Thursday, March 12, 2026
Flats for sale
Homeಕ್ರೈಂಬೆಂಗಳೂರು : ಗರ್ಲ್ ಫ್ರೆಂಡ್ ನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಹರಿಯಾಣದ ನಕ್ಸಲ್​​ ಬಂಧನ …!

ಬೆಂಗಳೂರು : ಗರ್ಲ್ ಫ್ರೆಂಡ್ ನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಹರಿಯಾಣದ ನಕ್ಸಲ್​​ ಬಂಧನ …!

ಬೆಂಗಳೂರು : ನಿಷೇಧಿತ ನಕ್ಸಲ್ ಸಂಘಟನೆಯಾಗಿರುವ CPI(M)ನಲ್ಲಿ ಅನಿರುದ್ಧ್‌ ತನ್ನನ್ನು ತೊಡಗಿಸಿಕೊಂಡಿದ್ದ. ನಿಷೇಧಿತ ಸಂಘಟನೆ ಪರ ಕೆಲಸ ಮಾಡುತ್ತಿದ್ದ. ಹಣ ಸಂಗ್ರಹ, ಗುಪ್ತ ಸಭೆಗಳನ್ನು ನಡೆಸುತ್ತಿದ್ದ. ಹರಿಯಾಣ ಮೂಲದ ಅನಿರುದ್ದ್ ಬಂಧಿತ ನಕ್ಸಲ್ ನನ್ನು ಕೇಂದ್ರ ಅಪರಾಧ ವಿಭಾಗ (CCB)ದ ಎಟಿಸಿ ತಂಡ ಬಂಧಿಸಿದೆ.

ಬೆಂಗಳೂರಲ್ಲಿ ಗೆಳತಿಯನ್ನು ನೋಡಲು ಬಂದಿದ್ದ ನಕ್ಸಲ್‌ವೊಬ್ಬ ಅಂದರ್ ಆಗಿದ್ದಾನೆ. ಅನಿರುದ್ಧ್‌ ಬಂಧಿತ ನಕ್ಸಲ್ ಆಗಿದ್ದಾನೆ. ಹರಿಯಾಣ ಮೂಲದ ಅನಿರುದ್ದ್ ಸಿಪಿಐ ಮಾವೋವಾದಿಗಳ‌ ಪರವಾಗಿ ಕೆಲಸ ಮಾಡುತ್ತಿದ್ದ. ಈತನಿಗಾಗಿ ಪೊಲೀಸ್​ ಮತ್ತು ನಕ್ಸಲ್ ನಿಗ್ರಹ ತಂಡ ಬಲೆ ಬೀಸಿತ್ತು. ಆದರೆ, ಅನಿರುದ್ದ್​ ಬಲೆಗೆ ಬಿದ್ದಿರಲಿಲ್ಲ. ಹಣ ಸಂಗ್ರಹ, ಗುಪ್ತ ಸಭೆಗಳನ್ನು ನಡೆಸುತ್ತಿದ್ದ. ತನ್ನ ಗೆಳತಿ ನೋಡಲು ಮೂರ್ನಾಲ್ಕು ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದ ಇದೀಗ ಸಿಸಿಬಿಯ ಎಟಿಸಿಯಿಂದ ಈತನನ್ನು ಬಂಧಿಸಲಾಗಿದೆ.ಅನಿರುದ್ದ್ ರಾಜನ್​ನಿಂದ 2 ಬ್ಯಾಗ್​, ಪೆನ್​ಡ್ರೈವ್​ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ಅನಿರುದ್ದ ರಾಜನ್​ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.ಘಟನೆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular