ಬೆಂಗಳೂರು : ಚಿನ್ನದ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ರನ್ಯಾರಾವ್ ಅವರಿಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿಗಳನ್ನು
ಶುಕ್ರವಾರ ಇ.ಡಿ ಜಪ್ತಿ ಮಾಡಿದೆ.
ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ನ ಮನೆ, ಅರ್ಕಾವತಿ ಲೇಔಟ್‌ನಲ್ಲಿರುವ ವಸತಿ ನಿವೇಶನ, ತುಮಕೂರಿನಲ್ಲಿರುವ ಕೈಗಾರಿಕಾ ಜಮೀನು ಮತ್ತು ಆನೇಕಲ್ ತಾಲೂಕಿನಲ್ಲಿರುವ ಕೃಷಿ ಜಮೀನುಗಳನ್ನು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಇ.ಡಿ. ವಶಪಡಿಸಿಕೊಂಡಿದೆ
ಈ ಆಸ್ತಿಗಳ ಒಟ್ಟು ಮೌಲ್ಯ 34.12 ಕೋಟಿ ರೂ.ಗಳಷ್ಟು ಆಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ಮಾರ್ಚ್ 3 ರಂದು ಬೆಂಗಳೂರಿನ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ವಾಪಸಾಗುತ್ತಿದ್ದ ವೇಳೆ ರನ್ಯಾ ರಾವ್ ಅವರನ್ನು 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನದ ಕಳ್ಳಸಾಗಾಣಿಕೆ ಆರೋಪದ ಮೇರೆಗೆ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದರು. ನಂತರ ಸಿಬಿಐ ಮತ್ತು ಡಿಆರ್‌ಐ ತನಿಖೆ ಮುಂದುವರಿಸಿದ್ದರು.