ಬೆಂಗಳೂರು ; ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂದತೆ ಬಗೆದಷ್ಟೂ ಮಾಹಿತಿ ಬಹಿರಂಗವಾಗುತ್ತಿದೆ. ದರ್ಶನ್ ಹಾಗೂ ಗ್ಯಾಂಗ್ನನ್ನು ಮತ್ತೆ 5 ದಿನ ಕಸ್ಟಡಿಗೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಭಾನುವಾರ ಮೈಸೂರಿನಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಬಳಿಕ ಮೈಸೂರಿಗೆ ತೆರಳಿದ ನಟ ದರ್ಶನ್ ಅಲ್ಲಿಂದಲೇ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡೆವಿಲ್ ಸಿನಿಮಾದ ಚಿತ್ರೀಕರಣದ ಹಿನ್ನೆಲೆಯಲ್ಲಿ ದರ್ಶನ್ ಮೈಸೂರಿನಲ್ಲಿಯೇ ಬೀಡುಬಿಟ್ಟಿದ್ದರು. ರೇಣುಕಾಸ್ವಾಮಿ ಕೊಲೆಯ ಬಳಿಕವೂ ಮೈಸೂರಿಗೆ ತೆರಳಿದ ದರ್ಶನ್, ಅಲ್ಲಿಂದಲೇ ಗಣ್ಯರು ಹಾಗೂ ಆಪ್ತರಿಗೆ ಕರೆ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ನಟ, ಜಿಮ್ನಲ್ಲಿ ವರ್ಕೌಟ್ ಮಾಡುವ ಮೂಲಕ ಏನೂ ನಡೆದೇ ಇಲ್ಲ ಎಂಬಂತೆ ತೋರಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇದೆಲ್ಲದರ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ.
ಈಗಾಗ್ಲೇ ಹತ್ಯೆ ಮಾಡಿದ ಆರೋಪ ಸುತ್ಕೊಂಡ ಪಾಪಕ್ಕೆ ಜೀವಾವಧಿ ನೀಡಬಹುದಾದ IPC 302 ಸೆಕ್ಷನ್ ದಾಖಲಾಗಿದೆ. ಪ್ರಾಥಮಿಕವಾಗಿ 302 ಅಂಡ್ 201 ಅಡಿ ಕೇಸ್ ದಾಖಲಾಗಿದೆ. ಮುಂದೆ 364, 120ಬಿ ಸೆಕ್ಷನ್ಗಳು ಸೇರಿಸೋ ಸಾಧ್ಯತೆಯೂ ಇದೆ..
ಯಾವ್ಯಾವ ಶಿಕ್ಷೆ?
ಶಿಕ್ಷೆ 01 : IPC 201 ಅಡಿ ಸಾಕ್ಷಿ ತಿರುಚುವುದು ಅಥವಾ ನಾಶ ಯತ್ನಕ್ಕೆ ಜೀವಾವಧಿ
ಶಿಕ್ಷೆ 02 : IPC 364 ಅಡಿ ಜೀವಾವಧಿ ಅಥವಾ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ಶಿಕ್ಷೆ 03 : IPC 120ಬಿ ಸೇರಿಸಿದ್ರೆ ಜೀವಾವಧಿ ಅಥವಾ 10 ವರ್ಷ ಕಠಿಣ ಸೆರೆಯ ಸಜೆ
PC 201 ಅಡಿ ಸಾಕ್ಷಿ ತಿರುಚುವುದು, ಸಾಕ್ಷ್ಯ ನಾಶಕ್ಕೆ ಯತ್ನಿಸಿರೋದು ಜೀವಾವಧಿ ಸಜೆ ಆಗಬಹುದು.. IPC 364 ಅಡಿ ಜೀವಾವಧಿ ಅಥವಾ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆಗೂ ಅವಕಾಶ ಇದೆ.. IPC 120ಬಿ ಸೇರಿಸಿದ್ರೆ ಜೀವಾವಧಿ ಅಥವಾ10 ವರ್ಷ ಕಠಿಣ ಸೆರೆವಾಸ ಆಗಲಿದೆ. ಇದು ಸದ್ಯ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ದಾಖಲಾದ ಮತ್ತು ದಾಖಲಾಗಲಿರುವ ಸೆಕ್ಷನ್ಗಳು.. ಹಾಗಾದ್ರೆ, ದರ್ಶನ್ ವಿರುದ್ಧ ಅಷ್ಟು ಬಲವಾದ ಸಾಕ್ಷ್ಯಗಳು ಸಿಕ್ಕಿ ಬಿಟ್ವಾ?
ದರ್ಶನ್ ಬಗ್ಗೆ ಇರುವ ಸಾಕ್ಷಿ
ಸಾಕ್ಷಿ 1 : ಶೆಡ್ಗೆ ದರ್ಶನ್ ಬಂದು ಹೋಗಿರುವ ಸಿಸಿಟಿವಿ ದೃಶ್ಯಗಳು
ಸಾಕ್ಷಿ 2 : ದರ್ಶನ್ನ CDR ರಿಪೋರ್ಟ್ ಸಹ ಸ್ಪಷ್ಟವಾಗಿ ಹೋಲಿಕೆ
ಸಾಕ್ಷಿ 3 : ದರ್ಶನ್ಗೆ ರೇಣುಕಾಸ್ವಾಮಿ ಕರೆತಂದ ಬಗ್ಗೆ ಫೋನ್ ಕಾಲ್
ಸಾಕ್ಷಿ 4 : ಆರೋಪಿ ವಿನಯ್ ಕಾಲ್ ಮಾಡಿ ಮಾಹಿತಿ ಕೊಟ್ಟ ಡಿಟೇಲ್ಸ್
ಸಾಕ್ಷಿ 5 : ಆದಾದ ಬಳಿಕ ಪವಿತ್ರಗೌಡಗೆ ಕರೆ ಮಾಡಿರೋದು ಸಹ ಪತ್ತೆ
ಸಾಕ್ಷಿ 6 : ಪವಿತ್ರಾ ಮನೆ ಬಳಿ ಹೋಗಿ ದರ್ಶನ್ ಕರೆತಂದ ಸಾಕ್ಷಿ ಲಭ್ಯ
ಸಾಕ್ಷಿ 7 : ಈ ಬಗ್ಗೆ ಸಿಡಿಆರ್ ಮತ್ತು ಸಿಸಿಟಿವಿ ಸಾಕ್ಷಿಗಳು ಪತ್ತೆಯಾಗಿವೆ
ಸಾಕ್ಷಿ 8 : ಮಹಜರ್ ವೇಳೆ ಪಂಚರ ಮುಂದೆ ದರ್ಶನ್ ಒಪ್ಪಿದ ಹೇಳಿಕೆ
ಇವು ಟೆಕ್ನಿಕಲ್ ಎವಿಡೆನ್ಸ್.. ಇದಷ್ಟೇ ಅಲ್ಲ.. ಕೊಲೆಯಲ್ಲಿ ಭಾಗಿಯಾದ ಬಗ್ಗೆಯೂ ಸಾಕ್ಷಿಗಳು ಸಿಕ್ಕಿವೆ.. ಅವು ಕೂಡ ದರ್ಶನ್ ವಿರುದ್ಧವೇ ಸಾಕ್ಷಿ ನುಡಿತಿವೆ.
ದರ್ಶನ್ ಕೊಲೆಯಲ್ಲಿ ಭಾಗಿಗೆ ಸಾಕ್ಷಿ
ಸ್ವತಃ ದರ್ಶನ್ ಬಗ್ಗೆ ಆತನ ಅಪ್ತ ವಿನಯ್ ಕೊಟ್ಟ ಹೇಳಿಕೆ ಮುಳುವಾಗಿದೆ. ದರ್ಶನ್ ಹೊಡೆದಾಗಲೇ ರೇಣುಕಾ ಸತ್ತಿದ್ದು ಅಂತ ವಿನಯ್ ಹೇಳಿಕೆ ನೀಡಿದ್ದಾನೆ. ಅಲ್ಲದೆ, ದರ್ಶನ್ ಹಲ್ಲೆ ಮಾಡಿರೋ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಆರೋಪಿ ದೀಪಕ್ ಹಲ್ಲೆ ಮಾಡಿದ ವಿಡಿಯೋ ರೆಕಾರ್ಡ್ ಮಾಡ್ಕೊಂಡಿದ್ದಾನೆ. ಸದ್ಯ ಇದೇ ದೀಪಕ್ನಿಂದ 164 ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.. ಮಹಜರ್ ವೇಳೆ ಆತನ ಎತ್ತಿ ಎಸೆದ ಬಗ್ಗೆ ಹತ್ಯೆ ಆರೋಪಿ ದರ್ಶನ್ ಒಪ್ಪಿದ್ದು, ಟೆಂಪೋ ಟ್ರಾವೆಲ್ಲರ್ಗೆ ರೇಣುಕಾ ತಲೆ ಬಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.. ಅಲ್ಲದೇ ಶೆಡ್ನಲ್ಲಿ ಮೃತನ ಬಯೋಲಾಜಿಕಲ್ ಎವಿಡೆನ್ಸ್ ಸಿಕ್ಕಿವೆ.. ಮೃತನ ರಕ್ತ, ಫಿಂಗರ್ ಪ್ರಿಂಟ್, ಕೂದಲು ಮತ್ತು ಚರ್ಮದ ತುಂಡು ಲಭ್ಯ ಆಗಿವೆ.ಈ ಮೂಲಕ ರೇಣುಕಾಸ್ವಾಮಿ ಶೆಡ್ನಲ್ಲೇ ಸತ್ತಿದ್ದು ಕನ್ಫರ್ಮ್ ಆಗಿದೆ.. ಜತೆಗೆ ಹಲ್ಲೆ ಮಾಡಿದ ವೆಪನ್ಸ್ಗಳು ಸೀಜ್ ಮಾಡ್ಲಾಗಿದೆ.