Friday, November 22, 2024
Flats for sale
Homeರಾಜ್ಯಬೆಂಗಳೂರು ; ಚಿಕನ್ ಶವರ್ಮಾದಲ್ಲಿ ಕ್ಯಾನ್ಸರ್ ಕಾರಕ ವಸ್ತು ಪತ್ತೆ,ಶೀಘ್ರದಲ್ಲೇ ಬ್ಯಾನ್​ ಆಗುತ್ತಾ ನಾನ್​ ವೆಜ್​...

ಬೆಂಗಳೂರು ; ಚಿಕನ್ ಶವರ್ಮಾದಲ್ಲಿ ಕ್ಯಾನ್ಸರ್ ಕಾರಕ ವಸ್ತು ಪತ್ತೆ,ಶೀಘ್ರದಲ್ಲೇ ಬ್ಯಾನ್​ ಆಗುತ್ತಾ ನಾನ್​ ವೆಜ್​ ಪ್ರಿಯರ ಶವರ್ಮಾ.?

ಬೆಂಗಳೂರು ; ದೈನಂದಿನ ಬಳಕೆಗೆ ಬಳಸುವ ಆಹಾರ ಪದಾರ್ಥಗಳಾದ ಚಿಕನ್ , ಗೋಬಿ ಹಾಗೂ ಇನ್ನಿತರ ಫಾಸ್ಟ್ ಫುಡ್ ಆಹಾರಗಳಿಗೆ ಕ್ಯಾನ್ಸರ್ ಕಾರಕ ವಸ್ತುಗಳನ್ನು ಬಳಸುವುದರಿಂದ ಸರಕಾರ ತಜ್ಞರ ಮಾಹಿತಿ ಮೇರೆಗೆ ಇಂತಹ ವಿಷಕಾರಕ ವಸ್ತುಗಳನ್ನು ಬ್ಯಾನ್ ಮಾಡಲು ಹೊರಟಿದೆ.ಈಗಂತೂ ಸಾಕಷ್ಟೂ ಜನರು ಬೀದಿ ಬದಿಯ ಆಹಾರವನ್ನು ಸೇವಿಸುವುದು, ಜಂಕ್‌ಫುಡ್‌ಗಳನ್ನು ಹೆಚ್ಚಾಗಿ ತಿನ್ನುತ್ತಿದ್ದಾರೆ. ಈ ಬಗ್ಗೆ ವೈದ್ಯರು ಆರೋಗ್ಯಕ್ಕೆ ಹಾನಿಕರ ಎಂದು ಹೇಳುತ್ತಲೇ ಇರುತ್ತಾರೆ. ಆದರೂ, ಬಾಯಿಚಪಲ ತಾಳದೆ ತುಂಬಾ ಜನ ರೋಡ್‌ ಸೈಡ್‌ ತಿಂಡಿಗಳನ್ನು ಸೇವಿಸುತ್ತಾರೆ.

ಚಿಕನ್ ಶವರ್ಮಾ ತಯಾರಿಕೆಯಲ್ಲಿ ನೈಮರ್ಲ್ಯದ ಕೊರತೆ ಇದೆಯಂತೆ. ನೈರ್ಮಲ್ಯದ ಕೊರತೆ, ದೀರ್ಘಕಾಲದವರೆಗೆ ಶೇಖರಣೆ ಮಾಡಿದ್ದರಿಂದ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ ಅಸುರಕ್ಷಿತ ಅಂತ ವರದಿ ಮೂಲಕ ತಿಳಿದು ಬಂದಿದೆ. ಆಹಾರ ತಯಾರಿಕೆಯಲ್ಲಿ ಲೋಪದೋಷ ಕಂಡುಬಂದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಪ್ರಕಟಣೆ ತಿಳಿಸಿದೆ. ಹೀಗಾಗಿ ರಾಜ್ಯದಲ್ಲಿ ಶವರ್ಮಾ ಶೀಘ್ರದಲ್ಲೇ ಬ್ಯಾನ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ .

ಬೆಂಗಳೂರು, ಹುಬ್ಬಳ್ಳಿ, ಮೈಸೂರು, ತುಮಕೂರು, ಬಳ್ಳಾರಿ ಸೇರಿದಂತೆ ಹಲವೆಡೆ ಶವರ್ಮಾ ಪರೀಕ್ಷೆ ನಡೆಸಲಾಗಿದೆ. ಪರಿಶೀಲನೆ ನಡೆಸಿದ ಚಿಕನ್​​ ಶವರ್ಮಾದಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಪತ್ತೆಯಾಗಿದೆ. ಮೊನ್ನೆ ಮೊನ್ನೆಯಷ್ಟೇ ಗೋಬಿ, ಕಬಾಬ್​ಗೆ ಹಾಕುವ ಕಲರ್​​ಗಳನ್ನ ಬ್ಯಾನ್ ಮಾಡಿದ ಬೆನ್ನಲ್ಲೇ ಚಿನಕ್​ ಶವರ್ಮಾಗೆ ಕಂಟಕ ಎದುರಾಗಿದೆ. ಹೌದು, ಈ ಹಿಂದೆ ಕೇರಳದಲ್ಲಿ ಚಿಕನ್​​ ಶವರ್ಮಾ ತಿಂದು ಸಾಕಷ್ಟು ಜನರ ಸಾವನ್ನಪ್ಪಿದ್ದರು. ಹೀಗಾಗಿ ಆಹಾರ ಸುರಕ್ಷತೆ ಇಲಾಖೆಯು ಚಿನಕ್​ ಶವರ್ಮಾದ ಗುಣಮಟ್ಟ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular