ಬೆಂಗಳೂರು : ರಾಜಕೀಯ ಅಂದರೆ ಇಷ್ಟೇನೆ ಯಾವಾಗ ಜೊತೆಯಲ್ಲಿ ಇರ್ತಾರೆ ಯಾವಾಗ ಬದ್ದ ವೈರಿಗಳಾಗ್ತಾರೆ ಎಂಬುದು ಗೊತ್ತಾಗಲ್ಲ .ಎಲ್ಲಾ ಚದುರಂಗದ ಆಟದ ರೀತಿನೇ ಈ ರಾಜಕಾರಣಿಗಳ ಜೀವನ ಎಂಬುದು ವಾಸ್ತವ ಸತ್ಯ.
ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವಿಗೆ ಡಿಕೆ ಶಿವಕುಮಾರ್ ಅವರೇ ಕಾರಣ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಶನಿವಾರ ಮೈಸೂರಿನಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಹೇಳಿದ್ದಾರೆ.ವ್ಯವಹಾರದ ವಿಚಾರದಲ್ಲಿ ಡಿಕೆ ಶಿವಕುಮಾರ್ ಗೆ ಸಿದ್ಧಾರ್ಥ್ ಕೋಟ್ಯಂತರ ರೂಪಾಯಿ ಹಣ ನೀಡಬೇಕಿತ್ತು ಆದರೆ ಡಿಕೆ ಶಿಗೆ ಸರಿಯಾದ ಸಮಯಕ್ಕೆ ನೀಡದ್ದೇ ಇದ್ದುದರಿಂದ ಡಿಕೆ ಶಿವಕುಮಾರ್ ಸಿದ್ಧಾರ್ಥ್ ಗೆ ಅವ್ಯಾಚ ಶಬ್ದಗಳಿಂದ ಬೈದುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಎಚ್‌ಡಿಕೆ ಡಿಕೆ ಶಿ ವಿರುದ್ಧ ಹೊಸ ಬಾಂಬ್ ಹಾಕಿದ್ದಾರೆ.
ಬಿಜೆಪಿ, ಜೆಡಿಎಸ್ ನೇತೃತ್ವದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದರು. ಒಂದೊಂದು ಮಾತಿಗೆ ಕೌಂಟರ್ ಕೊಟ್ಟ ಹೆಚ್‌ಡಿಕೆ, ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಡಿ.ಕೆ ಶಿವಕುಮಾರ್ ಕೂಡ ತಿರುಗೇಟು ಕೊಟ್ಟಿದ್ದಾರೆ.
ಕನಕಪುರದಲ್ಲಿ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು ಮೊದಲಿಗೆ ಕುಮಾರಸ್ವಾಮಿ ಮಾತಿಗೆ ನಸು ನಕ್ಕರು. ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡು ಬಂದು ನಿಲ್ಲಿಸಿಬಿಟ್ರೆ ಸಾಕು. ಬಡವರಿಗೆ ತೊಂದ್ರೆ ಕೊಟ್ಟಿರೋದು ನನ್ನ ಜಾಯಮಾನದಲ್ಲಿ ಇಲ್ಲ ಎಂದು ಉತ್ತರ ಕೊಟ್ಟಿದ್ದಾರೆ.
ಸಿದ್ಧಾರ್ಥ್ ಸಾವಿಗೆ ಡಿಕಶಿ ಕಾರಣ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, ”ಅಯ್ಯೋ .. ಕುಮಾರಸ್ವಾಮಿಯನ್ನ ಹುಚ್ಚಾಸ್ಪತ್ರೆಗೆ ಸೇರಿಸೋಣ. ಅವರ ತಂದೆ ಮೇಲೆ 1985 ರಲ್ಲಿ ವಿಧಾನಸಭೆ ಚುನಾವಣೆಯನ್ನ ನಾನು ಗೆದ್ದಿದ್ದೇನೆ. ಬಂಗಾರಪ್ಪ ಸಂಪುಟದಲ್ಲಿ ಮಂತ್ರಿ ಆಗಿದ್ದೇನೆ. ನನ್ನ ಎಸ್ ಎಂ ಕೃಷ್ಣ ಸಂಬಂಧ ಹೇಗಿದೆ ಅಂತಾ ಅವರಿಗೆ ಏನ್ ಗೊತ್ತಿದೆ. ಪಾಪಾ ಮೆಂಟಲ್ ಆಗಿದ್ದಾನೆ ಅಂತ ಕಾಣಿಸುತ್ತೆ, ಹಿತೈಷಿಗಳಿಗೋ, ಪಾರ್ಟಿ ಕಾರ್ಯಕರ್ತರಿಗೋ ಅವರನ್ನು ಮೆಂಟಲ್ ಆಸ್ಪತ್ರೆ ಸೇರಿಸಿ ಅಂತ ಹೇಳೋಣ’ ಎಂದು ಹೇಳಿದ್ದಾರೆ.
ಅದೇ ವೇಳೆ ಡಿಕೆ ಶಿವಕುಮಾರ್‌ಗೆ ನಾನೇ ನಾಗರಹಾವು ಎಂದ ಎಚ್‌ಡಿಕೆ ಮಾತಿಗೆ ನಕ್ಕು ಉತ್ತರಿಸಿದ ಡಿಕೆ ಶಿವಕುಮಾರ್, ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡ್ ಬಂದು ನಿಲ್ಲಿಸಿಬಿಡಿ. ಬಡವರಿಗೆ ತೊಂದ್ರೆ ಕೊಟ್ಟಿರೋದು ನನ್ನ ಜಾಯಮಾನದಲ್ಲಿ ಇಲ್ಲ. ಯೋಗೇಶ್ವರ್ ಏನ್ ಬೇಕೋ ಅದನ್ನು ತಿಳಿಸಿದ್ದಾರೆ. ಯೋಗೇಶ್ವರ್ ಅದಕ್ಕೆ ಉತ್ತರ ಕೊಟ್ಟಿದ್ದಾರೆ’ ಎಂದು ಹೇಳಿದರು. ಕುಮಾರಸ್ವಾಮಿ ಮೇಲೆ ಕಣ್ ಹಾಕಿದ್ರೆ ಸರ್ವನಾಶ ಆಗುತ್ತಾರೆ ಎನ್ನುವ ಮಾತಿಗೆ ಟಾಂಗ್ ಕೊಟ್ಟ ಡಿಸಿಎಂ, ನನ್ನ ಮೇಲೆ ಕಣ್ಣಾಕಿದ್ರೂ ಅದೇ ಪ್ರಾಬ್ಲಂ ಆಗೋದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜಕೀಯ ಬಂದ ಮೇಲೆ ಡಿಕೆಶಿ ಆಸ್ತಿ ಹೆಚ್ಚಳ ವಿಚಾರಕ್ಕೆ ಮಾತನಾಡಿದ ಅವರು, ‘ಬಡವರು ನಾವು, ಹೊಲ ಉಳ್ಕೊಂಡು ಇದ್ದೆವು. ಸಣ್ಣ ಪಣ್ಣ ಐವತ್ತು ನೂರು ಎಕರೆ ಜಮೀನಿತ್ತು. ನಮ್ಮಪ್ಪ ಬಡವ. ಆದರೆ, ಒಂದು ತಿಳಿದುಕೊಳ್ಳಿ. ಎನ್‌ಪಿಎಸ್ ಸ್ಕೂಲಲ್ಲಿ ಓದಿದವನು ನಾನು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ನನ್ನ ಇತಿಹಾಸ ಅಲ್ಲಿಂದ ಶುರುವಾಗಿದೆ’ ಎಂದು ಹೇಳಿದ್ದಾರೆ.
ಮೊದಲಿನಿಂದಲೂ ದೊಡ್ಡ ಸಂಚು ನಡೆಸಿಕೊಂಡು ಬಂದಿದ್ದಾರೆ. ಹಿಂದೆನೂ ಹೇಳಿದ್ದಾರೆ, ಹತ್ತು ತಿಂಗಳಲ್ಲಿ ಸರ್ಕಾರ ತೆಗೀತೀವಿ, ಮಿಲ್ಟ್ರಿ ಬಂದು ಜೈಲಿಗೆ ತಗೊಂಡು ಹೋಗ್ತಿವಿ. ನನ್ನ ತಮ್ಮನ, ನನ್ನ ತಂಗೀನಾ, ನನ್ನ ಹೆಂಡ್ತೀನಾ, ಎಲ್ಲರ ಮೇಲೆ ಕೇಸ್ ಹಾಕಿಸಿರುವ ದಾಖಲೆ ನನ್ನ ಬಳಿ ಇದೆ. ನನ್ನ ಮೇಲೂ ಕೇಸ್ ಹಾಕಿಸಿದ್ದು ದಾಖಲೆ ಇದೆ. ಅವೆಲ್ಲಾ ಮರೆತು ಬಿಟ್ಟು, ನನ್ನ ಪಕ್ಷ ಹೇಳಿತ್ತು ಅಂತಾ ಬೆಂಬಲವಾಗಿ ನಿಂತಿದ್ದೆ. ಮಾತಾಡ್ತಾ ಇದ್ದಾರೆ ಅಂತ ನಾನೂ ತಾಳ್ಮೆಯಿಂದ ಇದ್ದೆ. ಆದರೆ, ಎಲ್ಲದಕ್ಕೂ ಒಂದು ಲಿಮಿಟ್ ಅಂತಾ ಇರುತ್ತೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಮೇಲೆ ಕಣ್ ಹಾಕಿದ್ರೆ ಸರ್ವನಾಶ ಅನ್ನೋ ಹೆಚ್‌ಡಿಕೆ ಹೇಳಿಕೆಗೆ ನನ್ ಮೇಲೆ ಕಣ್ಣಾಕಿದ್ರೂ ಅದೇ ಪ್ರಾಬ್ಲಂ ಅಲ್ವಾ? ಎಂದು ಟಾಂಗ್ ಕೊಟ್ಟರು. ಸಿದ್ಧಾರ್ಥ್ ಅವರ ಸಾವಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು ಅಯ್ಯೋ.. ಪಾಪ ಮೆಂಟಲ್ ಆಗಿದ್ದಾನೆ ಅಂತ ಕಾಣಿಸುತ್ತೆ. ಕುಮಾರಸ್ವಾಮಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸೋಣ. ನನ್ನ ಎಸ್.ಎಂ ಕೃಷ್ಣ ಸಂಬಂಧ ಏನು ಅಂತ ಅವರಿಗೆ ಏನ್ ಗೊತ್ತಿದೆ. ಹಿತೈಷಿಗಳಿಗೋ, ಪಾರ್ಟಿ ಕಾರ್ಯಕರ್ತರಿಗೋ ಅವರನ್ನು ಮೆಂಟಲ್ ಆಸ್ಪತ್ರೆ ಸೇರಿಸಿ ಅಂತ ಹೇಳಣೋ ಎಂದು ಸಲಹೆ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಅವರು ಮೊದಲಿನಿಂದಲೂ ದೊಡ್ಡ ಸಂಚು ನಡೆಸಿಕೊಂಡು ಬಂದಿದ್ದಾರೆ. ಹಿಂದೆನೂ ಹೇಳಿದ್ದಾರೆ. ಹತ್ತು ತಿಂಗಳಲ್ಲಿ ಸರ್ಕಾರ ತೆಗೀತೀವಿ. ಮಿಲ್ಟ್ರಿ ಬಂದು ಜೈಲಿಗೆ ತಗೊಂಡು ಹೋಗ್ತೀವಿ. ನನ್ನ ತಮ್ಮ, ತಂಗಿ, ಹೆಂಡ್ತಿ ಸೇರಿ ಎಲ್ಲರ ಮೇಲೆ ಕೇಸ್ ಹಾಕಿಸಿದ್ದ ದಾಖಲೆಗಳು ಇದೆ. ಅವೆಲ್ಲವನ್ನು ಮರೆತು ಬಿಟ್ಟು, ನನ್ನ ಪಕ್ಷ ಹೇಳಿದೆ ಅಂತ ಬೆಂಬಲವಾಗಿ ನಿಂತಿದ್ದೆ. ಮಾತಾಡ್ತಾ ಇದ್ದಾರೆ ಅಂತ ನಾನೂ ತಾಳ್ಮೆಯಿಂದ ಇದ್ದೆ. ಈಗ ಎಲ್ಲದಕ್ಕೂ ಒಂದ್ ಲಿಮಿಟೇಷನ್ ಇದೆ ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಡಿಕೆಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಒಟ್ಟಿನಲ್ಲಿ ಕಳೆದ ಹಲವು ದಿನಗಳಿಂದ ಡಿಕೆಶಿ ಹಾಗೂ ಕುಮಾರಸ್ವಾಮಿ ಪರಸ್ಪರ ಕಿತ್ತಾಡುತ್ತಿರುವುದಂತೂ ನಿಜವಾದಂತಿದೆ .


