Friday, November 22, 2024
Flats for sale
Homeರಾಜ್ಯಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಸೇರಿ ಹಲವೆಡೆ ಸುರಿದ ಮಳೆ,ಬಿಸಿಲಿನ ಬೇಗೆಗೆ ತತ್ತರಿಸಿದ ಜನರಿಗೆ...

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಸೇರಿ ಹಲವೆಡೆ ಸುರಿದ ಮಳೆ,ಬಿಸಿಲಿನ ಬೇಗೆಗೆ ತತ್ತರಿಸಿದ ಜನರಿಗೆ ತಂಪೆರೆದ ಜಲರಾಯ.

ಬೆಂಗಳೂರು : ಬಿಸಿಲ ಬೇಗೆಗೆ ತಂಪೆರೆದಂತೆ ಮಂಗಳೂರು ಸೇರಿ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸೇರಿ ಜಿಲ್ಲೆಯ ಹಲವೆಡೆ ಮಳೆ ಸುರಿದಿದೆ. ಉಡುಪಿ,ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮುಂದಿನ 3 ದಿನಗಳ ಕಾಲ ಸಾಧಾರಣ ಮಳೆ ಆಗಬಹುದು ಎಂದು ಹವಮಾನ ಇಲಾಖೆ ಹೇಳಿದೆ.ಇನ್ನುಳಿದಂತೆ ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ವರುಣರಾಯ ಕೃಪೆ ತೋರಲಿದ್ದಾನೆ. ಮಂಗಳೂರು ನಗರದಲ್ಲಿ ಗುಡುಗು ಸಿಡಿಲಿನ ಅಬ್ಬರವೂ ಇತ್ತು. ವರ್ಷದ ಮೊದಲ ಮಳೆ ಸುರಿದಿದ್ದದ್ದು, ಬಿಸಿಲ ಬೇಗೆಗೆ ಕಾದಿದ್ದ ನೆಲಕ್ಕೆ ತುಸು ತಂಪೆರೆಯಿತು.

ಈಗಾಗಲೇ ಬೇಸಿಗೆಯಿಂದ ಸುಸ್ತಾದ ಜನರು ಮಳೆ ಯಾವಾಗ ಬರುತ್ತೋ ಎನ್ನುತ್ತಿದ್ದಾರೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ನೀಡಿದ ಮಾಹಿತಿ ಕೊಂಚ ನೆಮ್ಮದಿ ಎನಿಸಿದೆ.ಬರಪೀಡಿತ ಮಂಗಳೂರು ನಗರ ಕೂಡ ಈ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿದೆ. ನಗರಕ್ಕೆ ನೀರು ಪೂರೈಕೆಯ ಪ್ರಮುಖ ಮೂಲವಾಗಿರುವ ನೇತ್ರಾವತಿ ನದಿಯಲ್ಲಿ ಬೇಸಗೆಗೂ ಮುನ್ನವೇ ನೀರು ಕಡಿಮೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಹಲವು ಟೆಕ್ ಉದ್ಯೋಗಿಗಳು ಬೆಂಗಳೂರನ್ನು ಬಿಟ್ಟು ಹೋಗಿರುವ ಸಂಭವ ಹೆಚ್ಚಾಗಿದೆ.ಮುಂದೆ ಇದೆ ರೀತಿ ಸಮಸ್ಯೆ ಉಂಟಾದರೆ ಐಟಿ,ಬಿಟಿ ಕಂಪೆನಿಗಳು ಬೆಂಗಳೂರನ್ನು ತೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ.ಈ ಬಗ್ಗೆ ಸರಕಾರ ಹೆಚ್ಚೆತ್ತು ಸರಿಯಾದ ಕ್ರಮ ಕೈಗೊಂಡು ನೀರಿನ ಸಮಸ್ಯೆಯನ್ನು ಸರಿದೂಗಿಸಿದರೆ ಮುಂದೆ ಬರುವ ಗಂಡಾಂತರದಿಂದ ಪರಾಗಬಹುದೆಂಬುದು ಬೆಂಗಳೂರಿನ ನಿವಾಸಿಗಳ ಮಾತು.

RELATED ARTICLES

LEAVE A REPLY

Please enter your comment!
Please enter your name here

Most Popular