ಬೆಂಗಳೂರು : ದೇಶಾದ್ಯಂತ ಶ್ರೀ ರಾಮನ ಜಪ ಹೆಚ್ಚಾಗಿರುವ ಹೊತ್ತಲ್ಲೇ ರಾಜ್ಯದಲ್ಲಿ ದೇವಾಲಯಗಳಲ್ಲಿ ಧಾರ್ಮಿಕ ಶ್ರದ್ಧೆಯ ಕೂಗು ಎದ್ದಿದ್ದು ವಸ್ತçಸಂಹಿತೆ ಜಾರಿಗೆ ಅಭಿಯಾನ ಆರಂಭವಾಗಿದೆ.
ಬೆAಗಳೂರಿನ ವಸಂತನಗರದ ಶ್ರೀ ವೆಂಕಟರಮಣ ದೇವಾಲಯದಲ್ಲಿ ಬುಧವಾರ ವಸ್ತ್ರಸಂಹಿತೆಯ ಬೋರ್ಡ್ (ನಾಮಫಲಕ) ಹಾಕುವ ಮೂಲಕ ವಸ್ತçಸಂಹಿತೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಈ ಅಭಿಯಾನದ ಪ್ರಕಾರ ಇನ್ನು ಮುಂದೆ ಬೆAಗಳೂರಿನಲ್ಲಿರುವ ದೇವಸ್ಥಾನಗಳಿಗೆ ತೆರಳುವವರು ಅರೆಬಟ್ಟೆ ಧರಿಸುವಂತಿಲ್ಲ. ಭಾರತೀಯ ಉಡುಪು ಧರಿಸಿ ಬಂದರಷ್ಟೆ ಪ್ರವೇಶ ನೀಡಲಾಗುತ್ತದೆ ಎಂದು ಕರ್ನಾಟಕ ದೇವಸ್ಥಾನ-ಮಠ, ಧಾರ್ಮಿಕ ಸಂಸ್ಥೆಗಳ ಮಹಾಸAಘದ ಪ್ರಕಟಣೆ ತಿಳಿಸಿದೆ.
ಪುರುಷರು ಚಡ್ಡಿ, ಬರ್ಮುಡಾ, ಹರಿದ ಜೀನ್ಸ್, ಎದೆ ಕಾಣುವ ಟಿ ಶರ್ಟ್ ಧರಿಸಿಕೊಂಡು ದೇವಾಲಯಕ್ಕೆ ಬರುವ ಹಾಗಿಲ್ಲ. ಅಂತೆಯೇ ಮಹಿಳೆಯರು ಸ್ಕರ್ಟ್, ಮಿಡಿ, ಹರಿದ ಜೀನ್ಸ್, ಶಾರ್ಟ್ಸ್ ಹಾಕಿಕೊಂಡು ದೇವಾಲಯಕ್ಕೆ ಬರುವಂತಿಲ್ಲ. ಈ ಸಂಬAಧ ದೇವಸ್ಥಾನಗಳಲ್ಲಿ ನಾಮಫಲಕ (ಬೋರ್ಡ್) ಹಾಕಲಾಗುವುದು ಎಂದೂ ಸಂಘ ಸ್ಪಷ್ಟಪಡಿಸಿದೆ.
ಸರ್ಕಾರದ ಗಮನ ಮಹಾಸಂಘದ ಈ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಈ ಹಿಂದೆಯೇ ದೇವಾಲಯಗಳಲ್ಲಿ ನೀತಿ ಜಾರಿ ತರುವಂತೆ ಒತ್ತಾಯಿಸಿದ್ದವು. ಆದರೆ, ಆ ದೆಸೆಯಲ್ಲಿ ಯಾವುದೇ ದೃಢನಿರ್ಧಾರವಾಗದ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಜನವರಿಯಿಂದ ಈ ನಿಯಮವನ್ನು ಜಾರಿ ಮಾಡಲಾಗುತ್ತಿದೆ ಎಂದು ಸಂಘದ ಸಂಯೋಜಕ ಮೋಹನ ಗೌಡ ಪ್ರಕಟಣೆ ತಿಳಿಸಿದ್ದಾರೆ.