Friday, March 27, 2026
Flats for sale
Homeರಾಜ್ಯಬೆಂಗಳೂರು : ತರಗತಿ ನಡೆಯುತ್ತಿರುವಾಗಲೇ ಎಲ್ಲರ ಮುಂದೆಯೇ ಮೆಡಿಕಲ್ ವಿದ್ಯಾರ್ಥಿನಿಗೆ ಪ್ರಪೋಸ್ ಮಡಿದ ಲೆಕ್ಚರರ್ ಗೆ...

ಬೆಂಗಳೂರು : ತರಗತಿ ನಡೆಯುತ್ತಿರುವಾಗಲೇ ಎಲ್ಲರ ಮುಂದೆಯೇ ಮೆಡಿಕಲ್ ವಿದ್ಯಾರ್ಥಿನಿಗೆ ಪ್ರಪೋಸ್ ಮಡಿದ ಲೆಕ್ಚರರ್ ಗೆ ಚಪ್ಪಲಿ ಏಟು.

ಬೆಂಗಳೂರು : ತರಗತಿ ನಡೆಯುತ್ತಿರುವಾಗಲೇ ಎಲ್ಲರ ಮುಂದೆಯೇ ಮೆಡಿಕಲ್ ವಿದ್ಯಾರ್ಥಿನಿಗೆ ಚಾಕೋಲೆಟ್ ಕೊಟ್ಟು ಪ್ರಾಧ್ಯಾಪಕರೊಬ್ಬರು `ಐ ಲವ್ ಯೂ’ ಎಂದು ಪ್ರಪೋಸ್ ಮಾಡಿ ಚಪ್ಪಲಿ ಏಟು ತಿಂದ ಲೆಕ್ಚರರ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರೊ. ಅಬ್ದುಲ್ ವಿರುದ್ಧ ನೆಲಮಂಗಲದ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ನೆಲಮAಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಬೆನ್ನಲ್ಲೇ ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ವಿವರ: ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಇರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಈ ಹೈಡ್ರಾಮಾ ನಡೆದಿದೆ. ತರಗತಿಯಲ್ಲಿ ಪಾಠ ನಡೆಯುತ್ತಿದ್ದ ವೇಳೆ ಪ್ರೊ.ಅಬ್ದುಲ್ ಏಕಾಏಕಿ ವಿದ್ಯಾರ್ಥಿನಿಯ ಬಳಿ ತೆರಳಿ ಚಾಕೊಲೇಟ್ ನೀಡಿ `ಐ ಲವ್ ಯೂ’ ಎಂದುಪ್ರಪೋಸ್ ಮಾಡಿದ್ದಾನೆ. ಪ್ರಾಧ್ಯಾಪಕನ ಈ ಅನಿರೀಕ್ಷಿತ ವರ್ತನೆಯಿಂದ ದಂಗಾದ ವಿದ್ಯಾರ್ಥಿನಿ, ತಕ್ಷಣವೇ ತರಗತಿಯಲ್ಲೇ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಹಿಂದೆ ನೀನೇ ನನಗೆ ಪ್ರಪೋಸ್ ಮಾಡಿರಲಿಲ್ಲವೇ ಎಂದು ಪ್ರೊ.ಅಬ್ದುಲ್ ಮರುಪ್ರಶ್ನೆ ಹಾಕುವ ಮೂಲಕ ತನ್ನ ತಪ್ಪನ್ನು ಮುಚ್ಚಿಹಾಕಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಇದಕ್ಕೆ ಸಾಕ್ಷಿಯಾಗಿ ನನ್ನ ಬಳಿ ಸಿಸಿಟಿವಿ ದೃಶ್ಯಾವಳಿಗಳಿವೆ ಎಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ವಿದ್ಯಾರ್ಥಿನಿ, ಹಾಗಾದರೆ ಈಗಲೇ ಆ ಸಿಸಿಟಿವಿವಿಡಿಯೋ ತೋರಿಸು, ಸಾಕ್ಷಿ ಕೊಡು ಎಂದು ಪಟ್ಟುಹಿಡಿದಿದ್ದಾಳೆ.

ವಿದ್ಯಾರ್ಥಿನಿಯ ಆಕ್ರೋಶ ಕಂಡು ಕಕ್ಕಾಬಿಕ್ಕಿಯಾದ ಲೆಕ್ಚರರ್, ಈ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಕ್ಲಾಸ್ ರೂಮ್‌ನಿಂದ ಹೊರನಡೆಯಲು ಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ, ಚಪ್ಪಲಿ ತೆಗೆದು ಪ್ರೊಫೆಸರ್‌ಗೆ ತರಗತಿಯಲ್ಲೇ ಥಳಿಸಿದ್ದಾಳೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪರ ನಿಂತ ಇತರೆ ವಿದ್ಯಾರ್ಥಿಗಳು ಸಹ ಪ್ರಾಧ್ಯಾಪಕನಿಗೆ ಜೊತೆಗೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular