Monday, March 23, 2026
Flats for sale
Homeವಾಣಿಜ್ಯಬೆಂಗಳೂರು : ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ 3 ವರ್ಷದಲ್ಲಿ 13,000 ಉದ್ಯೋಗ ಮಾತ್ರ...

ಬೆಂಗಳೂರು : ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ 3 ವರ್ಷದಲ್ಲಿ 13,000 ಉದ್ಯೋಗ ಮಾತ್ರ ಸೃಷಿ..!

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ 3,56,602 ಉದ್ಯೋಗ ಸೃಜನೆ ಗುರಿಯೊಂದಿಗೆ 1.87 ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ 1,423 ಯೋಜನೆಗಳಿಗೆ ಒಡಂಬಡಿಕೆ ಮಾಡಿಕೊಳ್ಳ ಲಾಗಿದೆ. ಈವರೆಗೆ ಕೇವಲ 20893ಕೋಟಿ ರೂ. ಹೂಡಿಕೆಯಾಗಿದ್ದು, 13,688 ಉದ್ಯೋಗ ಸೃಜನೆಯಾಗಿದೆ. ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ಧನಸಹಾಯ ಮತ್ತು ರಿಯಾಯಿತಿ ನೀಡುವ ಬಗ್ಗೆ ಕೈಗಾರಿಕೆ ನೀತಿ ಘೋಷಿಸಲಾಗಿದೆ. ಇದರ ಮೂಲಕ ಕೈಗಾರಿಕೆ ಸ್ಥಾಪನೆಗೆ ಬೇಕಾಗಿರುವ ಭೂಖರೀದಿ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದೆ. 2 ಎಕರೆವರೆಗಿನ ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ.

ಕಳೆದ 3ವರ್ಷಗಳಲ್ಲಿ 117 ಕಂಪನಿಗಳೊAದಿಗೆ ಒಡಂಬಡಿಕೆ ಮಾಡಿಕೊಂಡು 6,70,560 ಕೋಟಿ ರೂ.ಗಳ ಹೂಡಿಕೆ ನಿರೀಕ್ಷಿಸಲಾಗಿದೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಸ್.ಸುರೇಶ್‌ಕುಮಾರ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ವಿವರವಾಗಿ ನೀಡಿದ ಉತ್ತರದಲ್ಲಿ ಈ ಮಾಹಿತಿ ಹಂಚಿಕೊAಡಿದ್ದಾರೆ. ಈ ಮಧ್ಯೆ ನಾನಾ ಕಾರಣಗಳಿಂದ 3 ವರ್ಷಗಳಲ್ಲಿ ಆಗಿರುವ ಒಡಂಬಡಿಕೆಗೆ ಸಂಬAಧಿಸಿದAತೆ 5 ಯೋಜನೆಗಳನ್ನು ಕೈಬಿಡಲಾಗಿದ್ದು, 1,036 ಕೋಟಿ ರೂ. ಹೂಡಿಕೆ ರದ್ದುಗೊಂಡು 1,475 ಉದ್ಯೋಗ ಸೃಜನೆ ನಷ್ಟವಾಗಲಿದೆ. ಆಯಾ ಕಂಪನಿಗಳು ಹೂಡಿಕೆಯಿಂದ ಹಿಂದೆ ಸರಿದ ಪರಿಣಾಮ ಯೋಜನೆಗಳು ರದ್ದುಗೊಂಡಿವೆ.

ಅನುಷ್ಠಾನದ ಹಂತದಲ್ಲಿ 1.65 ಲಕ್ಷ ಕೋಟಿ ರೂ.: ಕಳೆದ 3 ವರ್ಷಗಳಲ್ಲಿ ಆಗಿರುವ ಕೈಗಾರಿಕೆ ಒಪ್ಪಂದಗಳ ಪೈಕಿ 1,362 ಯೋಜನೆಗಳು ಇನ್ನೂ ಅನುಷ್ಠಾನದ ಹಂತದಲ್ಲಿವೆ. ಅAದರೆ ಈ ಯೋಜನೆಗಳು ಜಾರಿಯಾಗಲು ಸಿದ್ಧತೆ ನಡೆದಿದೆ. ಹೀಗಾಗಿ ರಾಜ್ಯದಲ್ಲಿ 1,65,087 ಕೋಟಿ ರೂ. ಮೌಲ್ಯದ ಹೂಡಿಕೆ ಅನುಷ್ಠಾನದ ಹಂತದಲ್ಲಿದೆ. ಇದರಿಂದ ಸರಿಸುಮಾರು 3,56,602 ಉದ್ಯೋಗ ಸೃಷ್ಟಿಯಾಗಲಿವೆ. ಅತಿಹೆಚ್ಚು ಅಂದರೆ 2023-24ರ ಸಾಲಿನಲ್ಲಿ ಒಪ್ಪಂದ ಆಗಿರುವ 569 ಯೋಜನೆಗಳು ಇನ್ನೂ ಜಾರಿ ಹಂತದಲ್ಲಿದ್ದು, ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಂಡರೆ ಕನಿಷ್ಠ 1,46,664 ಜನರಿಗೆ ಉದ್ಯೋಗ ಸಿಗಲಿದೆ.

ಚಿಕ್ಕಮಗಳೂರಿನಲ್ಲಿ ಹೆಚ್ಚು ಉದ್ಯೋಗ: ಕುತೂಹಲಕರ ಸಂಗತಿ ಎಂದರೆ, ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಅತಿ ಹೆಚ್ಚು ಉದ್ಯೋಗ ಲಭಿಸಿರುವುದು ಚಿಕ್ಕಮಗಳೂರು ಜಿಲ್ಲೆಗೆ ಎಂದರೆ ಯಾರಾದರೂ ನಂಬಲೇಬೇಕು. ಚಿಕ್ಕಮಗಳೂರಿ ಜಿಲ್ಲೆಯಲ್ಲಿ 200 ಕೋಟಿ ರೂ. ಹೂಡಿಕೆಯಿಂದ 1 ಕೈಗಾರಿಕೆ ಘಟಕ ಸ್ಥಾಪನೆಯಾಗಿ 6 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಂಕಿ-ಅAಶಗಳು ತಿಳಿಸಿವೆ. ಚಿಕ್ಕಮಗಳೂರು ನಂತರ ಬೆAಗಳೂರು ನಗರ ಜಿಲ್ಲೆಯಲ್ಲಿ 881 ಕೋಟಿ ರೂ. ಹೂಡಿಕೆಯಿಂದ 3 ಹೊಸ ಘಟಕಗಳಲ್ಲಿ 2,598 ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 15,594 ಕೋಟಿ ರೂ. ಹೂಡಿಕೆಯಿಂದ 4 ಘಟಕಗಳಲ್ಲಿ 1,290 ಜನರಿಗೆ ಉದ್ಯೋಗ ಸಿಕ್ಕಿದೆ. ವಿಜಯಪುರದಲ್ಲಿ 1,085, ರಾಮನಗರದಲ್ಲಿ 1,018, ಬಳ್ಳಾರಿಯಲ್ಲಿ934, ಮೈಸೂರಿನಲ್ಲಿ 273, ರಾಯಚೂರಿನಲ್ಲಿ 200, ಬೆಳಗಾವಿಯಲ್ಲಿ
100, ಚಾಮರಾಜನಗರದಲ್ಲಿ90, ತುಮಕೂರು ಮತ್ತು ಕಲಬುರಗಿಯಲ್ಲಿ ತಲಾ 50 ಜನರಿಗೆ ಉದ್ಯೋಗ ಸೃಜನೆಯಾಗಿದೆ. ಉಳಿದ 17 ಜಿಲ್ಲೆಗಳಲ್ಲಿ ಶೂನ್ಯ ಉದ್ಯೋಗ ಸೃಜನೆ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular