದಿವಾಸಿಗಳ ನೆಲೆಗಳಲ್ಲಿ ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಅಗತ್ಯ ಔಷಧಗಳನ್ನು ಉಚಿತವಾಗಿ ಒದಗಿಸಬೇಕು. ಆದಿವಾಸಿಗಳು ಹಾಗೂ ರೈತ ಕುಟುಂಬದವರ ಮಕ್ಕಳ ಶಿಕ್ಷಣ, ಹಾಸ್ಟೆಲ್, ಕೌಶಲ್ಯ ತರಬೇತಿಗೆ ದೂರದ ತಾಲೂಕು ಜಿಲ್ಲಾ ಕೇಂದ್ರಗಳ ಬದಲಾಗಿ ಆದಷ್ಟೂ ಅವರವರ ವಾಸಸ್ಥಳಕ್ಕೆ ಸಮೀಪದ ದೊಡ್ಡ ಗ್ರಾಮಗಳಲ್ಲಿ ಈ ಸೌಲಭ್ಯ ಕಲ್ಪಿಸಬೇಕೆಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular