Friday, November 22, 2024
Flats for sale
Homeರಾಜ್ಯಬೆಂಗಳೂರು : ದಂಡ ವಸೂಲಿಗೆ ವಾಹನ ಮಾಲೀಕರ ಮನೆಗೆ ಬರಲಿದ್ದಾರೆ ಖಾಕಿ ಪಡೆ,ಶಾಲಾ ಮಕ್ಕಳಿಗೂ ಹೆಲ್ಮೆಟ್...

ಬೆಂಗಳೂರು : ದಂಡ ವಸೂಲಿಗೆ ವಾಹನ ಮಾಲೀಕರ ಮನೆಗೆ ಬರಲಿದ್ದಾರೆ ಖಾಕಿ ಪಡೆ,ಶಾಲಾ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ.

ಬೆಂಗಳೂರು : ಬೆಂಗಳೂರು ಅಂದರೆ ಲಕ್ಷಾನುಗಟ್ಟಲೆ ವಾಹನಗಳಿವೆ ಆದರೆ ಅತಿವೇಗ ,ವೀಲಿಂಗ್ ,ಸಿಗ್ನಲ್ ಜಂಪ್ ಪೊಲೀಸರನ್ನು ಜನರು ಕೇರ್ ಮಾಡದ ಕಾರಣ ಪೊಲೀಸ್ ಇಲಾಖೆ ಹೆಚ್ಚೆತ್ತು ಹೊಸ ನಿಯಮ ಜಾರಿಗೊಳಿಸಿದೆ . ಸಂಚಾರ ನಿಯಮ ಉಲ್ಲಂಘನೆ ಮಾಡೋದನ್ನೆ ಕಾಯಕ ಮಾಡಿಕೊಂಡಿದ್ದ ಬೆಂಗಳೂರಿಗರು ಪ್ರತಿದಿನ ಸಂಚಾರ ನಿಯಮ‌ ಉಲ್ಲಂಘನೆ ಮಾಡಿ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ‌ ರೀತಿ ಇದ್ದಾರೆ. ಅಂತಹ ವಾಹನ ಸವಾರರಿಗೆ ಶಾಕ್ ಕೊಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.ಇನ್ನು ಮುಂದೆ ಮನೆಬಾಗಿಲಿಗೆ ಬಂದು ದಂಡ ವಸೂಲಿ ಮಾಡುವ ಕೆಲಸ ಶುರು ಮಾಡಿದ್ದಾರೆ‌.

ಬೆಂಗಳೂರಿನಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್​ ಕಡ್ಡಾಯ. ಶಾಲೆಗೆ ಬಿಡುವಾಗ ಮಕ್ಕಳಿಗೆ ಹೆಲ್ಮೆಟ್​ ಕಡ್ಡಾಯವಾಗಿ ಹಾಕಬೇಕು ಎಂದು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ಶಾಲೆಗಳ ಬಳಿ ಸ್ಪೇಷಲ್ ಡ್ರೈವ್ ನಡೆಸುತ್ತಿದ್ದ ವೇಳೆ ಪುಟ್ಟ ಮಕ್ಕಳು ಹೆಲ್ಮೆಟ್ ಇಲ್ಲದೆ ಬಂದ ಹಿನ್ನಲೆ 6 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವಾಗ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಮೂರಕ್ಕೂ ಹೆಚ್ಚು ಮಕ್ಕಳನ್ನು ಗಾಡಿಯಲ್ಲಿ ಕರೆದುಕೊಂಡು ಹೋಗೋ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಶಾಲಾಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಆಟೋ, ಖಾಸಗಿ ಕಾರು, TT ವಾಹನಗಳಲ್ಲಿ ನಿಗದಿತ ಮಿತಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವವರ ವಿರುದ್ಧವೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular