ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ತಮ್ಮ ರಕ್ತದಲ್ಲಿ ಪತ್ರ ಬರೆಯುವ ಮೂಲಕ ನಟ ಪ್ರೇಮ್ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.
ಸಿಡಬ್ಲೂ÷್ಯಎಂಎ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ೩ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೆ ರಾಜ್ಯದ ರೈತಪರ ಸಂಘಟನೆಗಳು, ಕನ್ನಡಸಂಘಟನೆ ಸೇರಿದAತೆ ಕನ್ನಡ ಚಿತ್ರರಂಗ ಹೋರಾಟ ಹಮ್ಮಿಕೊಂಡು ನೀರು ಬಿಡುವುದಕ್ಕೆ ಖಂಡನೆ ವ್ಯಕ್ತಪಡಿಸಿದ್ದವು. ಈದಾಗ್ಯೂ, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಸತತ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸಲು ಒತ್ತಾಯಿಸಿ ನಟ ನೆನಪಿರಲಿ ಪ್ರೇಮ್? ಪ್ರಧಾನಿ ಮೋದಿ ಅವರಿಗೆ ರಕ್ತದಲ್ಲಿ ರಕ್ತದಲ್ಲಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಪ್ರಧಾನಿಗೆ ಪತ್ರ ಬರೆದಿರುವ ನಟ ಪ್ರೇಮ್ ಅವರು ಪತ್ರದಲ್ಲಿ ಪ್ರಧಾನಿ ಮೋದಿಜಿ ನಮ್ಮ ರಾಜ್ಯ ಮತ್ತು ಕಾವೇರಿ ವಿಚಾರದಲ್ಲಿ ದಯವಿಟ್ಟು ನ್ಯಾಯವನ್ನು ಒದಗಿಸಿ ಕೊಡಿ ಎಂದು ಇಂಗ್ಲಿಷ್ ನಲ್ಲಿ ಮನವಿ ಮಾಡಿದ್ದಾರೆ. ಕೊನೆಗೆ ಕಾವೇರಿ ನಮ್ಮದು’ ಎಂದು ಕನ್ನಡಲ್ಲಿ ಬರೆದಿದ್ದಾರೆ.