Wednesday, September 17, 2025
Flats for sale
Homeರಾಜಕೀಯಬೆಂಗಳೂರು : ಚಾಮುಂಡಿ ಬೆಟ್ಟ ಹಿಂದೂಗಳದಲ್ಲ ಎಂದಿದ್ದಕ್ಕೆ ಡಿಕೆಶಿ ವಿರುದ್ಧ ಆಕ್ರೋಶ : ಹಿಂದೂ ದೇವಸ್ಥಾನ...

ಬೆಂಗಳೂರು : ಚಾಮುಂಡಿ ಬೆಟ್ಟ ಹಿಂದೂಗಳದಲ್ಲ ಎಂದಿದ್ದಕ್ಕೆ ಡಿಕೆಶಿ ವಿರುದ್ಧ ಆಕ್ರೋಶ : ಹಿಂದೂ ದೇವಸ್ಥಾನ ಆಗಿರದಿದ್ರೆ ಮುಜರಾಯಿ ಕೆಳಗೆ ಹೇಗೆ ತಂದ್ರಿ ಎಂದ ರಾಜಮಾತೆ ಪ್ರಮೋದಾದೇವಿ ಒಡೆಯರ್..!

ಬೆಂಗಳೂರು ; ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಯ್ಕೆ ಮಾಡಿದ ವಿಚಾರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ತಿರುಗಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ `ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿಯಲ್ಲ’ ಎಂಬ ಹೇಳಿಕೆ ಹೊಸ ವಿವಾದದ ಕಿಡಿ ಹೊತ್ತಿ ಸಿದೆ. ಬಿಜೆಪಿ ಮತ್ತು ಜೆಡಿಎಸ್ ಈ ಹೇಳಿಕೆಯನ್ನೇ ಅಸ್ತçವಾಗಿಸಿಕೊಂಡು ಡಿಕೆಶಿ ಹಾಗೂ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದು ಕೂಡಲೇ ಕ್ಷಮೆಯಾಚಿಸಿ ಎಂದು ಆಗ್ರಹಿಸಿವೆ.

ಅಷ್ಟಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದು ಏನು?: ಮಾಧ್ಯಮ ಗಳೊಂದಿಗೆ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮ, ಸಮಾಜದವರಿಗೂ ಪ್ರವೇಶವಿದೆ.ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.ಇದು ಕೇವಲ ಹಿಂದೂಗಳ ಆಸ್ತಿಯಲ್ಲ’. ನಾಡದೇವತೆ ದರ್ಶನಕ್ಕೆ ಕೇವಲ ಹಿಂದುಗಳು ಮಾತ್ರ ಬರಬೇಕು ಎನ್ನುವ ನಿಯಮವಿದೆಯೇ? ಒಂದಷ್ಟು ಸಮುದಾಯದವರು ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ ಧರ್ಮಕ್ಕೆ ಸೇರಿಕೊಂಡಿದ್ದಾರೆ. ಇವರನ್ನು ದೇವಾಲಯಕ್ಕೆ ಬರಬೇಡಿ ಎಂದು ಹೇಳಲು ಆಗುತ್ತದೆಯೇ? ಎಂದು ಪ್ರಶ್ನಿಸಿದ್ದರು.

ಇದು ವಿವಾದಕ್ಕೆ ತಿರುಗುತ್ತಿದ್ದಂತೆ ರಾಜವಂಶಸ್ಥರು, ಸರ್ಕಾರ ಇಬ್ಬರೂ ಚಾಮುಂಡಿಯನ್ನು ನಾಡದೇವತೆ ಎಂದು ಕರೆಯುತ್ತೇವೆ. ಇದು ಸರ್ಕಾರದ ಆಸ್ತಿ. ಹಿಂದೂಗಳು ಮಾತ್ರ ಬರಬೇಕು ಎಂದೇನೂ ಇಲ್ಲ. ಎಲ್ಲಾ ಧರ್ಮದವರನ್ನೂ ಆಶೀರ್ವದಿಸುವ ದೇವತೆ. ನಾಡಹಬ್ಬಕ್ಕೆ ವಿದೇಶಿಗರೂ ಸೇರಿ ಬೇರೆ ಧರ್ಮದವರೂ ಬರುತ್ತಾರೆ ಎಂದು ಸ್ಪಷ್ಟಪಡಿಸಿದ್ದರು.

ಕಾಂಗ್ರೆಸ್ ನಕಲಿ ಜಾತ್ಯತೀತತೆ : ಇದಕ್ಕೆ ಸಾಮಾಜಿಕ ಜಾಲತಾಣ ಮೂಲಕ ತೀಕ್ಷ÷್ಣ ಪ್ರತಿಕ್ರಿಯೆ ನೀಡಿದ್ದ ಸಂಸದ ಯದುವೀರ್ ಒಡೆಯರ್ ‘ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎಂದಿರುವುದು ಅತ್ಯಂತ ದುಃಖಕರ ಮತ್ತು ನಿಂದನೀಯವಾಗಿದೆ. ಇದು ಕೋಟ್ಯಂತರ ಹಿಂದೂಗಳಿAದ ಆರಾಧಿತವಾಗಿದೆ. ಈ ದೇವಾಲಯ ಹಿಂದೂಗಳದ್ದೇ ಆಗಿತ್ತು. ಆಗಿದೆ ಮತ್ತು ಎಂದೆAದಿಗೂ ಆಗಿರುತ್ತದೆ. ಕಾಂಗ್ರೆಸ್ ಯಾವತ್ತೂ ಬಹುಸಂಖ್ಯಾತ ಹಿಂದೂ ಭಾವನೆಗಳಿಗೆ ಧಕ್ಕೆ ತಂದು ತನ್ನ ನಕಲಿ ಜಾತ್ಯತೀತತೆ ಪ್ರದರ್ಶನ ಮಾಡುತ್ತಿದೆ. ರಾಜ್ಯದ ಜನರು ಎಲ್ಲ ಧರ್ಮಗಳನ್ನೂ ಗೌರವಿಸುತ್ತಾರೆ. ಆದರೆ ಹಿಂದೂ ಹಬ್ಬಗಳು, ಸಂಪ್ರದಾಯಗಳು ಮತ್ತು ದೇವಾಲಯಗಳ ಮೇಲೆ ದಾಳಿ ನಡೆದರೆ ಯಾವತ್ತೂ ಸಹಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

“ಈ ಬಾರಿಯದಸರಾ ಉದ್ಘಾಟಕರ ಆಯ್ಕೆ ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿದ್ದು, ಇದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಹೊರಬರುತ್ತಿರುವ ರಾಜಕೀಯ ನಾಯಕರ ಹೇಳಿಕೆಗಳು ಚಾಮುಂಡೇಶ್ವರಿ ದೇವಸ್ಥಾನವು ಕೇವಲ ಹಿಂದೂಗಳಿಗೆ ಸೇರಿದ್ದಲ್ಲ ಎನ್ನುವ ಮೂಲಕ ಚಾಮುಂಡಿಬೆಟ್ಟದ ವಿಚಾರವನ್ನು ಆಕ್ರಮಿಸಿಕೊಂಡಿರುವುದು ಬೇಸರ ತಂದಿದೆ ಎಂದು ಬಹಿರAಗ ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಪದ್ಧತಿಗೆ ಅನುಗುಣವಾಗಿ ಪೂಜೆ, ಆಚರಣೆ ನಡೆದರೂ ಹಿಂದಿನಿAದಲೂ ಅನ್ಯಧರ್ಮೀಯರಿಗೆ ದೇವಸ್ಥಾನದಲ್ಲಿ ಪ್ರವೇಶದ ಅವಕಾಶವಿತ್ತು ಮತ್ತು ಈಗಲೂ ಇದೆ. ಅದು ಹಿಂದೂ ದೇವಸ್ಥಾನವಲ್ಲದಿದ್ದರೆ, ಅದನ್ನು ಎಂದಿಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ತರಲಾಗುತ್ತಿರಲಿಲ್ಲ ಎಂದು ರಾಜಮಾತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಿಂದೂ ದೇವಸ್ಥಾನ ಆಗಿರದಿದ್ರೆ ಮುಜರಾಯಿ ಕೆಳಗೆ ಹೇಗೆ ತಂದ್ರಿ?

ದಸರಾ ಉದ್ಘಾಟಕರ ಆಯ್ಕೆಯ ಭಿನ್ನಾಭಿಪ್ರಾಯ ಈಗ ಚಾಮುಂಡಿ ಬೆಟ್ಟವನ್ನು ಆಕ್ರಮಿಸಿಕೊಂಡಿರುವುದು ಬೇಸರ ಮೂಡಿಸಿದೆ. ಇದು ಹಿಂದೂ ದೇವಾಲಯ ಆಗಿರದಿದ್ದರೆ, ಸರ್ಕಾರದ ಮುಜರಾಯಿ ಇಲಾಖೆ ಅಧೀನಕ್ಕೆ ತರಲಾಗುತ್ತಿರಲಿಲ್ಲ.ಎಂದೆAದಿಗೂ ಹಿಂದೂ ದೇಗುಲ: ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ಎಲ್ಲದರಲ್ಲೂ ತಪ್ಪು ಕಂಡು ಹಿಡೀತಾರೆ, ನಾನಿನ್ನು ಮಾತಾಡೋದೇ ಇಲ್ಲ ನಾನು ಸದನದಲ್ಲಿ ಸೇರಿದಂತೆ ಎಲ್ಲಿ ಏನೇ ಮಾತನಾಡಿದರೂ ಅದರಲ್ಲಿ ಕೇವಲ ತಪುö್ಪ ಕಂಡು ಹಿಡಿಯುವುದೇ ಕೆಲವರ ಕೆಲಸವಾಗಿದೆ. ಹೀಗಾಗಿ ನಾನು ಮಾತನಾಡದಿರುವುದೇ ಲೇಸು ಅನಿಸುತ್ತದೆ. ಈ ವಿಚಾರಗಳ ಬಗ್ಗೆ ಬೇರೆ ನಾಯಕರು ಹಾಗೂ ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಮಾತನಾಡುವುದು ಒಳ್ಳೆಯದು ಎಂದು ಡಿ.ಸಿ ಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular