ಬೆಂಗಳೂರು : ಪ್ರತಿ ಕೆ.ಜಿ ಮಟನ್‌ಗೆ 750 ರೂ ಇರುವ ಕುರಿ ಮಾಂಸಕ್ಕೆ ರಾಜಸ್ಥಾನದಿಂದ ತರಿಸಿಕೊಳ್ಳುವ 450 ರೂ. ಮಾಂಸ ಯಾವುದು ಎಂಬ ಅನುಮಾನ ಬಂದಿದೆ. ಪ್ರತಿನಿತ್ಯ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರುವ ರೈಲುಗಳಲ್ಲಿ ಅಕ್ರಮವಾಗಿ ಮಾಂಸ ಸರಬರಾಜು ಆಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು, ಇಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು, ಜೈಪುರ ರೈಲು ಬಂದಾಕ್ಷಣ ದಾಳಿ ಮಾಡಿ ಮಾಂಸದ ಬಾಕ್ಸ್ಗಳನ್ನು ತಡೆಹಿಡಿದಿದ್ದಾರೆ.
ಕಳೆದ 12 ವರ್ಷಗಳಿಂದ ಅಬ್ದುಲ್ ರಜಾಕ್ ಎನ್ನುವ ವ್ಯಕ್ತಿಯೊಬ್ಬರು ರಾಜಸ್ಥಾನದಿಂದ ಕಡಿಮೆ ಬೆಲೆಗೆ ಕುರಿ ಮಾಂಸವನ್ನು ಬೆಂಗಳೂರಿಗೆ ತರಿಸಿಕೊಂಡು ಅದನ್ನು ಹೋಟೆಲ್, ರೆಸ್ಟೋರೆಂಟ್ ಸೇರಿ ಇತರೆ ಅಂಗಡಿ ಮುಂಗಟ್ಟುಗಳಿಗೆ ಕಡಿಮೆ ದರಕ್ಕೆ ಸರಬರಾಜು ಮಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಬೆಂಗಳೂರಿನಲ್ಲಿ 700 ರೂ.ಗಳಿಂದ 800 ರೂ.ಗಳಿಗೆ ಮಾಂಸ ಮಾರಾಟ ಮಾಡಲಾಗುತ್ತಿದೆ. ಆದರೆ, ರಾಜಸ್ಥಾನದಿಂದ ತರಿಸಿಕೊಂಡು ಬೆಂಗಳೂರಿನಲ್ಲಿ ಅಂಗಡಿ ಮುಂಗಟ್ಟುಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಇದರಿಂದ ಬೆಂಗಳೂರಿನಲ್ಲಿ ತಲೆ ತಲಾಂತರಗಳಿಂದ ಮಟನ್ ಮಾರಾಟ ವ್ಯಾಪಾರ ಮಾಡುವ 20,000 ಜನರಿಗೆ ವ್ಯಾಪಾರದಲ್ಲಿ ಭಾರಿ ನಷ್ಟ ಉಂಟಾಗುತ್ತದೆ. ಆಗ ಅಬ್ದುಲ್ ರಜಾಕ್‌ಗೆ ಪ್ರಶ್ನೆ ಮಾಡಿದರೆ, ನನ್ನ ಬಳಿ ಲೈಸೆನ್ಸ್ ಇದೆ ನಾನು ಏನು ಬೇಕಾದರೂ ಮಾಡ್ತೇನೆ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.
ಈ ಬಗ್ಗೆ ಶಂಕಿತ ನಾಯಿ ಮಾಂಸದ ಪ್ರಕರಣದಲ್ಲಿ ಪೊಲೀಸರುವಶಕ್ಕೆ ಪಡೆದಿದ್ದ ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಪೊಲೀಸ್ ಠಾಣೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.ನಿನ್ನೆ ಸಂಜೆ ಗಲಾಟೆ ನಡೆದಿದ್ದು, ಪುನೀತ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮಧ್ಯರಾತ್ರಿಯೇ ಅಸ್ವಸ್ಥರಾಗಿದ್ದ ಪುನೀತ್‌ರನ್ನು ಆಸ್ಪತ್ರೆಗೆ ಕರೆತಂದಿರಲಿಲ್ಲ. ಬೆಳಗಿನ ಜಾವ 4:45ಕ್ಕೆ ತೀವ್ರವಾಗಿ ಅಸ್ವಸ್ಥರಾದಾಗ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ನಾಯಿ ಮಾಂಸ ಸಾಗಾಟ ಆರೋಪದ ಕುರಿತು ಇಂದು ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಅಬ್ದುಲ್ ರಜಾಕ್ ವಿಚಾರಣೆ ಸಾಧ್ಯತೆ ಇದೆ. ನಿನ್ನೆ ವಿಚಾರಣೆಗೆ ಹಾಜರಾಗಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದು, ಈಗಾಗಲೇ ಮಾಂಸದ ಸ್ಯಾಂಪಲ್ ಲ್ಯಾಬ್‌ಗೆ ರವಾನಿಸಲಾಗಿದೆ. ಆರೋಪ ಹಿನ್ನೆಲೆಯಲ್ಲಿ ಮೊದಲು ಯಾವ ಪ್ರಾಣಿಯ ಮಾಂಸ ಎಂಬುದು, ನಂತರ ಮಾಂಸದ ಗುಣಮಟ್ಟದ ಬಗ್ಗೆಯೂ ಪರಿಶೀಲನೆ ನಡೆಯಲಿದೆ.
ಕಾನೂನು ನಿಯಮ ಮೀರಿದ್ದರೆ ಅಬ್ದುಲ್ ರಜಾಕ್‌ಗೆ ಕಾನೂನು ಸಂಕಷ್ಟ ಎದುರಾಗಬಹುದು. ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ತನಿಖೆ ನಡೆಯಲಿದ್ದು, ಆರೋಗ್ಯ ಇಲಾಖೆಯ ಕಾನೂನು ಅಡಿ ಕೂಡ ಅರೆಸ್ಟ್ ಮಾಡಬಹುದು. ನಿಯಮ ಉಲ್ಲಂಘನೆ ಮಾಡಿದ್ದರೆ ಏಳು ವರ್ಷದವರೆಗೆ ಜೈಲು ಶಿಕ್ಷೆ ಸಾಧ್ಯತೆ ಇದೆ.