ಬೆಂಗಳೂರು : ಟ್ಯಾಟೂಗಳು ದೀರ್ಘಕಾಲದವರೆಗೆ ಸ್ವಯಂ ಅಭಿವ್ಯಕ್ತಿ ಮತ್ತು ಕಲಾತ್ಮಕತೆಯ ಸಂಕೇತವಾಗಿದೆ, ಅಸಂಖ್ಯಾತ ವ್ಯಕ್ತಿಗಳು ತಮ್ಮ ದೇಹವನ್ನು ಸಂಕೀರ್ಣವಾದ ವಿನ್ಯಾಸಗಳು ಮತ್ತು ಅರ್ಥಪೂರ್ಣ ಚಿಹ್ನೆಗಳೊಂದಿಗೆ ಅಲಂಕರಿಸಲು ಆಯ್ಕೆ ಮಾಡುತ್ತಾರೆ. ಆದಾಗ್ಯೂ, ವೈದ್ಯಕೀಯ ವೃತ್ತಿಪರರ ಇತ್ತೀಚಿನ ಎಚ್ಚರಿಕೆಗಳು ಶಾಯಿಯನ್ನು ಬಳಸುವುದರಿಂದ ಸಂಬಂಧಿಸಿದ ಸಂಭಾವ್ಯ ಆರೋಗ್ಯದ ಅಪಾಯಗಳ ಬೀರುತ್ತದೆಂದು ಅರೋಗ್ಯ ಇಲಾಖೆ ತಿಳಿಸಿದೆ.
ವೈದ್ಯರ ಪ್ರಕಾರ, ಹಚ್ಚೆ ಹಾಕುವ ಪ್ರಕ್ರಿಯೆಯು ಹೆಪಟೈಟಿಸ್ ಬಿ, ಸಿ ಮತ್ತು ಎಚ್‌ಐವಿಯಂತಹ ರೋಗಗಳನ್ನು ಹರಡುವ ಗಮನಾರ್ಹ ಅಪಾಯವನ್ನು ಹೊಂದಿದೆ, ಪ್ರಾಥಮಿಕವಾಗಿ ಪರಿಣತರಲ್ಲದ ಕೈಗಳಲ್ಲಿ ಕಲುಷಿತ ಸೂಜಿಗಳನ್ನು ಬಳಸುವುದರಿಂದ ಈ ಸಮಸ್ಯೆಗಳು ಉಂಟಾಗುತ್ತಯೆಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಟ್ಯಾಟೂ ಹಾಕಿಸಿಕೊಳ್ಳುವ ಮತ್ತು ಹಾಕುವವರಮೇಲೆ ಹೊಸ ಕಾನೂನು ಜಾರಿಗೆ ತರಲು ಯೋಜಿಸಿದೆ .ಹೊಸ ಕಾನೂನಿನ ಮೂಲಕ ಅವೈಜ್ಞಾನಿಕವಾಗಿ, ಬೇಕಾಬಿಟ್ಟಿಯಾಗಿ, ಎಲ್ಲೆಂದರಲ್ಲಿ ಟ್ಯಾಟೂ ಹಾಕುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಹೊರಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಅನೈರ್ಮಲ್ಯದಿಂದ ಉಂಟಾಗುವ ಸೋಂಕು ತಡೆಯುವ ಉದ್ದೇಶ ಹೊಂದಿದೆ. ಈ ಕಾನೂನು ಟ್ಯಾಟೂ ಆರ್ಟಿಸ್ಟ್‌ಗಳಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊಂದಿರುತ್ತದೆ. ಚರ್ಮದ ಕ್ಯಾನ್ಸರ್ ಮತ್ತು ಹೆಚ್ಐವಿಯಂತಹ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುವುದು ಇದರ ಉದ್ದೇಶ ಎಂದು ಸ್ಪಷ್ಟಪಡಿಸಿದೆ.
ಇತ್ತೀಚ್ಚಿಗೆ ಚರ್ಮ ಕ್ಯಾನ್ಸರ್, ಹೆಚ್ಐವಿ ಹಾಗೂ ಚರ್ಮ ರೋಗ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಹಾಗೂ ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಮಾರಣಾಂತಿಕ ಸೋಂಕುಗಳು ಜನರಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸಿದಾಗ ಈ ಸೋಂಕುಗಳು ಹರಡಲು ಟ್ಯೂಟೂ ಕೂಡ ಒಂದು ಕಾರಣವಾಗಿದೆ. ಮೊದಲ ಬಾರಿಗೆ ರಾಜ್ಯ ಸರ್ಕಾರ ಟ್ಯಾಟೂಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದು . ಟ್ಯಾಟೂ ಹಾಕಿಸಿಕೊಳ್ಳುವರು ಕಡ್ಡಾಯವಾಗಿ ವೈದ್ಯರಿಂದ ತಪಾಸಣೆ ಪತ್ರ ಪಡೆದಿರಬೇಕು. ಟ್ಯಾಟೂ ಹಾಕುವರು ತಾವು ಬಳಸುವ ಬಣ್ಣ, ಕ್ಯಮಿಕಲ್, ಸೂಜಿ ಮತ್ತು ಸ್ವಚ್ಛತೆ ಕುರಿತಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತಹ ಹೊಸ ಮಾರ್ಗಸೂಚಿಗಳೊಂದಿಗೆ ಹೊಸ ಕಾನೂನು ಜಾರಿಗೆ ಮಾಡಲು ಮುಂದಾಗಿದೆ ಎಂದು ಮಾಹಿತಿ ದೊರೆತಿದೆ.