ಬೆಂಗಳೂರು : ಸೈನಿಕ್ ವಿಹಾರ್ ಲೇಔಟ್ ಅವಾಂತರ ನಡೆದಿದೆ.ಸೂರಿಗಾಗಿ ದೇಶ ಕಾದ ನೂರಾರು ಸೈನಿಕರು ತಮ್ಮ ಸೂರನ್ನು ಉಳಿಸಿಕೊಳ್ಳಲು ಬೀದಿಗೆ ಬಂದಿದ್ದಾರೆ.ಯಲಹಂಕದ ಕೆಂಚೇನಹಳ್ಳಿ ಗ್ರಾಮದಲ್ಲಿರುವ ಸೈನಿಕ್ ವಿಹಾರ ಬಡವಾಣೆಯಲ್ಲಿ ಈ ಘಟನೆ ನಡೆದಿದೆ.
ಭೂ ಮಾಫಿಯಕ್ಕೆ ಸಿಕ್ಕಿ ಹಿರಿಯ ನಾಗರಿಕರು ರೋಧನೆ ಅನುಭವಿಸುತ್ತಿದ್ದು ಅನಾಮಧೇಯ ಭೂ ಮಾಫೀಯದಿಂದ ಪ್ರಾಣ ಬೆದರಿಕೆಯ ಆರೋಪಕೇಳಿಬಂದಿದೆ. ಸುಮಾರು 10 ರಿಂದ 15 ಎಕರೆಗಳಲ್ಲಿ ನಿರ್ಮಾಣವಾಗಿರುವ ಸೈನಿಕ್ ವಿಹಾರ ಲೇಔಟ್ ನಲ್ಲಿರುವ ಸರ್ವೇ ನಂಬರ್ 33/1, 33/3, 33/5, 34/2 ರಲ್ಲಿ ಸೈಟ್ ನ್ನು ಭೂಗಳ್ಳರ ಮೂಲಕ ಇನ್ನಿತರರಿಗೆ ಖರೀದಿಸಲು ಸರ್ಕಾರದ ಕಣ್ಣು ತಪ್ಪಿಸಿ ಕೋಟ್ಯಾಂತರ ಬೆಲೆಯ ಭೂಮಿ ಕಬಳಿಸಲು ಮೆಗಾ ಪ್ಲ್ಯಾನ್ ನಡೆದಿದೆ.
ಸೈನಿಕ್ ವಿಹಾರ ಲೇಔಟ್ ಸೈಟ್ ಮಾಲೀಕರಿಗೆ ಬಿಬಿಎಂಪಿ ಸೈಟ್ ನಂಬರ್ ವಿತರಿಸಿದ್ದು ಸರ್ಕಾರದ ಎಲ್ಲಾ ಸೌಲಭ್ಯ ಪಡೆದು ಸೈಟ್ ಮಾಲೀಕರು ಜೀವನ ಸಾಗಿಸುತ್ತಿದ್ದರು ಆದರೆ ಇದೀಗ ಶಾಂತಯುತವಾಗಿ ಸ್ವಾಧೀನದಲ್ಲಿರುವ ಮಾಲೀಕರಿಗೆ ಭೂ ಮಾಫೀಯದಿಂದ ಟಾರ್ಚರ್ ಶುರುವಾಗಿದೆ.ಆದರೆ ಅಕ್ರಮ ಬಡಾವಣೆ ನಿರ್ಮಾಣ ಎಂದು ಯಲಹಂಕ ತಹಶೀಲ್ದಾರ್- ಆದೇಶ ಮಾಡಿದ್ದು ಪ್ರಭಾವಿಗಳ ಕೈವಾಡವಿರುವುದು ತಿಳಿದುಬಂದಿದೆ. ತಹಶೀಲ್ದಾರ್ ಆದೇಶ ಪ್ರಶ್ನಿಸಿ ಸೈನಿಕ್ ವಿಹಾರ ಸೈಟ್ ಮಾಲೀಕರು ಮೇಲ್ಮನವಿ ಸಲ್ಲಿಸಿದ್ದು ಇದರ ನಡುವೆ ಅನಾಮಧೇಯ ವ್ಯಕ್ತಿಗಳಿಂದ ಸೈಟ್ ಮಾಲೀಕರಿಗೆ ಪ್ರಾಣ ಬೆದರಿಕೆ ಕರೆಗಳುಬರುತ್ತಿರುವುದು ತಿಳಿದಿದೆ.
ಏಕಾಏಕಿ ಬಂದು ವಾಸವಿದ್ದ ಕಟ್ಟಡಗಳನ್ನು ಭೂ ಮಾಫಿಯದ ಪುಡಿ ರೌಡಿಗಳು ಹೊಡೆದುರಳಿಸಿದ್ದು ಪ್ರಶ್ನೆ ಮಾಡಿದ ಕೆಲ ಸೈಟ್ ಮಾಲೀಕರಿಗೆ ಪುಡಿ ರೌಡಿಗಳು ಥಳಿಸಿದ್ದಾರೆ. ಪ್ರಾಣ ರಕ್ಷಣೆಗಾಗಿ ಮತ್ತು ಜಾಗದ ರಕ್ಷಣೆಗಾಗಿ ಸೈಟ್ ಮಾಲೀಕರು ಪರದಾಡುತ್ತಿದ್ದು ಕೂಡಲೇ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಸಾರ್ವಜನಿಕರು ಮನವಿಮಾಡಿದ್ದಾರೆ.