ಬೆಂಗಳೂರು : ಸರಕಾರದ ಹಿಂದೂ ವಿರೋಧಿ ನೀತಿಯಿಂದ ಜನ ಆಕ್ರೋಶ ಗೊಂಡಿದ್ದು ಹಿರೇಮಗಳೂರು ಕಣ್ಣನ್ ಅವರಿಗೆ ಹತ್ತು ವರ್ಷದ ಹೆಚ್ಚುವರಿ ವೇತನ ಹಿಂತಿರುಗಿಸುವAತೆ ನೀಡಿದ್ದ ನೋಟಿಸ್ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ನೋಟಿಸ್ ಹಿಂಪಡೆದು ವಿವಾದವನ್ನು ತಣ್ಣಗಾಗಿಸಿದೆ.
ಹಿರೇಮಗಳೂರಿನ ಕೋದಂಡರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ೪೪ ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದ್ದ ಹಿರೇಮಗಳೂರು ಕಣ್ಣನ್ ಅವರಿಗೆ ಚಿಕ್ಕಮಗಳೂರು ತಹಶೀಲ್ದಾರ್, ದೇವಾಲಯದ ವಾರ್ಷಿಕ ಆದಾಯ 5.10 ಲಕ್ಷ ರೂಪಾಯಿಗಿಂತ ಹೆಚ್ಚುವರಿ 8.10 ಲಕ್ಷ ರೂಪಾಯಿ ತಸ್ತೀಕ್ ಹಣ ಪಾವತಿಯಾಗಿರುವ ಹಿನ್ನೆಲೆಯಲ್ಲಿ 2013-14ನೇ ಸಾಲಿನಿಂದ ಈವರೆಗಿನ ಹೆಚ್ಚುವರಿಯಾಗಿ ಪಾವತಿಸಿರುವ ತಸ್ತೀಕ್ ಹಣ ಮಾಸಿಕ 4,5೦೦ ರೂ.ನಂತೆ 4.74 ಲಕ್ಷ ರೂಪಾಯಿ ಹಿಂದಿರುಗಿಸಬೇಕೆAದು ನೋಟಿಸ್ ನೀಡಿದ್ದರು.
ಈ ನೋಟಿಸ್ ವಿಷಯವನ್ನು ಸ್ವತಃ ಹಿರೇಮಗಳೂರು ಕಣ್ಣನ್ ಅವರು ಮಂಗಳವಾರ ಮಾಧ್ಯಮಗಳಿಗೆ ಬಹಿರಂಗಪಡಿಸುತ್ತಿದ್ದಂತೆ ವಿವಾದ ಭುಗಿಲೆದ್ದಿತ್ತು. ಪ್ರತಿಪಕ್ಷ ಬಿಜೆಪಿ, ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿ ಸಿದ್ದರಾಮಯ್ಯ ಸರ್ಕಾರ ಬಡ ಅರ್ಚಕರ ಹಣಕ್ಕೂ ಕಲ್ಲುಹಾಕಲು ಹೊರಟಿದೆ ಎಂದು ಆರೋಪಿಸಿತ್ತು. ವಿವಾದ ರಾಜಕೀಯ ಸ್ವರೂಪ ಪಡೆಯುತ್ತಿದ್ದಂತೆ ಮಧ್ಯಪ್ರವೇಶಿಸಿದ ಮುಜುರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು, ತಕ್ಷಣವೇ ನೋಟಿಸ್ ಹಿಂಪಡೆಯುವ ಸೂಚನೆ ನೀಡಿದರಲ್ಲದೆ, ತಹಶೀಲ್ದಾರ್ ತಪ್ಪು ತಿಳಿವಳಿಕೆಯಿಂದ ಘಟನೆ ನಡೆದಿದೆ. ನೋಟಿಸ್ ಹಿಂಪಡೆಯುವುದರ ಜತೆಗೆ ಆ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಹಶೀಲ್ದಾರ್ ಹಾಗೂ ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಿ ಹೆಚ್ಚುವರಿಯಾಗಿ ಪಾವತಿಯಾಗಿರುವ ಹಣ ವಸೂಲಿಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ರಾಮಲಿಂಗಾರೆಡ್ಡಿ ಆದೇಶಿಸಿದ ತಿಳಿಸಿ ವಿವಾದಕ್ಕೆ ತೆರೆ ಎಳೆದರು.