ಬೆಂಗಳೂರು : ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಯಾ ಪೈಸೆಯಷ್ಟೂ ಕೆಲಸ ಮಾಡದೇ 47 ಕಾಮಗಾರಿಗಳಿಗೆ ಎರಡೆರಡು ಸಲ ಹಣ ಬಿಡುಗಡೆ ಮಾಡಿಸಿಕೊಂಡು ಒಟ್ಟು 55.32 ಕೋಟಿ ರೂ.ಗಳ ವಂಚನೆ ಮಾಡಲಾಗಿದೆ ಎಂದು ಸಚಿವ ಜಮೀರ್ ಅಹಮದ್ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ
ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020, 2022ರ ಅವಧಿಯಲ್ಲಿ 47೭ ಕಾಮಗಾರಿಗಳಿಗೆ ಟೆಂಡರ್‌ಗಳನ್ನು ಕರೆದು, ಪೂರ್ವ ನಿಗದಿತ 19 ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರಗಳನ್ನು ನೀಡಲಾಗಿತ್ತು. ಈ ರೀತಿ ಕಾರ್ಯಾದೇಶ ಪತ್ರಗಳನ್ನು ಪಡೆದ 19 ಗುತ್ತಿಗೆದಾರರು ಒಂದು ಬಿಡಿಗಾಸಿನಷ್ಟೂ ಸಹ ಕಾಮಗಾರಿಗಳನ್ನು ಮಾಡದೆಯೇ 27,66,೦೦,೦೦೦ ರೂ.ಗಳಷ್ಟು ಬೃಹತ್ ಮೊತ್ತವನ್ನು ತಮ್ಮ ರಾಜಕೀಯ ಪ್ರಭಾವದಿಂದ ಬಿಡುಗಡೆ ಮಾಡಿಸಿಕೊಂಡಿದ್ದರು.
ಇದೀಗ, ಎರಡೂವರೆ ವರ್ಷಗಳ ನಂತರ 2025-25ರಲ್ಲಿ ಮತ್ತೊಮ್ಮೆ ಅದೇ 47 ಕಾಮಗಾರಿಗಳಿಗೆ, ಅದೇ 19 ಗುತ್ತಿಗೆದಾರರಿಗೆ 27,66,೦೦,೦೦೦ ರೂ.ಗಳನ್ನು ಎರಡನೇ ಸಲ ಬಿಡುಗಡೆ ಮಾಡಲಾಗಿದೆ. ಚಾಮರಾಜಪೇಟೆಯಲ್ಲಿ ಉಮೇಶ್, ರಾಧಾಕೃಷ್ಣ, ತಿಮ್ಮರಸು, ಭಾಸ್ಕರ್ ರೆಡ್ಡಿ ಎಂಬ ಕಾರ್ಯಪಾಲಕ ಅಭಿಯಂತರರು, ಸಂಗೀತ ಎಂಬ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸತೀಶ್ ಕುಮಾರ್ ಎ., ಸೈಯದ್ ಸಮರ್,ಗಿರಿಧರ, ಅರುಣ್ ಕುಮಾರ್ ಎಂ., ಸೌಮ್ಯ, ರಘು ಜಿ., ಶ್ರೀನಿವಾಸ ರಾಜು ಎಂಬ ಸಹಾಯಕ ಅಭಿಯಂತರರು ವಂಚಕ ಗುತ್ತಿಗೆದಾರರೊಂದಿಗೆ ಶಾಮಿಲ್ಲಾಗಿದ್ದಾರೆ ಎಂದು ದೂರಿದ್ದಾರೆ.
ಚಾಮರಾಜಪೇಟೆ ಕ್ಷೇತ್ರದ ಈ ೪೭ ಕಾಮಗಾರಿಗಳಿಗೆ ಸಂಬAಧಿಸಿದ ಎಲ್ಲಾ ದಾಖಲೆಗಳನ್ನು ನಕಲಿಯಾಗಿ ತಯಾರಿಸಲಾಗಿದೆ. ಬೇರೆಡೆ ಮಾಡಿರುವ ಕಾಮಗಾರಿಗಳ ಛಾಯಾಚಿತ್ರಗಳನ್ನು ತೆಗೆದು ಈ ೪೭ ಕಾಮಗಾರಿಗಳಿಗೆ ಸಂಬAಧಿಸಿದ ಕಡತಗಳಲ್ಲಿ ಲಗತ್ತಿಸಲಾಗಿದೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ, ಈ ಹಿಂದೆ 2015-16ರಲ್ಲಿ ಇದೇ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗಳನ್ನು ನಿರ್ವಹಿಸದೆಯೇ 9,6೦,೦೦,೦೦೦ ಮೊತ್ತದ ಬೃಹತ್ ಹಗರಣಕ್ಕೆ ಸಂಬAಧಿಸಿದAತೆ ದಾಖಲೆಗಳ ಸಹಿತ ನಾನು ನೀಡಿದ್ದ ದೂರಿನ ಆಧಾರದ ಮೇಲೆ ಆಗಿನ ಕಾರ್ಯಪಾಲಕ ಅಭಿಯಂತರ ತನ್ವೀರ್ ಅಹಮದ್, ಉಮೇಶ್ ಮತ್ತಿತರರನ್ನು ಪೊಲೀಸರು ಬಂಧಿಸಿದ್ದರು. ಈ ಹಗರಣದ ಪ್ರಮುಖ ಪಾತ್ರಧಾರಿ ಗುತ್ತಿಗೆದಾರ ಚಂದ್ರಪ್ಪ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಸಚಿವ ಜಮೀರ್ ಅವರು ಈ ಅಕ್ರಮಗಳಿಗೆ ಸಾಥ್ ನೀಡುತ್ತಿದ್ದಾರೆ. ಈ ಎಲ್ಲ ಅವ್ಯವಹಾರಗಳ ಹಿಂದೆ ಅವರ ಬಲಗೈ ಭಂಟ ಅಯೂಬ್ ಖಾನ್ ಇದ್ದಾರೆ ಎಂದುಆರೋಪಿಸಿದ್ದಾರೆ.
ಹಣ ಬಿಡುಗಡೆ ಮಾಡಿರುವ ಮತ್ತು ಸಂಪೂರ್ಣ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ 12 ಅಧಿಕಾರಿಗಳು ಹಾಗೂ 19 ಗುತ್ತಿಗೆದಾರರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಈ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳನ್ನು ಆಗ್ರಹಿಸಿದ್ದಾರೆ