Thursday, March 12, 2026
Flats for sale
Homeವಾಣಿಜ್ಯಬೆಂಗಳೂರು : ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಕಾರಕ ಅಂಶ : ಶೀಘ್ರದಲ್ಲಿ ನಿಷೇಧ!

ಬೆಂಗಳೂರು : ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಕಾರಕ ಅಂಶ : ಶೀಘ್ರದಲ್ಲಿ ನಿಷೇಧ!

ಬೆಂಗಳೂರು : ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ನೆಚ್ಚಿನ ತಿನಿಸಾಗಿದ್ದ ಬಾಂಬೆ ಮಿಠಾಯಿ(ಕಾಟನ್ ಕ್ಯಾಂಡಿ)ಯನ್ನು ಪುದುಚೇರಿಯಲ್ಲಿ ನಿಷೇಧಿಸಲಾಗಿದೆ. ಅದರಲ್ಲಿ ಆರೋಗ್ಯಕ್ಕೆ ಹಾನಿಕರ­ವಾದ ರೊಡಮೈನ್‌-ಬಿ ಎಂಬ ವಿಷಕಾರಿ ಅಂಶ ಪತ್ತೆಯಾಗಿ­ರುವುದಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ವರದಿ ನೀಡಿದ್ದಾರೆ.ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಅದರ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಕಾರ್ಸಿನೋಜೆನ್ ಆಗಿರುವ ರೋಡಮೈನ್-ಬಿ ಇರುವಿಕೆಯು ಕಾಟನ್ ಕ್ಯಾಂಡಿಯನ್ನು ತಿನ್ನುವವರಿಗೆ ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎಂದು ವರದಿಗಳು ಸೂಚಿಸಿವೆ.

ಆಹಾರ ಸುರಕ್ಷತಾ ಪ್ರಮಾಣ ಪತ್ರ ಎಷ್ಟು ಬೇಗ ಸಿಗುತ್ತದೋ ಅಷ್ಟು ಬೇಗ ವ್ಯಾಪಾರ ಆರಂಭಿಸಬಹುದು. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಪುದುಚೇರಿ ಸರಕಾರ ತಿಳಿಸಲಾಗಿತ್ತು . ಬಣ್ಣದ ಸೇರ್ಪಡೆಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಾರದು ಎಂದು ಜನರು ತಿಳಿದಿರಬೇಕು ಎಂದರು. ರೋಡಮೈನ್ ಬಿ, ಸಾಮಾನ್ಯವಾಗಿ RhB ಎಂದು ಸಂಕ್ಷೇಪಿಸಲಾಗಿದೆ, ಇದು ರಾಸಾಯನಿಕ ಸಂಯುಕ್ತವಾಗಿದ್ದು ಅದು ಬಣ್ಣವಾಗಿ ಕಾರ್ಯನಿರ್ವಹಿಸುತ್ತದೆ.

ರೋಡಮೈನ್-ಬಿ, ಜವಳಿ ಬಣ್ಣವು ಕ್ಯಾನ್ಸರ್ ಕಾರಕ ಎಂದು ತಿಳಿದುಬಂದಿದೆ. ಕಾಟನ್ ಕ್ಯಾಂಡಿಗೆ ಮಾತ್ರವಲ್ಲದೆ ಜೆಲ್ಲಿಗಳು ಮತ್ತು ಮಿಠಾಯಿಗಳಿಗೆ ಕಲರ್‌ಫುಲ್ ಬಣ್ಣಗಳನ್ನು ನೀಡಲು ಇದನ್ನು ಸೇರಿಸಲಾಗುತ್ತದೆ. ಕೆಲವೊಮ್ಮೆ ಮೆಣಸಿನ ಪುಡಿ ಕೆಂಪಗೆ ಕಾಣಲಿ ಎಂದೂ ಕೂಡ ಕೆಂಪು ಬಣ್ಣವನ್ನು ಸೇರಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ”

ವಿಶೇಷವಾಗಿ ವ್ಯಾಪಾರ ಮೇಳಗಳು, ಮದುವೆಗಳು ,ಜಾತ್ರೆ,ಫುಡ್ ಫೆಸ್ಟಿವಲ್ ಹಾಗೂ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ರಸ್ತೆಗಳಲ್ಲಿ, ಉದ್ಯಾನವನಗಳು ಮತ್ತು ಉದ್ಯಾನಗಳ ಹೊರಗೆ ಮಾರಾಟ ಮಾಡಲಾಗುತ್ತದೆ. ಮಕ್ಕಳಲ್ಲಿ ಜನಪ್ರಿಯವಾಗಿ ಬಾಂಬೆ ಮಿಠಾಯಿ ಎಂದು ಕರೆಸಿಕೊಳ್ಳುವ ಕಾಟನ್ ಕ್ಯಾಂಡಿ “ಅತ್ಯಂತ ಹಾನಿಕಾರಕ” ಎಂದು ಗುರುತಿಸಲಾಗಿದೆ. ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ರೋಡಮೈನ್-ಬಿ ಇರುವಿಕೆಯನ್ನು ದೃಢಪಟ್ಟಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕ್ಯಾಟನ್ ಕ್ಯಾಂಡಿ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಪರೀಕ್ಷೆಯ ಫಲಿತಾಂಶಗಳ ನಂತರ ಅದರ ನಿಷೇಧದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಂಟಿ ಆಯುಕ್ತರು ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular