ಬೆಂಗಳೂರು ; ಪೆನ್ ಡ್ರೈವ್ ಹಂಚುವ ಮೂಲಕ ಹೆಣ್ಣು ಮಕ್ಕಳ ಮಾನ ಮರ್ಯಾದೆ ಹರಾಜು
ಹಾಕಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು
ಒತ್ತಾಯಿಸಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಪ್ರತಿಭಟಯಲ್ಲಿ ಡಿಕೆ ಶಿವಕುಮಾರ್, ಹಾಗೂ ಶಿವರಾಮ್ ರವರ ಬಾವ ಚಿತ್ರಗಳಿಗೆ ಚಪ್ಪಲಿ ಮತ್ತು ಪೊರಕೆ ಯಿಂದ ಹೊಡೆದು ದಿಕ್ಕಾರ ಕೂಗಿದರು.ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ . ಶಿವಕುಮಾರ್ ಮತ್ತು ಟ್ರೋಕರ್ ಶಿವರಾಮ್ ವಿರುದ್ಧ ಧಿಕ್ಕಾರ ಕೂಗಿದರು.
ತಪ್ಪು ಮಾಡಿದ್ದರೆ ಪ್ರಜ್ವಲ್ ರೇವಣ್ಣ ಮೇಲೆ ಕ್ರಮವಾಗಲಿ.ಹಾಗೆಯೇ ಈ ಕೇಸ್ ಅನ್ನು ಎಸ್‌ಐಟಿ ಬದಲಿಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು ಹಾಗೂ ವಿಡಿಯೋಗಳನ್ನ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಲು ಬಿಟ್ಟ ಆರೋಪಿಗಳ ಮೇಲೂ ಕ್ರಮ ಜರುಗಿಸಬೇಕೆಂದು ರಾಜ್ಯಾದಂತ ಜೆಡಿಎಸ್ ಕಾರ್ಯ ಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಜೆಡಿಎಸ್ ಪಕ್ಷದಲ್ಲಿಯೇ ಇದ್ದು ದ್ರೋಹ ಬಗೆದ ಬೋಕರ್ ಶಿವರಾಮೇಗೌಡಗೆ ಹಾಗೂ ರೂವಾರಿ ಡಿಕೆಶಿಯ ಕುತಂತ್ರದಿಂದ ಜೆಡಿಎಸ್ ಪಕ್ಷದಲ್ಲಿ ಯಾವುದೇ ತೊಂದರೆಯಿಲ್ಲ. ಮಾಜಿ ಪ್ರಧಾನಿ ದೇವೇಗೌಡರುಮತ್ತು ಕುಮಾರಸ್ವಾಮಿ ರವರ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ ಸದಾ ಅವರ ಬೆಂಬಲವಾಗಿ ನಾವಿದ್ದೇವೆ ಎಂದರು.
ತಾಲೂಕು ಅಧ್ಯಕ್ಷರಾದ ಆರ್.ಮುನೇಗೌಡ ಮಾತ ನಾಡಿದರು. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ. ಮುನೇಗೌಡ, ರಾಜ್ಯ ಕಮಿಟಿಯ ಸದಸ್ಯ ಬೂದಿ ಗೆರೆಯ ಶ್ರೀನಾಥ್ ಗೌಡ, ರಾಮಾಂಜಿನೇಯದಾಸ್, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪುರಸಭಾ ಸದಸ್ಯರಾದ ನಾಗೇಶ್, ಮುಖಂಡರಾದ ಕಾಮೇನಹಳ್ಳಿ ರಮೇಶ್, ಮನಗೊಂಡನಹಳ್ಳಿ, ಪ್ರಸನ್ನ ಕುಂದಾಣ ಲಕ್ಷ್ಮಣ್ , ಭರತ್, ಕೋಮಲ,ಮೀನಾಕ್ಷಿ ಮುನಿಕೃಷ್ಣಪ್ಪ ಕಾರಾಹಳ್ಳಿ ದೇವ ರಾಜ್ ಸೇರಿದಂತೆ ಅನೇಕ ಮುಖಂಡರು ಭಾಗಿ ಯಾಗಿದ್ದರು.