ಬೆಂಗಳೂರು : ನಗರದ ವೈಟ್ಫೀಲ್ಡ್ ಬಳಿಯ `ದಿ ರಾಮೇಶ್ವರಂ ಕೆಫೆ’ಯಲ್ಲಿ ಬಾಂಬ್ ಸ್ಫೋಟ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ಪ್ರಮುಖ ರೂವಾರಿ ಪಾಕಿಸ್ತಾನದ ನಂಟು ಹೊಂದಿರುವ
ಅಂಶವನ್ನು ಎನ್ಐಎ ಅಧಿಕಾರಿಗಳು ಬಹಿರಂಗೊಳಿಸಿದ್ದಾರೆ.
ಪಾಕ್ ಮೂಲದ ಶಂಕಿತ ಉಗ್ರ ಎ6 ಫೈಸಲ್ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ. ಮಂಗಳೂರು ಕುಕ್ಕರ್ ಸ್ಫೋಟದ ಬಳಿಕ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜೀಬ್ ನಾಪತ್ತೆಯಾಗಿದ್ದರು. ಕೆಲವು ವರ್ಷಗಳ ಬಳಿಕ ಮತ್ತೆ ಬೆಂಗಳೂರಿಗೆ ವಾಪಾಸ್ ಬಂದಿದ್ದರು. ಆಗ ಮುಜಾಮಿಲ್ ಷರೀಫ್ ಜೊತೆಗೆ ಪರಿಚಯವಾಗಿತ್ತು. ಮುಜಾಮಿಲ್ಮೆ ಜೆಸ್ಟಿಕ್ ಬಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇದೇ ಮುಜಾಮಿಲ್ ಷರೀಫ್ ಅಬ್ದುಲ್ ತಾಹಾ ಮತ್ತು ಮುಸಾವೀರ್ನ ಮನಪರಿವರ್ತಿಸಿ ಐಸಿಸ್ಗೆ ಸಂಘಟನೆಗೆ ಸೇರ್ಪಡೆ ಮಾಡಿದ್ದರು.
ಮೊದಲ ಹಂತದಲ್ಲಿ ಕೆಲವು ದುಷ್ಕ್ರುತ್ಯ ನಡೆಸಲು ಮುಜಾಮಿಲ್ಗೆ ತಾಹಾ ಮತ್ತು ಶಾಜೀಬ್ ಟಾಸ್ಕ್ ನೀಡಿದ್ದರು. ಕೆಫೆಯಲ್ಲಿ ಬಾಂಬ್ ಸ್ಫೋಟಿಸಿ ವಿಧ್ವಂಸಕ ಕೃತ್ಯದ ಹಿಂದೆ ಪಾಕಿಸ್ತಾನ ಪಿತೂರಿ ನಡೆಸಿರುವ ಮಹತ್ವದ ವಿಚಾರ ಆತಂಕ ಮೂಡಿಸಿದೆ.
ರಾಜಧಾನಿಯಲ್ಲಿ ಸ್ಫೋಟಕ್ಕೆ ಸಂಚು ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ದುಷ್ಕರ್ಮಿಗಳು ಕಳೆದ 2023ಡಿಸೆಂಬರ್ನಲ್ಲಿ ರಾಜಧಾನಿ ಬೆಂಗಳೂರಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು. ಆನ್ಲೈನ್ ಹ್ಯಾಂಡ್ಲರ್ ಮೂಲಕ ಸೂಚನೆ ಬಂದ ಬಳಿಕ ಕೃತ್ಯ ನಡೆಸಲು ಮುಂದಾಗಿದ್ದರು. 22 ಜನವರಿ 2024 ರಂದು ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದ್ದು, ಆ ಸಂದರ್ಭದಲ್ಲಿ ಸ್ಫೋಟ ನಡೆಸುವ ಸೂಚನೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಬಿಜೆಪಿ ಕಚೇರಿ ಸ್ಫೋಟಿಸುವ ಗುರಿಯನ್ನು ಹಾಕಿಕೊಂಡಿದ್ದ ಮುಸಾವೀರ್ ಹುಸೇನ್ ಶಾಜೀಬ್, ಬೆಂಗಳೂರಿನಿAದ ಚೆನ್ನೈಗೆ ಸ್ಥಳಾಂತರಗೊAಡಿದ್ದ. ಚೆನ್ನೈನಲ್ಲಿ ಐಇಡಿ (ಕಚ್ಚಾ ಬಾಂಬ್) ತಯಾರಿಕೆ ಮಾಡಿದ್ದ. 2024 ಜನವರಿ 22 ರಂದು ಬೆಳಗ್ಗೆ ಐಇಡಿ ಬಾಂಬ್ನೊAದಿಗೆ ಬೆAಗಳೂರಿಗೆ ಬಂದಿದ್ದ ಮುಸಾವೀರ್ ಶಾಜೀಬ್, ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಾಂಬ್ ಇಡಲು ಸಂಚು ಹೂಡಿದ್ದ. ಆದರೆ, ಅಲ್ಲಿ ಹೆಚ್ಚಿನ ಭದ್ರತೆ ಹಿನ್ನೆಲೆ ಬಿಜೆಪಿ ಕಚೇರಿ ಹಿಂಭಾಗದಲ್ಲಿ ಬಾಂಬ್ ಇಟ್ಟಿದ್ದ.90 ನಿಮಿಷಕ್ಕೆ ಟೈಮರ್ಸೆ ಟ್ ಮಾಡಿದ್ದ. ಬಾಂಬ್ ಸ್ಫೋಟಗೊಳ್ಳಲಿಲ್ಲ. ನಂತರ ಬೆಂಗಳೂರಿನಲ್ಲಿ ರಕ್ತಪಾತ ಮಾಡುವ ಉದ್ದೇಶ ಹೊಂದಿದ್ದ ಉಗ್ರರು ಕೊನೆ ಕ್ಷಣದಲ್ಲಿ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿ ಪರಾರಿಯಾಗಿದ್ದರು ಎಂದು ಎನ್ಐಎ ತನ್ನ ತನಿಖಾ ವರದಿಯಲ್ಲಿ ಉಲ್ಲೇಖ ಮಾಡಿದೆ.


