ಬೆಂಗಳೂರು : ರಾಜ್ಯ ಸರಕಾರ ಎಷ್ಟೇ ಗ್ಯಾರಂಟೀ ಭಾಗ್ಯಗಳನ್ನು ಕೊಟ್ಟರೂ ಜನರ ತೀರ್ಪು ಈ ಬಾರಿ ಮೋದಿ ಸರಕಾರದ ಪರವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಿದ್ದರಾಮಯ್ಯ ಸರಕಾರದ ಹಲವು ಹಿಂದೂ ವಿರೋಧಿ ನೀತಿಗಳು ಕಾಂಗ್ರೆಸ್ ಸರಕಾರಕ್ಕೆ ಹಿನ್ನಡೆಯಾಗಲಿದೆ ಎಂದು ಕಾಂಗ್ರೆಸ್ ಸರಕಾರ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಪ್ರತ್ಯೇಕ ಮೂರೂ ತಂಡಗಳಿಂದ ಸಮೀಕ್ಷೆ ನಡೆಸಿದೆ.ಆದರೆ ಒಂದೊಂದು ಸಮೀಕ್ಷೆ ಒಂದೊಂದು ರೀತಿಯ ಜನಮತ ಕೊಟ್ಟಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ತೀವ್ರ ಗೊಂದಲ ಉಂಟಾಗಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ತಮ್ಮದೇ ಆಪ್ತ ಮೂಲಗಳಿಂದ ಸಮೀಕ್ಷೆ ನಡೆಸಿದ್ದರೆ ಕೇರಳ ಮೂಲದ ಪರಿಣಿತ ಸಂಸ್ಥೆಯೊಂದು ಪ್ರತ್ಯೇಕವಾಗಿ ಸಮೀಕ್ಷೆಯನ್ನು ನಡೆಸಿದೆ.ಆದರೆ ಈ ಮೂರೂ ಸಮೀಕ್ಷೆಗಳಲ್ಲಿ ವಿಭಿನ್ನ ರೀತಿಯ ಮಾಹಿತಿ ಲಭ್ಯವಾಗಿರುವುದು ಕೈ ಪಡೆಯನ್ನು ಕಂಗಾಲಾಗಿಸಿದೆ ಹಾಗೂ ಕಾಂಗ್ರೆಸ್ ವರಿಷ್ಠರ ಸೂಚನೆಯಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹೊರ ರಾಜ್ಯಗಳ ಖಾಸಗಿ ಏಜೆನ್ಸಿಗಳಿಂದ ಚುನಾವಣಾಪೂರ್ವ ಸಮೀಕ್ಷೆ ನಡೆಸಿದ್ದು ನಾಲ್ಕು ತಂಡಗಳು ಎರಡು ಹಂತದ ಸಮೀಕ್ಷೆಯನ್ನು ಈಗಾಗಲೇ ಪೂರ್ಣಗೊಳಿಸಿದೆ.
ಶೇ.೭೦ಕ್ಕೂ ಹೆಚ್ಚು ಮಂದಿ ಗ್ಯಾರಂಟಿ ಫಲಾನುಭವಿಗಳಾಗಿದ್ದರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪರವಾಗಿ ಖಚಿತ ನಿಲುವು ಹೊಂದಿಲ್ಲ ಎನ್ನುವ ಅಚ್ಚರಿಯ ಅಂಶ ಬಯಲಾಗಿದೆ.ಎಲ್ಲ ಮೂರೂ ಸರ್ವೆಗಳಲ್ಲಿವಿಭಿನ್ನ ರೀತಿಯ ಫಲಿತಾಂಶ ಹೊರಬಿದ್ದಿದೆ ಸಮೀಕ್ಷೆಯ ವೇಳೆ ಅಭ್ಯರ್ಥಿ ಆಯ್ಕೆ, ಜನರ ಒಲವು ಯಾವ ಕಡೆ ಇದೆ ಎಂಬ ನಿಟ್ಟಿನಲ್ಲಿ ಸಮೀಕ್ಷೆಗಳು ನಡೆದಿದೆ. ವಿಶೇಷವಾಗಿ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಗ್ಯಾರಂಟಿಗಳ ಬಗ್ಗೆಯೂ ಜನಮತ ಸಂಗ್ರಹವಾಗಿದ್ದು ಕೇಂದ್ರ ಆಡಳಿತಾರೂಢ ಮೋದಿ ಸರಕಾರಕ್ಕೆ ಜನಸ್ಪಂದನೆ ಹೆಚ್ಚು ದೊರೆತಿದೆ.
ಸಿಎಂ ಮುಖ್ಯ ಸಲಹೆಗಾರ ಸುನಿಲ್ ಕಣಗೋಲು ಸಾರಥ್ಯದ ತಂಡದಿAದ ಮತ್ತೊಂದು ಸಮೀಕ್ಷೆಗೆ ಕೈ ಮುಖಂಡರು ಮುಂದಾಗಿದ್ದು . ಇದು ಸಂಭಾವ್ಯ ಅಭ್ಯರ್ಥಿಗಳನ್ನು ಆಧರಿಸಿ ನಡೆಯುತ್ತಿರುವ ಸಮೀಕ್ಷೆ ಆಗಿರುವ ಕಾರಣಕ್ಕೆ ಒಂದು ಹಂತ ಕ್ಲಾರಿಟಿ ಸಿಗಬಹುದು ಎಂಬ ಲೆಕ್ಕಾಚಾರ ಇವರದಾಗಿದೆ .ಕಳೆದ ಎರಡು ತಿಂಗಳ ಅಂತರದಲ್ಲಿ ಈ ಮೂರೂ ಸರ್ವೇಗಳು ನಡೆದಿವೆ. ಮೂರರಲ್ಲಿಯೂ ಭಿನ್ನರೀತಿಯ ಅಭಿಪ್ರಾಯ ಸಿಕ್ಕಿರುವುದು ಹೈಕಮಾಂಡ್ಗೂ ತಲೆಬಿಸಿ ತಂದಿದೆ.
ಸಿದ್ದರಾಮಯ್ಯ ಸರಕಾರದ ಹಲವು ಧೋರಣೆಗಳಿಂದ ಒಂದು ವರ್ಗದ ಜನರು ರೋಚ್ಚಿಗೆದ್ದಿದ್ದು ಇದರಿಂದ ಲೋಕಸಭೆ ಚುನಾವಣೆಯಲ್ಲಿ ಅಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ . ಆತಂಕ ಗೊಂಡಿರುವ ಮೂರೂ ಸಮೀಕ್ಷೆಗಳಲ್ಲಿ ರಾಜ್ಯದ ಜನತೆ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದರೂ ಕಾಂಗ್ರೆಸ್ ಪಕ್ಷದ ಪರವಾಗಿ ಸಕಾರಾತ್ಮಕ ನಿಲುವು ಹೊಂದಿಲ್ಲ ಎನ್ನುವ ನೈಜ ಕಾರಣ ಬಹಿರಂಗವಾಗಿದೆ. ಹಾಗಾಗಿಯೇ ಇದೀಗ ಸರ್ಕಾರ ಗ್ಯಾರಂಟಿ ಅನುಷ್ಠಾನಕ್ಕೆ ಸಮಿತಿ ರಚಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಕಾರ್ಯಕರ್ತರಿಗೆ ಅಧಿಕಾರಿ ನೀಡುವುದು ಮತ್ತು ಅವರಿಂದಲೆ ಗ್ಯಾರAಟಿಗಳನ್ನು ಮನೆಮನೆಗೆ ಮುಟ್ಟಿಸುವ ತಂತ್ರವನ್ನು ರೂಪಿಸಲಾಗುತ್ತಿದೆ.


