ಬೆಂಗಳೂರು : ದೀಪಗಳ ಹಬ್ಬ, ಸಮೃದ್ಧಿ, ಸಂತೋಷದ ಸಂಕೇತವೇ ದೀಪಾವಳಿ. ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ನಮ್ಮನ್ನೆಲ್ಲ ಕರೆದೊಯ್ಯುವ ದೀಪಾವಳಿಯನ್ನು ಎಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಬಲಿಪಾಡ್ಯಮಿ ಮುನ್ನಾದಿನದಂಗವಾಗಿ ಅಮಾವಾಸ್ಯೆಯAದು ಲಕ್ಷ್ಮಿ ಪೂಜೆಯನ್ನು ಮಾಡುವ ಸಂಪ್ರದಾಯವಿದ್ದು, ಈ ವರ್ಷ ನರಕ ಚತುರ್ದಶಿ ದಿನವೇ ಅಮಾವಾಸ್ಯೆ ಆರಂಭವಾಗುವುದರಿAದ ಅಂದಿನ ದಿನವೇ ಸಾಯಂಕಾಲ ಅಮಾವಾಸ್ಯೆ ಲಕ್ಷ್ಮಿ ಪೂಜೆಗೆ ಪ್ರಶಸ್ತö ಹಾಗೂ ಶ್ರೇಷ್ಠ ಮುಹೂರ್ತವಾಗಿದೆ. ಆದ್ದರಿಂದ ನ.೧೨ ರವಿವಾರದಂದು ಲಕ್ಷ್ಮಿ ಪೂಜೆಯನ್ನು ಮಾಡುವುದು ಪ್ರಶಸ್ತ.ಯಾವ ದಿನದಂದು ಏನು ವಿಶೇಷ? ಯಾವ ಪೂಜೆಗೆ ಯಾವ ಮುಹೂರ್ತ ನಿಗದಿ? ಶುಭ, ಅಮೃತಕಾಲದ ವಿವರಣೆಯ ದೀಪಾವಳಿ ಪೂಜಾ ಮುಹೂರ್ತಗಳ ವಿವರಣೆ ಇಂತಿದೆ.
ನ.11ರಂದು ನೀರು ತುಂಬುವ ಹಬ್ಬ, ಧನ ತ್ರಯೋದಶಿ, ನ.12ರಂದು ನರಕ ಚತುರ್ದಶಿ, ಸಂಜೆ ಅಮಾವಾಸ್ಯೆ ಲಕ್ಷ್ಮೀ ಪೂಜಾ, ನ. 13 ರಂದು ಅಮಾವಾಸ್ಯೆ ಲಕ್ಷ್ಮಿ ಪೂಜೆ, ನ. 14 ರಂದು ಬಲಿಪಾಡ್ಯಮಿ ಇರುತ್ತದೆ.
ಅಮಾವಾಸ್ಯೆ ಲಕ್ಷ್ಮೀ ಪೂಜೆ: 13-11-2023 ಸೋಮವಾರದಂದು ಮನೆಯಲ್ಲಿ ಪೂಜೆ ನಸುಕಿನ 5.50ರಿಂದ ಸೂರ್ಯೋದಯದವರೆಗೆ ಬ್ರಾಹ್ಮೀ ಮುಹೂರ್ತ. ಬೆಳಿಗ್ಗೆ8.12 ರವರೆಗೆ ಲಾಭ. ನಂತರ ಬೆಳಿಗ್ಗೆ9.35 ರವರೆಗೆ ಅಮೃತಕಾಲ. ಅಮಾವಾಸ್ಯೆ ಸಂಜೆ 4.4೦ ರಿಂದ 5.52 ರವರೆಗೆ ಲಾಭ. ಸಂಜೆ 7.32 ರಿAದ 9.01 ರ ವರೆಗೆ ಶುಭ, ನಂತರ ರಾತ್ರಿ 10.40ರವರೆಗೆ ಅಮೃತ ಕಾಲ.
ಪಾಡ್ಯ ಪೂಜಾ ಮತ್ತು ವಾಹನ ಖರೀದಿಗೆ ಸಕಾಲ: 14-11-2023 ರಂದು ನಸುಕಿನ ಜಾವ 5.44 ರಿಂದ 6.32 ರವರೆಗೆ ಶುಭ ಮಧ್ಯಾಹ್ನ12.30 ರಿಂದ 1.40 ವರೆಗೆ ಶುಭ. 1.40 ರಿಂದ 3.05 ರವರೆಗೆ ಅಮೃತ ಕಾಲ. ಸಂಜೆ 4.40 ರಿಂದ 5.52 ರವರೆಗೆ ಶುಭ, ನಂತರ 7.28 ರವರೆಗೆ ಅಮೃತಕಾಲ ಇರುತ್ತದೆ.
ನೀರು ತುಂಬುವ ಹಬ್ಬ:11-11- 2023 ಶನಿವಾರದಂದು ನೀರು ತುಂಬುವ ಹಬ್ಬ, ಧನ ತ್ರಯೋದಶಿ (ಧನ್ವಂತರಿ ಜಯಂತಿ), ಯಮದೀಪ ದಾನ.
ನರಕ ಚತುರ್ದಶಿ: 12-11-2023 ರವಿವಾರದಂದು ಆರತಿ, ಅಭ್ಯಂಗ ಸ್ನಾನ, ವ್ಯಾವಹಾರಿಕ ಸ್ಥಳಗಳಲ್ಲಿ ಲಕ್ಷ್ಮೀ ಸಹಿತ ಕುಬೇರ ಪೂಜೆಯು ಸಂಜೆ 6.೦೦ ರಿಂದ 7.25 ರವರೆಗೆ ಶುಭ. ರಾತ್ರಿ 8.50 ರವರೆಗೆ ಅಮೃತ ಕಾಲ, ರಾತ್ರಿ 10.30 ರಿಂದ ಮಧ್ಯರಾತ್ರಿ 12.36 ರವರಿಗೆ ಸಿಂಹ ಲಗ್ನ.
ವಿಶೇಷ ಸೂಚನೆ: ದೀಪಾವಳಿ ಪಾಡ್ಯದ ದಿನ ಸ್ವಯಂ ಸಿದ್ಧ ಮುಹೂರ್ತ ಆಗಿರುವುದರಿಂದ ಅAದಿನ ದಿನದಲ್ಲಿ ರಾಹುಕಾಲ ನೋಡುವ ಅಗತ್ಯವಿಲ್ಲ.