Wednesday, October 22, 2025
Flats for sale
Homeಕ್ರೈಂಬೆಂಗಳೂರು : ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣ : ಆರೋಪಿಗಳಿಗೆ ನ್ಯಾಯಾಂಗ ಬಂಧನ..!

ಬೆಂಗಳೂರು : ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣ : ಆರೋಪಿಗಳಿಗೆ ನ್ಯಾಯಾಂಗ ಬಂಧನ..!

ಬೆಂಗಳೂರು : ಉತ್ತರ ಪ್ರದೇಶ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧ ಮೂವರು ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿರುವ ಮಾರತ ಹಳ್ಳಿ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದೆ.

ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ತಹಳ್ಳಿ ಪೊಲೀಸರು ಬರುತ್ತಿರುವ ವಿಚಾರ ತಿಳಿದ ಅತುಲ್ ಅವರ ಪತ್ನಿ ನಿಖಿತಾ, ಅತ್ತೆ ನಿಶಾ ಸಿಂಘಾನಿಯಾ ಮತ್ತು ಭಾಮೈದ ಅನುರಾಗ್ ಮನೆಯಿಂದ
ಪರಾರಿಯಾಗಿದ್ದರು. ಕೊನೆಗೆ ಪೊಲೀಸರು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದರು. ಆದರೆ,ಆರೋಪಿಗಳನ್ನು ವಶಕ್ಕೆ ಪಡೆಯುವ ಪಣ ತೊಟ್ಟಿದ್ದ ಕರ್ನಾಟಕ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.

ಪೋನ್ ಕಾಲ್‌ನಿಂದ ಬಲೆಗೆ:

ಆರೋಪಿಗಳು ದಿನಕ್ಕೊಂದು ಸ್ಥಳ ಬದಲಾಯಿಸುತ್ತಿದ್ದರು. ದೂರವಾಣಿ ಮೂಲಕ ಯಾರೆಲ್ಲ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುವುದರ ಮಾಹಿತಿ ಪಡೆದು, ಅವರ ಮೇಲೆಯೂ ನಿಗಾ ಇಟ್ಟಿದ್ದರು. ಆರೋಪಿಗಳು ಬರೀ ವಾಟ್ಸಪ್ ಕಾಲ್ ಮಾಡುತ್ತಿದ್ದರು. ಇದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಆದರೆ, ಆ ಒಂದು ಕಾಲ್‌ನಿAದ ಪೊಲೀಸರ ಬಲೆಗೆ ಬಿದ್ದರು.

A1 ನಿಖಿತಾ ಸ್ಥಳ ಬದಲಾಯಿಸುವಾಗ ಮಿಸ್ ಆಗಿ ಪರಿಚಯಸ್ಥರಿಗೆ ಕಾಲ್ ಮಾಡಿದ್ದಳು. ಆಗ, ನಿಖಿತಾ ಇರುವ ಸ್ಥಳ ಪೊಲೀಸರಿಗೆ ಗೊತ್ತಾಗಿದೆ. ನಿಖಿತಾ ಮೊಬೈಲ್ ಲೊಕೇಶನ್ ಆಧರಿಸಿ ಬೆನ್ನು ಹತ್ತಿದ ಪೊಲೀಸರು ಹರಿಯಾಣದ ಗುರುಗ್ರಾಮ ತಲುಪಿದ್ದಾರೆ. ಗುರುಗ್ರಾಮದಲ್ಲಿ ನಿಕಿತಾ ರೂಂ ಒAದರಲ್ಲಿ ಒಂಟಿಯಾಗಿದ್ದಳು.

ಟವರ್ ಲೊಕೇಷನ್:
ಅಲ್ಲಿ ಪೊಲೀಸರು ನಿಖಿತಾಳನ್ನು ವಶಕ್ಕೆ ಪಡೆದರು. ಬಳಿಕ, ನಿಖಿತಾಳ ಕಡೆಯಿಂದಲೇ ಆಕೆಯ ತಾಯಿ ಮತ್ತು ತಮ್ಮನಿಗೆ ಕರೆ ಮಾಡಿಸಿ,ಪ್ರಯಾಗ್‌ರಾಜ್‌ನಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದರು. ಬಳಿಕ ಅವರ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಸ್ಥಳಕ್ಕೆ ತೆರಳಿ A2 ನಿಶಾ ಸಿಂಘಾನಿಯಾ ಮತ್ತು ಎ೩ ಸಹೋದರ ಅನುರಾಗ್‌ನನ್ನು ಪ್ರಯಾಗ್‌ರಾಜ್‌ನಲ್ಲಿ ಬಂಧಿಸಿದರು.

ಪೊಲೀಸರು ಟ್ರಾನ್ಸಿಸ್ಟ್ ವಾರೆಂಟ್ ಪಡೆಯದೇ ಕರ್ನಾಟಕಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ. ಬೇರೆ ರಾಜ್ಯದಲ್ಲಿರುವ ಆರೋಪಿಗಳನ್ನು ಬಂಧನ ಮಾಡಿದ ಬಳಿಕ, ಅಲ್ಲಿನ ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆಯಬೇಕು. ಇಲ್ಲವಾದರೆ ಬಂಧನ ಮಾಡಿದ 24 ಗಂಟೆಯ ಒಳಗಾಗಿ ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು.

ಜಾಮೀನು ಕೋರಿ ಅರ್ಜಿ:
ಮಾರತ್ತಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅಲ್ಲಿನ ನ್ಯಾಯಾಲಯದ ಮುಂದೆ ಹಾಜರು ಪಡಿಸದೆ ತಕ್ಷಣವೇ ಟಿಕೇಟ್ ಖರೀದಿಸಿ ವಿಮಾದ ಮೂಲಕ ಬೆಂಗಳೂರಿಗೆ ಕರೆತAದಿದ್ದಾರೆ. ಇಲ್ಲಿ, 24 ಗಂಟೆ
ಕಳೆಯುವುದರ ಒಳಗಾಗಿ ಹೇಳಿಕೆ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಬಳಿಕ ನ್ಯಾಯಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇನ್ನು, ಅವಶ್ಯಕತೆ ಇದ್ದರೇ ಬಾಡಿ ವಾರೆಂಟ್ ಮೂಲಕ
ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆಯಬಹುದಾಗಿದೆ.

ಪೊಲೀಸರು ಮೂವರು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತ, ಜಾಮೀನು ಕೋರಿ ಅರ್ಜಿ ಸಲ್ಲಿಕೆಗೆ ಮೂವರು ಆರೋಪಿಗಳ ಸಿದ್ದತೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular