Friday, March 13, 2026
Flats for sale
Homeರಾಜ್ಯಬೆಂಗಳೂರು : ಗೋಧ್ರಾ ರೀತಿ ಘಟನೆ ನಡೆಯುತ್ತೆ ಎಂಬ ಹೇಳಿಕೆಗೆ ಸಿಸಿಬಿ ಪೊಲೀಸರರಿಂದ ಬಿ ಕೆ...

ಬೆಂಗಳೂರು : ಗೋಧ್ರಾ ರೀತಿ ಘಟನೆ ನಡೆಯುತ್ತೆ ಎಂಬ ಹೇಳಿಕೆಗೆ ಸಿಸಿಬಿ ಪೊಲೀಸರರಿಂದ ಬಿ ಕೆ ಹರಿಪ್ರಸಾದ್ ವಿಚಾರಣೆ ,ಇದು ಕಾಂಗ್ರೆಸ್ ಸರ್ಕಾರವಾ, RSS ಸರ್ಕಾರವಾ ಎಂದ ಹಿರಿಯ ವಕ್ತಾರ.

ಬೆಂಗಳೂರು : ಕಾಂಗ್ರೆಸ್ ನ ಹಿರಿಯ ವಕ್ತರಾ ಎಂಎಲ್​ಸಿ ಬಿಕೆ ಹರಿಪ್ರಸಾದ್​ ಅವರನ್ನು ಗೋಧ್ರಾ ರೀತಿ ಘಟನೆ ನಡೆಯುತ್ತೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಶುಕ್ರವಾರ ಸಿಸಿಬಿ ಪೊಲೀಸರು ಕೆಕೆ ಗೆಸ್ಟ್​​ಹೌಸ್​ನಲ್ಲಿ ವಿಚಾರಣೆ ನಡೆಸಿದ್ದಾರೆ ಇದೇ ವೇಳೆ, ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ ಹರಿಪ್ರಸಾದ್, ನನಗೆ ವಿವಿಐಪಿ ಟ್ರೀಟ್​ಮೆಂಟ್​​ ಬೇಡ, ಬೇಕಿದ್ದರೆ ಅರೆಸ್ಟ್ ಮಾಡಿ ಎಂದರು.ನಂತರ ಇದು ಕಾಂಗ್ರೆಸ್ ಸರ್ಕಾರವಾ, ಆರ್​ಎಸ್​​ಎಸ್ ಸರ್ಕಾರವಾ ಎಂದು ವಿಚಾರಣೆಗೆ ಒಳಪಡಿಸುವಂತೆ ನಿರ್ದೇಶನ ನೀಡಿರುವ ಸಿದ್ದರಾಮಯ್ಯ ಸರಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನವರಿ 22ರಂದು ಅಯೋಧ್ಯೆಗೆ ತೆರಳುವವರಿಗೆ ಸರ್ಕಾರ ರಕ್ಷಣೆ ನೀಡಬೇಕು. ರಾಜ್ಯದಲ್ಲಿ ಗೋಧ್ರಾ ರೀತಿ ಮತ್ತೆ ದುರಂತ ಸಂಭವಿಸುವ ಮಾಹಿತಿ ಇದೆ. ಹೀಗಾಗಿ ಅಯೋಧ್ಯೆಗೆ ತೆರಳುವವರಿಗೆ ರಕ್ಷಣೆ ಒದಗಿಸುವ ಕೆಲಸ ಆಗಬೇಕು ಎಂದು ಬೆಂಗಳೂರಿನಲ್ಲಿ ಇತ್ತೀಚೆಗೆ ಹರಿಪ್ರಸಾದ್ ಹೇಳಿದ್ದರು. ಈ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹರಿಪ್ರಸಾದ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು.

ಹಿಂದೂಗಳ ಬಗ್ಗೆ ಎಲ್ಲಾ ವಿಚಾರದಲ್ಲಿ ಅಸಡ್ಡೆ ಭಾವ ಒಂದಿರುವ ಕಾಂಗ್ರೆಸ್ ಸರಕಾರದ ಧೋರಣೆ ಹಾಗೂ ಈ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ಕಳಂಕ ತರುವಂಥದು ಎಂಬುದು ಹಲವು ನಾಯಕರ ಮಾತು ಆದರೆ ರಕ್ಷಣಗೆ ಸಂಬಂಧಿಸಿದ ಕಳವಳದ ವಿಚಾರ ಬಂದಾಗ ಪೊಲೀಸರಿಗೆ ಮಾಹಿತಿ ನೀಡಬೇಕೇ ವಿನಃ ಸಾರ್ವಜನಿಕ ಹೇಳಿಕೆ ನೀಡಿ ಜನರಲ್ಲಿ ಭೀತಿ ಹುಟ್ಟಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಆದರೆ, ತಮ್ಮ ಹೇಳಿಕೆಯನ್ನು ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದರು. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular