ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ, ಶವಗಳನ್ನು ಹೂಳಿರುವ ಪ್ರಕರಣದ ಬಗ್ಗೆ ಸದ್ಯಕ್ಕೆ ಎಸ್‌ಐಟಿ ರಚನೆ ಮಾಡಲ್ಲ. ಪೊಲೀಸರು ತನಿಖೆ ನಡೆಸಿ ವರದಿ ನೀಡಿದ ನಂತರ ಅಗತ್ಯವಿದ್ದರೆ ಎಸ್‌ಐಟಿ ರಚಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಅಪರಿಚಿತ ಶವಪತ್ತೆ ಪ್ರಕರಣಕ್ಕೆ ಸಂಬAಧಿಸಿದAತೆ ಸರ್ಕಾರ ಯಾವುದೇ ಒತ್ತಡಕ್ಕೆ ಬಗ್ಗಲ್ಲ, ಮಣಿಯಲ್ಲ. ಕಾನೂನಿನ ಪ್ರಕಾರ ಕ್ರಮ ಆಗುತ್ತದೆ ಎಂದರು
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಧರ್ಮಸ್ಥಳದಲ್ಲಿ ನಡೆದಿರುವ ಕೊಲೆ, ಅತ್ಯಾಚಾರ, ಹೆಣಗಳ ಹೂಳಿರುವ ಪ್ರಕರಣದ ಬಗ್ಗೆ ಎಸ್‌ಐಟಿ ರಚನೆಗೆ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ನಿವೃತ್ತ ನ್ಯಾ, ಗೋಪಾಲಗೌಡ ಅವರು ಹೇಳಿರುವ ಪರವಾಗಿ ಆಗಲೀ, ವಿರುದ್ಧವಾಗಿ ಆಗಲೀ ಇಲ್ಲ. ಕಾನೂನಿನಂತೆ ಕ್ರಮ ಆಗುತ್ತದೆ ಎಂದರು.
ಎತ್ತು ಈಯಿತು, ಕೊಟ್ಟಿಗೆ ಕಟ್ಟು ಎಂಬAತೆ ಸರ್ಕಾರ ನಡೆದುಕೊಳ್ಳಲು ಆಗಲ್ಲ. ಎತ್ತು ಈಯಲ್ಲ, ಪೊಲೀಸರು ಈಗ ತನಿಖೆ ನಡೆಸಿದ್ದಾರೆ .ಅವರು
ವರದಿ ಕೊಡಲಿ, ವರದಿ ಬಂದ ಮೇಲೆ ಅಗತ್ಯವಿದ್ದರೆ ಎಸ್‌ಐಟಿ ರಚನೆ ಮಾಡುತ್ತೇವೆ ಎಂದರು.
ಧರ್ಮಸ್ಥಳದ ಪ್ರಕರಣದ ಸಂಬAಧ ಸರ್ಕಾರದ ಮೇಲೆ ಯಾರಾದರೂ ಒತ್ತಡ ಹೇರಿದ್ದಾರಾ ಎಂಬ ಪ್ರಶ್ನೆಗೆ, ಯಾರೂ ಒತ್ತಡ ಹೇರಿಲ್ಲ. ಹೇರಿದ್ದರೂ ನಾವು ಬಗ್ಗಲ್ಲ ಅದಕ್ಕೆಲ್ಲಾ ಕೇರ್ ಮಾಡಲ್ಲ ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆಗೆ ರಚಿಸಲಾಗಿದ್ದ ನ್ಯಾ. ಮೈಕಲ್ ಜಾನ್ ಖುನ್ನಾ ಅವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿದ್ದೇವೆ. ವರದಿ ಸಾರಾಂಶವನ್ನು ಎಲ್ಲ ಸಚಿವರಿಗೂ ಕೊಟ್ಟಿದ್ದೇವೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.