ಬೆಂಗಳೂರು : ನಟ ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶ ಕಳುಹಿಸಿದ ವಿಚಾರವಾಗಿ ನಟಿ ರಮ್ಯಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಖುದ್ದು ದೂರು ಸಲ್ಲಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿ ನಟಿ ರಮ್ಯಾ, ದರ್ಶನ್ ಕೇಸ್ ಬಗ್ಗೆ
ಸುಪ್ರೀಂ ಕೋರ್ಟ್ ಅಭಿಪ್ರಾಯ ವನ್ನು ನಾನು ಹಂಚಿಕೊAಡಿದ್ದೆ. ಅದೇ ತಪ್ಪಾ? ಅಷ್ಟಕ್ಕೇ ನನ್ನ ಪೋಸ್ಟ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದರು.
ಇದರಿಂದ ನನಗೆ ಬಹಳ ಬೇಜಾರಾಯಿತು ಎಂದು ಹೇಳಿದರು.
ಅಶ್ಲೀಲ ಕಾಮೆಂಟ್, ಮೇಸೆಜ್ ಮಾಡಿದ್ದ ದರ್ಶನ್ ಫ್ಯಾನ್ಸ್ ವಿರುದ್ಧ ನೀಡಿದ್ದ ದೂರನ್ನು ಸ್ವೀಕರಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೈಬರ್ ಕ್ರೆöÊ ಪೊಲೀಸರಿಗೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ. ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹುಡುಗರಂತೆ ಹೆಣ್ಮಕ್ಕಳಿಗೂ ಸ್ವಾತಂತ್ರ÷್ಯ ಇದೆ. ನಾನು ಎಲ್ಲಾ ಹೆಣ್ಣು ಮಕ್ಕಳ ಪರವಾಗಿ ಬಂದು ದೂರು ನೀಡಿದ್ದೇನೆ. ನನಗೆ ಚಿತ್ರರಂಗದಲ್ಲಿ ಬಹಳಷ್ಟು ಮಂದಿಯಿAದ ಬೆಂಬಲ ಸಿಕ್ಕಿದೆ. ಗಂಡು ಮಕ್ಕಳಿಗೆ ಎಷ್ಟು ಸ್ವಾತಂತ್ರಯವಿದೆಯೋ ಅಷ್ಟೇ ಹೆಣ್ಣುಕ್ಕಳಿಗೂ ಇದೆ. ನನಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದವರು ಅನೇಕರು ಹೆಣ್ಣುಮಕ್ಕಳ ಹೆಸರನ್ನು ಹಾಕಿಕೊಂಡು ಕಾಮೆಂಟ್ ಮಾಡಿದ್ದಾರೆ. ಆ ಎಲ್ಲಾ ವಿವರವನ್ನು ದೂರಿನಲ್ಲಿ ಉಲ್ಲೇಖಿಸಿದ್ದೇನೆ. ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.
ಪ್ರತಿಕ್ರಿಯೆ ನೀಡದಿರಲು ಪೋಸ್ಟ್: ಇದೀಗ ದರ್ಶನ್ ಅಭಿಮಾನಿಗಳು ದರ್ಶನ್ ರೀತಿಯೇ ಶಾಂತಿಮAತ್ರ ಘೋಷಿಸಿದ್ದಾರೆ. ಡಿ ಬಾಸ್ ಮೇಲೆ ಅಭಿಮಾನ ಇರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೂ ಕಿವಿಗೊಡಬೇಡಿ. ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ. ಯಾರಿಗೂ ಮೆಸೇಜ್ ಮಾಡಬೇಡಿ. ಪ್ರಚಾರಕ್ಕೆ ಆಗಲಿ, ಹುನ್ನಾರ ಮಾಡಿ ಆಗಲಿ, ಯಾರೂ ಏನೇ ಅಂದರು ತಲೆ ಕೆಡಿಸಿಕೊಳ್ಳಬೇಡಿ. ದರ್ಶನ್ ಫ್ಯಾನ್ಸ್ ಏನೆಂದು ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿಯಿದೆ. ಈ ಅವಮಾನಗಳು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಮೆಟ್ಟಿಲು ಆಗಲಿ ಎಂದು ಡಿ ಕಂಪನಿ ಪೋಸ್ಟ್ ಹಾಕಿದೆ.


