Saturday, March 14, 2026
Flats for sale
Homeರಾಜ್ಯಬೆಂಗಳೂರು : ಜಾತಿ ಗಣತಿ ವರದಿಗೆ ಒಕ್ಕಲಿಗ,ಲಿಂಗಾಯಿತ,ಕೆಲ ಮಠಾದೀಶರಿಂದಲೂ ವಿರೋಧ.

ಬೆಂಗಳೂರು : ಜಾತಿ ಗಣತಿ ವರದಿಗೆ ಒಕ್ಕಲಿಗ,ಲಿಂಗಾಯಿತ,ಕೆಲ ಮಠಾದೀಶರಿಂದಲೂ ವಿರೋಧ.

ಬೆಂಗಳೂರು : ಯಾರ ಮನೆಗೆ ಬರದೇ ,ಮನೆಯಲ್ಲಿ ಕುಳಿತುಕೊಂಡು ಜಾತಿಗಣತಿಯ ವರದಿಮಾಡಿದ್ದಾರೆ ಎಂದು ಕೆಲ ನಾಯಕರು ವ್ಯಂಗ್ಯವಾಡಿದ್ದಾರೆ.ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯನ್ನು ರಾಜ್ಯಸರ್ಕಾರ ಸ್ವೀಕರಿಸಿದಬೆನ್ನಲ್ಲೆ ಜಾತಿಗಣತಿಗೆ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿ ಜಾತಿ ಗಣತಿವರದಿಯನ್ನು ಒಪ್ಪಿಕೊಳ್ಳಬಾರದು. ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾದರೆ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿವೆ.

ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಂಘಟನೆಗಳು ಜಾತಿ ಗಣತಿ ವರದಿ ವೈಜ್ಞಾನಿಕವಾಗಿಲ್ಲ ಈ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿದ್ದು, ಜಾತಿಗಣತಿ ವರದಿ ಅನುಷ್ಠಾನ ಮಾಡಿದರೆ ಹೋರಾಟ ಅನಿವಾರ್ಯ ಎಂದು ಹೇಳಿವೆ. ಹಲವು ಮಠಾಧೀಶರೂ ಸಹ ಜಾತಿಗಣತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಜಾತಿಗಣತಿ ವರದಿ ಬಗ್ಗೆ ಸರ್ಕಾರದ ನಿಲುವನ್ನು ನೋಡಿಕೊಂಡು ಮುಂದಿನ ಹೆಜ್ಜೆ ಏನು ಎಂಬುದನ್ನು ತೀರ್ಮಾನ ಮಾಡುವುದಾಗಿಯೂ ಇವರುಗಳು ಹೇಳಿದ್ದಾರೆ.

ಈ ಜಾತಿಗಣತಿ ವೈಜ್ಞಾನಿಕವಾಗಿಲ್ಲ. ಮರುಸಮೀಕ್ಷೆ ನಡೆಸಬೇಕು ಎಂಬ ಬೇಡಿಕೆಯನ್ನೂ ಲಿಂಗಾಯತ ವೀರಶೈವ ಸಂಘಟನೆಗಳು ಇಟ್ಟಿವೆ. ಜಾತಿಗಣತಿ ವರದಿಯನ್ನು ಸರ್ಕಾರ ಅನುಷ್ಠಾನ ಮಾಡಲು ಮುಂದಾದರೆ ಮಠಾಧೀಶರು ರಾಜಕೀಯ ಮುಖಂಡರ ಜತೆ ಸಮಾಲೋಚನೆ ನಡೆಸಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವುದಾಗಿಯೂ ಲಿಂಗಾಯತ -ಒಕ್ಕಲಿಗ ಸಂಘಟನೆಗಳು ನೋಡುತ್ತೇವೆ. ನಾವಂತೂ ಸುಮ್ಮನೇ
ಕೂರುವುದಿಲ್ಲ.ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ ೯ ವರ್ಷದ ಹಳೆಯ ವರದಿಯನ್ನೇ ಈಗ ಮತ್ತೆ ತಂದುಕೊಟ್ಟಿದ್ದಾರೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಲಿಂಗಾಯತ ವೀರಶೈವ ಸಮುದಾಯದ ಜನಸಂಖ್ಯೆ ೨ ಕೋಟಿಗೂ ಹೆಚ್ಚಿದೆ. ಹೀಗಿದ್ದರೂ ಉದ್ದೇಶಪೂರಕವಾಗಿ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ ಎನಿಸುತ್ತದೆ.ಈ ವರದಿಯನ್ನು ಮೂಲೆಗೆ ಹಾಕಬೇಕು ಎಂದು ಒತ್ತಾಯಿಸಿದರು.

ನಾವು ಪರಿಶಿಷ್ಟ ಜಾತಿ ವರ್ಗ ಸೇರಿದಂತೆ ಯಾವುದೇ ಸಮುದಾಯದ ವಿರುದ್ಧವಿಲ್ಲ. ನಮ್ಮ ಜನಸಂಖ್ಯೆಯು ಹೆಚ್ಚಿದೆ. ಅಗತ್ಯ ಬಿದ್ದರೆ ಖಾಸಗಿಯಾಗಿಯೂ ಸಮೀಕ್ಷೆ ಮಾಡಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಗುಡುಗಿದರು.ಈ ವರದಿಯಿಂದ ಜಾತಿ ಸಂಘರ್ಷ ಆಗುತ್ತದೆ ಚುನಾವಣೆಯಲ್ಲಿ ಸಮಸ್ಯೆ ಆಗುತ್ತದೋ ಇಲ್ಲವೋ ನಾನು ಈಗಲೇ ಹೇಳಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಮ್ಮ ಅಭಿಪ್ರಾಯಕ್ಕೆ ಏನು ಮನ್ನಣೆ ಕೊಡುತ್ತಾರೋ ನೋಡೋಣ ಎಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದು ಕಾಂತರಾಜು ವರದಿ ಎಂದು ಸರಿಯಾಗಿ ಹೇಳಿದ್ದಾರೆ ಕಾಂತರಾಜು ವರದಿಯನ್ನು ಜಯಪ್ರಕಾಶ್ ಹೆಗಡೆ ಕೊಟ್ಟಿದ್ದಾರೆ. ಈ ವರದಿ ಮೂಲಕ ಜಾತಿ ಜಾತಿಗಳ ಮೇಲೆ ಛೂ ಬಿಡುವ ಕೆಲಸ ಆಗುತ್ತಿದೆ.ಈ ವರದಿಯನ್ನು ಸರ್ಕಾರ ಒಪ್ಪಬಾರದು ಎಂದು ಅವರು ಒತ್ತಾಯಿಸಿದರು.

ಜಾತಿ ಗಣತಿ ವರದಿ ಒಪ್ಪಲ್ಲ: ಶಾಮನೂರು ನಮ್ಮ ಸಮುದಾಯದ ಮಠಾಧೀಶರು, ಉಪಮುಖ್ಯಮಂತ್ರಿಗಳು, ಸಚಿವರು, ಹಾಗೂ ವಿವಿಧ ಸಂಘ ಸಂಸ್ಥೆಗಳೊAದಿಗೆ ಸಮಾಲೋಚನೆ ನಡೆಸಿ ಹೋರಾಟ ರೂಪುರೇಷೆಗಳನ್ನು ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಿಂದೆಯೇ ಒಕ್ಕಿಲಿಗರ ಸಂಘ ಈವರದಿಯನ್ನು ಸ್ವೀಕರಿಸಬಾರದು ಎಂದು ಹೇಳಿತ್ತಾದರೂ ಸರ್ಕಾರ ವರದಿ ಸ್ವೀಕಾರ ಮಾಡಿದೆ ಎಂದು ಅಸಮಾಧಾನ ಹೊರಹಾಕಿರುವ ಅವರು ಆರ್ಥೀಕ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಅಗತ್ಯವಿದ್ದರೆ ಹೊಸದಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಲಿ ಎಂದು ಅವರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular