Saturday, March 14, 2026
Flats for sale
Homeರಾಜ್ಯಬೆಂಗಳೂರು : ಟ್ರಕ್ಕಿಂಗ್‌ ಪ್ರಿಯರಿಗೆ ಶಾಕ್‌ : ರಾಜ್ಯದಲ್ಲಿ ತಾತ್ಕಾಲಿಕವಾಗಿ ಚಾರಣಕ್ಕೆ ನಿರ್ಬಂಧ!

ಬೆಂಗಳೂರು : ಟ್ರಕ್ಕಿಂಗ್‌ ಪ್ರಿಯರಿಗೆ ಶಾಕ್‌ : ರಾಜ್ಯದಲ್ಲಿ ತಾತ್ಕಾಲಿಕವಾಗಿ ಚಾರಣಕ್ಕೆ ನಿರ್ಬಂಧ!

ಬೆಂಗಳೂರು : ಕಳೆದ ಹಲವು ದಿನಗಳಿಂದ ಸುರಿಯುವ ಜಡಿ ಮಳೆಯಿಂದಾಗಿ ರಾಜ್ಯದಲ್ಲಿ ಹಲವು ಸಾವುನೋವು ಸಂಭವಿಸದ ವರದಿಯಾಗಿದೆ .ಹಾಗೂ ಅಲ್ಲಲ್ಲಿ ಗುಡ್ಡ ಕುಸಿಯುವುದು ಸಹ ಕಂಡುಬಂದಿದೆ. ಇದೀಗ ಇಕೋ ಟೂರಿಸಂ ಬದಲು ಅರಣ್ಯ ಇಲಾಖೆ ಚಾರಣ ನಿರ್ವಹಣೆ ಮಾಡಲು ಮುಂದಾಗಿದೆ. ಇದರಿಂದ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗಸ್ಟ್1, 2024 ರಿಂದ ತಾತ್ಕಾಲಿಕವಾಗಿ ಚಾರಣ ತಡೆಹಿಡಿಯಲಾಗಿದೆ ಎಂದು ಚಿಕ್ಕಬಳ್ಳಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.

ಪ್ರಕೃತಿ ಸೊಬಗು ಹಾಗೂ ಚಾರಣಕ್ಕೆ ಖ್ಯಾತಿಯಾಗಿರುವ ಸ್ಕಂದಗಿರಿ, ಕೈವಾರಬೆಟ್ಟ, ಮಾಕಳಿದುರ್ಗ, ಅಂತರಗಂಗೆ, ಸಾವನದುರ್ಗ, ಬಿದರುಕಟ್ಟೆ, ರಾಮದೇವರಬೆಟ್ಟ, ಚಿನಾಗ್‌ಬೆಟ್ಟ, ಸಿದ್ದರಬೆಟ್ಟ ಸೇರಿದಂತೆ ರಾಜ್ಯಾದ್ಯಂತ ಇರುವ 21ಕ್ಕೂ ಹೆಚ್ಚು ಚಾರಣ ಸ್ಥಳಗಳಿಗೆ ರಾಜ್ಯ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ.

ಇತ್ತೀಚ್ಚಿಗೆ ಚಾರಣಿಗರಿಂದ ಹಣ ಪಡೆದು ಇಲಾಖೆಗೆ ಹಣ ಪಾವತಿಸದ ಆರೋಪ ಎಂದು ವರದಿಯಾಗಿತ್ತು. ಇದರಿಂದ ಎಚ್ಚೇತ್ತ ಅರಣ್ಯ ಇಲಾಖೆ ತಡವಾಗಿ ಕ್ರಮ ಕೈಗೊಂಡಿದೆ. ಇದರಿಂದ ಸ್ವತಃ ಅರಣ್ಯ ಇಲಾಖೆಯಿಂದಲೇ ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ನಿರ್ವಹಣೆ ಮಾಡಲು ಮುಂದಾಗಿದೆ.ಒಟ್ಟಿನಲ್ಲಿ ಇಲಾಖೆಯಲ್ಲಿ ಇರುವ ಲೋಪದೋಷಗಳನ್ನು ಸರಿದೊಗಿಸಲು ಸರಿಯಾದ ಸಮಯವೆಂದು ತಿಳಿದು ತಾತ್ಕಾಲಿಕವಾಗಿ ಚಾರಣಕ್ಕೆ ನಿರ್ಬಂಧ ವಿಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular