Saturday, March 14, 2026
Flats for sale
Homeರಾಜ್ಯಬೆಂಗಳೂರು ; ತಂದೆ ಜತೆಗೆ ಕಾರ್ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು...

ಬೆಂಗಳೂರು ; ತಂದೆ ಜತೆಗೆ ಕಾರ್ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು 5 ವರ್ಷದ ಮಗು ದಾರುಣ ಸಾವು.

ಬೆಂಗಳೂರು ; ತಂದೆ ಜತೆ ಸೇರಿ ಕಾರು ವಾಶ್‌ ಮಾಡುತ್ತಿರುವಾಗ ತಪ್ಪಿ ಎಕ್ಸಿಲೇಟರ್‌ ತುಳಿದ ಪರಿಣಾಮ ಕಾರು ಅಡ್ಡ ದಿಡ್ಡಿ ಚಲಿಸಿ ಮುಂದುಗಡೆ ಆಟಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಹರಿದು ದಾರುಣ ಸಾವನಪ್ಪಿದ ಘಟನೆ ಹಳೆಯ ಏರ್ ಪೋರ್ಟ್ ಹತ್ತಿರದ ಭೀಮಾನಗರದ ಮುರಗೇಶ್ ಪಾಳ್ಯದಲ್ಲಿ ಈ ದುರಂತ ಸಂಭವಿಸಿದೆ.

ಬೆಂಗಳೂರಿನ ಆರವ್ (5) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ನಿನ್ನೆ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ನಡೆದಿದೆ. 15 ವರ್ಷದ ಬಾಲಕನೊರ್ವ ತಂದೆಯ ಜತೆ ಕಾರ್ ವಾಶ್ ಮಾಡುತ್ತಿದ್ದ. ಇದೇ ವೇಳೆ ಕಾರಿನ ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತ ಬಾಲಕ ಏಕಾಏಕಿ ಎಕ್ಸಿಲೇಟರ್ ಒತ್ತಿದ್ದಾನೆ. ಪರಿಣಾಮ ಕಾರು ರಭಸವಾಗಿ ಚಲಿಸಿದೆ. ಅಲ್ಲೇ ಕಾರ್ ಬಳಿ ಆಟವಾಡುತ್ತಿದ್ದ 5 ವರ್ಷದ ಆರವ್ ಮೇಲೆ ಗುದ್ದಿದೆ.

ಕಾರು ಗುದ್ದಿದ ರಭಸಕ್ಕೆ ಆರವ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆರವ್ ಸಹೋದರ ಧನರಾಜ್ ಹಾಗೂ ತಾಯಿ ಲಲಿತಾಗೂ ಗಂಭೀರ ಗಾಯವಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮೃತದೇಹವು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 5 ವರ್ಷದ ಮಗು ಆರವ್ ಮನೆ ಮುಂದೆ ಆಟ ಆಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮಣಿಪಾಲ್ ಆಸ್ಪತ್ರೆಗೆ ಮೃತ ದೇಹ ತರಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಆರವ್ ಸಹೋದರ ಧನರಾಜ್ ಹಾಗೂ ತಾಯಿ ಲಲಿತಾಗೂ ಗಂಭೀರ ಗಾಯಗಳಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಮಗನನ್ನು ಬಚಾವ್ ಮಾಡಲು ತಾನೇ ಕಾರು ಓಡಿಸಿದ್ದು ಎಂದು ತಂದೆ ತ್ಯಾಮರೇಕಣ್ಣನ್‌ ಹೇಳಿಕೊಂಡಿದ್ದಾರೆ. ಆದರೆ ಕಾರು ಓಡಿಸಿದ್ದು ತಂದೆಯಲ್ಲ ಆ ಬಾಲಕನೇ ಕಾರು ಓಡಿಸಿದ್ದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತವಾದ ಬಳಿಕ ತ್ಯಾಮರೇಕಣ್ಣನ್‌ ಓಡಿಬಂದು ಕಾರು ಹತ್ತಿದರು. ಬಾಲಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular