ಬೆಂಗಳೂರು : ದಿನದಿಂದ ದಿನಕ್ಕೆ ಏರುತ್ತಿರುವ ಚಳಿಯಿಂದಾಗಿ ಬಾಳೆ ಇಳುವರಿಯಲ್ಲಿ ತೀವ್ರ ಕುಸಿತ ಕಂಡಿದ್ದು, ಬಾಳೆಹಣ್ಣಿನ ದರ ದುಬಾರಿಯಾಗಿದೆ. ಮಾರುಕಟ್ಟೆಯಲ್ಲಿ ಕೇಜಿಯೊಂದಕ್ಕೆ 50 ರಿಂದ 60 ರೂ ಇದ್ದುದು ಇದೀಗ 65 ರಿಂದ 75 ರೂಗೆ ಏರಿಕೆಯಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಹಾಸನ ಮತ್ತು ದಕ್ಷಿಣಕನ್ನಡ, ಉತ್ತರ ಕರ್ನಾಟಕದ ಕೆಲವು ಭಾಗ ಸೇರಿದಂತೆ ಅನೇಕ ಜಿಲ್ಲೆಗಳ ನೀರಾವರಿ ಪ್ರದೇಶಗಳಲ್ಲಿ ಏಲಕ್ಕಿ ಮತ್ತು ಕ್ಯಾವೆಂಡಿಷ್ ತಳಿಯ ಬಾಳೆ ಬೆಳೆಯಲಾಗುತ್ತಿದೆ. ತೀವ್ರ ಚಳಿಯಿಂದಾಗಿ ಬಾಳೆಹಣ್ಣಿನ ಬಣ್ಣ ಕಪ್ಪಾಗುತ್ತಿದ್ದು ಮಾರುಕಟ್ಟೆಯಲ್ಲಿ ಹೋಲ್‌ಸೇಲ್ ಮತ್ತು ರಿಟೇಲ್ ದರದಲ್ಲಿ ಪ್ರತಿಬಾರಿಯಂತೆ ಮಾರಾಟವಾಗುತ್ತಿಲ್ಲ. ಮತ್ತೆ ನಮ್ಮನ್ನು ಸಾಲಗಾರನನ್ನಾಗಿ ಮಾಡುತ್ತಿದೆ ಎಂದು ರೈತರು ಗೋಳಾಡುತ್ತಿದ್ದಾರೆ.
ಕೇವಲ ಕರ್ನಾಟಕವಲ್ಲದೇ ಪಕ್ಕದ ಮಹಾರಾಷ್ಟç, ಆಂಧ್ರಪ್ರದೇಶದಲ್ಲಿಯೂ ಇಂಥದ್ದೇ ಪರಿಸ್ಥಿತಿ ತಲೆದೋರಿದೆ. ಆಮದು ಮತ್ತು ರಫ್ತು ಎರಡೂ ಆಗುತ್ತಿಲ್ಲ. ಮಹಾರಾಷ್ಟ್ರದ ನಂತರ ಕರ್ನಾಟಕ ಮೂರನೇ ಅತಿದೊಡ್ಡ ಬಾಳೆ ಉತ್ಪಾದಕದ ರಾಜ್ಯವಾಗಿದ್ದು 1.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೇವಲ 29.73 ಲಕ್ಷ ಇಳುವರಿ ಬಂದಿದೆ. ತೀವ್ರ ಚಳಿ ಕಾರಣ ಆರಂಭಿಕ ಹಂತದಲ್ಲಿರುವ ಶೇ. 25 ಕ್ಕಿಂತ ಹೆಚ್ಚು ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಮಣ್ಣಿನಲ್ಲಿ ಸತ್ವ ಮತ್ತು ಬೋರಾನ್ ಕೊರತೆಯಿದ್ದರೆ ತೀವ್ರ ಶೀತಕ್ಕೆ ಹೆಚ್ಚು ಒಳಗಾಗುತ್ತವೆ. ಸಸ್ಯಗಳ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ಷ್ಮ ಪೋಷಕಾಂಶಗಳನ್ನು ಬಳಸಬೇಕು ಎಂದು ತೋಟಗಾರಿಕೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ರಾಜ್ಯಗಳ ರೈತರಿಂದ ಬಾಳೆಹಣ್ಣನ್ನು ಖರೀದಿಸುತ್ತಿದ್ದೇವೆ. ಆದರೆ ಈ ವರ್ಷ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಗುಣಮಟ್ಟ ಕುಸಿದ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದೆ ಆಂಧ್ರಪ್ರದೇಶದ ರೈತರು ಕ್ವಿಂಟಲ್‌ಗೆ 26೦೦ ರೂ.ಗಳನ್ನು ಪಡೆಯುತ್ತಿದ್ದಾರೆ, ಏಕೆಂದರೆ ಇದು ಶೀತ ಹವಾಮಾನವನ್ನು ತಡೆದುಕೊಳ್ಳುವ ಕೆಂಪು ಮಣ್ಣನ್ನು ಹೊಂದಿದೆ ಎಂದು ಹೇಳುತ್ತಾರೆ. ಅಲ್ಲದೇ ಅಫ್ಜಲ್‌ಪುರ ತಾಲ್ಲೂಕಿನ ರೈತ ಶಂಕರ್ ಮಯಕೇರಿ ಅವರ ಪ್ರಕಾರ, ತಮ್ಮ 10 ಎಕರೆ ಕೃಷಿ ಭೂಮಿಯಲ್ಲಿನ 30-40% ಬೆಳೆ ತೀವ್ರ ಚಳಿಯಿಂದಾಗಿ ಹಾನಿಗೊಳಗಾಗಿದ್ದು, ಬಾಳೆ ಬೆಳೆಗಾರರನ್ನು ರಕ್ಷಿಸಲು ಪ್ರತ್ಯೇಕ ಮಂಡಳಿ ಸ್ಥಾಪಿಸಬೇಕೆAದು ಒತ್ತಾಯಿಸಿದ್ದಾರೆ.