ಬೆಂಗಳೂರು : ಇಂದು ರಾಮನವಮಿ ಇದು ಭಾರತ ದೇಶ ಇಲ್ಲಿ ಎಲ್ಲಾ ಅನ್ನೋನ್ಯತೆಯಿಂದ ಬಾಳುತಿದ್ದರೆಂದು ಸಿದ್ದರಾಮಯ್ಯ ಸರಕಾರ ಹೇಳುತ್ತಿದ್ದರೆ ಇಲ್ಲೊಂದು ಜಿಹಾದಿಗಳು ಕಾರನ್ನು ಅಡ್ಡಗಟ್ಟಿ ಹಲ್ಲೆಮಾಡಿದ ಘಟನೆ ವರದಿಯಾಗಿದೆ.
ಆಯೋಧ್ಯೆಯಲ್ಲಿ ಸೂರ್ಯನ ಕಿರಣಗಳು ಬಾಲರಾಮನ ಸ್ಪರ್ಶಿಸಿದರೆ, ದೇಶದ ವಿವಿದೆ ಇರುವ ಶ್ರೀರಾಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದೆ. ಇದರ ನಡುವೆ ಬೆಂಗಳೂರಿನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ರಾಮನವಮಿ ಮುಗಿಸಿ ಕಾರಿನಲ್ಲಿ ಸಹಕಾರನಗರಿಂದ ಎಂಎಸ್ ಪಾಳ್ಯಗೆ ತೆರಳುತ್ತಿದ್ದ ಹಿಂದೂ ಯುವಕರನ್ನು ವಿದ್ಯಾರಣ್ಯಪುರ ಚಿಕ್ಕಬೆಟ್ಟನಹಳ್ಳಿ ಮಸೀದಿ ಬಳಿ ಅಡ್ಡಗಟ್ಟಿದ್ದ ಮುಸ್ಲಿಮ್ ಯುವಕರು ವಾರ್ನಿಂಗ್ ಮಾಡಿ ಹಲ್ಲೆ ಮಾಡಿದ್ದಾರೆ. ಕಾರಿಗೆ ಜೈಶ್ರೀರಾಮ್ ಬಾವುಟ ಕಟ್ಟಿ ತೆರಳುತ್ತಿದ್ದ ಕಾರಣ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಯುವಕರು ಹೇಳಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯುತ್ತಿರುವ ಹಾಗೂ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.
ರಾಮನವಮಿ ಮುಗಿಸಿ ಕಾರಿನಲ್ಲಿ ಸಹಕಾರನಗರಿಂದ ಎಂಎಸ್ ಪಾಳ್ಯಗೆ ತೆರಳುತ್ತಿದ್ದ ಹಿಂದೂ ಯುವಕರನ್ನು ವಿದ್ಯಾರಣ್ಯಪುರ ಚಿಕ್ಕಬೆಟ್ಟನಹಳ್ಳಿ ಮಸೀದಿ ಬಳಿ ಅಡ್ಡಗಟ್ಟಿದ್ದ ಮುಸ್ಲಿಮ್ ಯುವಕರು ವಾರ್ನಿಂಗ್ ಮಾಡಿ ಹಲ್ಲೆ ಮಾಡಿದ್ದಾರೆ. ಕಾರಿಗೆ ಜೈಶ್ರೀರಾಮ್ ಬಾವುಟ ಕಟ್ಟಿ ತೆರಳುತ್ತಿದ್ದ ಕಾರಣ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಯುವಕರು ಹೇಳಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯುತ್ತಿರುವ ಹಾಗೂ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.
ಈ ರೀತಿ ಸರಕಾರ ಇಂತಹ ಮತಾಂಧರಿಗೆ ಜೈ ಎಂದರೆ ಮುಂದೆ ಹಿಂದೂಗಳ ಗತಿಏನೆಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.ಕಾರಿನಲ್ಲಿ ಹೋಗುವಾಗ ಇಬ್ಬರು ಮುಸ್ಲಿಂ ಯುವಕರು ಅಡ್ಡಹಾಕಿ ‘ಕಾರಿನ ಬಳಿ ಬಂದು ಜೈ ಶ್ರೀರಾಮ್ ಎಂದು ಹೇಳಬೇಕಾ, ಜೈ ಶ್ರೀ ರಾಮ್ ಇಲ್ಲ. ಓನ್ಲೀ ಅಲ್ಲಾ ಹು ಅಕ್ಬರ್ ಎಂದು ಹೇಳಿ, ಕಾರಿನಲ್ಲಿ ಇದ್ದವರಿಗೆ ಅವಾಚ್ಯವಾಗಿ ನಿಂದಿಸಿದ್ದರು.ಈ ಕುರಿತು ಪ್ರಶ್ನಿಸಿದಾಗ, ಅಲ್ಲೆ ಇದ್ದ ಮತ್ತೆ ಮೂವರು ಸೇರಿಕೊಂಡು ಹಿಂದು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇರುತ್ತಿದ್ದರೆ ಬುದ್ದಿಜೀವಿಗಳು ಹೆಚ್ಚೆದ್ದು ರಾದಂತ ಮಾಡುತ್ತಿದ್ದಾರೆಂದು ಯುವಕರು ತಿಳಿಸಿದ್ದಾರೆ.
ವಿದ್ಯಾರಣ್ಯಪುರದ ಬೆಟ್ಟಳ್ಳಿ ಬಳಿ ಈ ಘಟನೆ ನಡೆದಿದ್ದು ರಸ್ತೆಯಲ್ಲಿ ಅಡ್ಡಗಟ್ಟಿ ಪುಂಡಾಟ ಮಾಡಿದವರ ವಿರುದ್ಧ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾದ ಯುವಕರು ದೂರು ನೀಡಿದ್ದಾರೆ. ಈ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.ಐಪಿಸಿ ಸೆಕ್ಷನ್ 295a, 298, 143, 147, 504, 324, 326, 149, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೈ ಶ್ರೀರಾಮ್ ಅಂತಾ ಯಾಕೆ ಕೂಗ್ತಿರಾ, ಓನ್ಲಿ ಅಲ್ಲಾ ಹು ಅಕ್ಬರ್ ಅನ್ನಿ ಅಂತಾ ಗಲಾಟೆ ಮಾಡಿದ್ದು ಕಾರಿನಲ್ಲಿದ್ದವರ ಮೇಲೆ ಇನ್ನೂ ಮೂರು ಜನರೊಂದಿಗೆ ಬಂದು ಒಟ್ಟು 5 ಜನ ಸೇರಿ ಹಲ್ಲೆ ಮಾಡಿದ್ದಾರೆ. ಕೇಸ್ ರಿಜಿಸ್ಟರ್ ಆಗಿದೆ. ಹಲ್ಲೆ ಮಾಡಿದವರ ಗುರುತು ಪತ್ತೆಯಾಗಿದೆ ಎಂದು ಡಿಸಿಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.