Wednesday, September 17, 2025
Flats for sale
Homeಜಿಲ್ಲೆಬೆಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣ : ದೆಹಲಿಯಲ್ಲೇ ಗ್ಯಾಂಗ್ ನಿಂದ ಡೀಲ್ ಕುದುರಿಸಿದ್ದ ಮಾಸ್ಕ್...

ಬೆಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣ : ದೆಹಲಿಯಲ್ಲೇ ಗ್ಯಾಂಗ್ ನಿಂದ ಡೀಲ್ ಕುದುರಿಸಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ,ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ..!

ಬೆಂಗಳೂರು : ಧರ್ಮ ಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಬಗ್ಗೆ ಬುರುಡೆ ಬಿಟ್ಟಿದ್ದ ಚಿನ್ನಯ್ಯ ಮತ್ತವರ ತಂಡದಿಂದ ಒಂದೊಂದೇ ರಹಸ್ಯಗಳು ಬಯಲಿಗೆ ಬರುತ್ತಿವೆ. ಚಿನ್ನಯ್ಯ ತಂದು ಕೊಟ್ಟಿದ್ದ ಬುರುಡೆ ರಹಸ್ಯ ಎಲ್ಲಿಂದ ಬಂತು ಎಂಬ ಯಕ್ಷ ಪ್ರಶ್ನೆಗೆ ಕಡೆಗೂ ಉತ್ತರ ಲಭಿಸಿದೆ. ಇದು ದೇಶದ ರಾಜಧಾನಿ ದೆಹಲಿಯಲ್ಲಿ ವ್ಯವಹಾರ ಕುದಿರಿಸಿರುವ ಬಗ್ಗೆ ಸ್ಫೋಟಕ ಮಾಹಿತಿ ಲಬ್ಯವಾಗಿದೆ.

ಮೊನ್ನೆಯಷ್ಟೇ ಚಿನ್ನಯ್ಯನನ್ನು ವಿಶೇಷ ಅಧಿಕಾರಿಗಳ ತಂಡ 10 ದಿನಗಳ ಕಾಲ ಕಸ್ಟಡಿಗೆ ಪಡೆದಿತ್ತು.ಈ ಹಿನ್ನೆಲೆಯಲ್ಲಿ ಚಇನ್ನಯ್ಯನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಹಲವು ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ. ಚಿನ್ನಯ್ಯ ತಂದಿದ್ದ ಬುರುಡೆ ಧರ್ಮಸ್ಥಳ ಪ್ರವೇಶಿಸುವ ಮುನ್ನವೇ ದೆಹಲಿಗೆ ತಂದಿದ್ದ ಮಾಹಿತಿ ಗೊತ್ತಾಗಿದೆ. ಈ ಷಡ್ಯಂತ್ರದ ಗ್ಯಾಂಗ್ ಚಿನ್ನಯ್ಯನ ಸಮೇತ ಬುರುಡೆಯನ್ನು ದೆಹಲಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನು ಭೇಟಿಯಾಗಿ ಬುರುಡೆಯನ್ನು ತೋರಿಸಿದ್ದಾನೆ. ಅಲ್ಲಿ ಬುರುಡೆ ಸಮೇತ ಇಡೀ ಪ್ರಕರಣದ ಕತೆಯನ್ನು ಹೇಳಲಾಗಿತ್ತು. ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಕುದುರಿಸಲಾಗಿತ್ತು ಎಂಬ ರಹಸ್ಯ ಮಾಹಿತಿಯನ್ನು ಚಿನ್ನಯ್ಯ ವಿಚಾರಣೆ ವೇಳೆ ಕಕ್ಕಿದ್ದಾನೆ.

ಈ ಬುರುಡೆಯನ್ನೇ ಮುಂದಿಟ್ಟುಕೊಂಡು ನ್ಯಾಯಾಲಯದಿAದ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಭದ್ರತೆ ಪಡೆದುಕೊಂಡಿದ್ದನು.ಹೀಗಾಗಿ ಚಿನ್ನಯ್ಯ ನೀಡಿದ ಹೇಳಿಕೆಯನ್ನು ಎಸ್‌ಐಟಿ ಕೇಳುತ್ತಿತ್ತು. ಅದರಂತೆ ಚಿನ್ನಯ್ಯ ತೋರಿಸಿದ 17 ಜಾಗಗಳಲ್ಲಿ ಗುಂಡಿ ತೋಡಿದ ಬಳಿಕ ಮೂಲ ಬುರುಡೆಯ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ಈ ವೇಳೆ ಆತ ಒಂದೊAದು ಜಾಗದ ಹೆಸರನ್ನು ಹೇಳಿದ್ದ. ಒಂದು ಸಾರಿ ಬೋಲಿ ಯಾರ್ ಮತ್ತೊಮ್ಮೆ ಕಲ್ಲೇರಿ,ಮಗದೊಮ್ಮೆ ಇನ್ನೊಂದು ಜಾಗದ ಹೆಸರನ್ನು ಬಾಯ್ಬಿಟ್ಟಿದ್ದ, ಆದರೆ, ಬುರುಡೆಯಲ್ಲಿದ್ದ ಮಣ್ಣು ಧರ್ಮಸ್ಥಳ ಪರಿಸರದ್ದೇ ಅಲ್ಲ ಎಂಬ ಮಾಹಿತಿಯೂ ವಿಧಿ-ವಿಜ್ಞಾನ ಪ್ರಯೋಗಾಲಯದಿಂದಲೂ ಖಚಿತ ಪಟ್ಟಿತ್ತು. ಈ ಅಂಶವನ್ನು ತಿಳಿಸ ಎಸ್‌ಐಟಿ ಚಿನ್ನಯ್ಯನನ್ನು ಪೊಲೀಸ್ ದಾಟಿಯಲ್ಲೇ ವಿಚಾರಣೆ ನಡೆಸಿದಾಗ ಈ ಬುರುಡೆಯನ್ನು ಬೇರೆ ಜಾಗದಿಂದ ತಂದಿರುವ ಮಾಹಿತಿಯನ್ನು ತಿಳಿಸಿದ್ದಾನೆ. ಬೇರೆಯವರು ಹೇಳಿದಂತೆ ನಾನು ಮಾಡಿದ್ದೇನೆ. ಆದರೆ, ಸೂತ್ರಧಾರಿಯೇ ಬೇರೆಯವರು ಎಂದು ಹೇಳಿಕೆ ನೀಡಿದ್ದನು.

RELATED ARTICLES

LEAVE A REPLY

Please enter your comment!
Please enter your name here

Most Popular