Friday, March 13, 2026
Flats for sale
Homeರಾಜಕೀಯಬೆಂಗಳೂರು : ಕಾಂಗ್ರೆಸ್​​​ ಶಾಸಕರ ಖರೀದಿಗೆ 100 ಕೋಟಿ ಬಿಜೆಪಿ ಆಫರ್ : ಶಾಸಕ ...

ಬೆಂಗಳೂರು : ಕಾಂಗ್ರೆಸ್​​​ ಶಾಸಕರ ಖರೀದಿಗೆ 100 ಕೋಟಿ ಬಿಜೆಪಿ ಆಫರ್ : ಶಾಸಕ ಗಣಿಗ ರವಿಕುಮಾರ್.

ಬೆಂಗಳೂರು : ಕಾಂಗ್ರೆಸ್ MLA ಗಳ ಖರೀದಿಗೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ, ಹಿಂದೆ 50 ಕೋಟಿ ಇದ್ದ ಆಫರ್ ಇದೀಗ 100 ಕೋಟಿಗೆ ಏರಿಕೆಯಾಗಿದೆ. ಎಂಎಲ್ಎ ಗಳ ಖರೀದಿ ಮಾಡಲು ಬಿಜೆಪಿಯವರು 100 ಕೋಟಿಗೆ ಹೋಗಿದ್ದಾರೆ ಎಂದು ಕಾಂಗ್ರೆಸ್ ಶಾಸಕರ ಖರೀದಿ ಬಗ್ಗೆ ಶಾಸಕ ಗಣಿಗ ರವಿಕುಮಾರ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಸರ್ಕಾರ ಬೀಳಿಸುವುದಾಗಿ ಪ್ರಧಾನಿ ಮೋದಿ ಅವರಿಗೆ ಐದು ಜನ ಮಾತು ಕೊಟ್ಟಿದ್ದಾರೆ. ಕಾಂಗ್ರೆಸ್​​ ಶಾಸಕರಿಗೆ ಬಿಜೆಪಿಯ ಬ್ರೋಕರ್​ಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ನಿತ್ಯ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ, ನಮ್ಮ ಶಾಸಕರು ಬಲಿಯಾಗಲ್ಲ. ನಾವು ಸಾಕ್ಷಿ ಕಲೆ ಹಾಕುತ್ತಿದ್ದೇವೆ, ಇಡಿ ಅಧಿಕಾರಿಗಳಿಗೆ ಕೊಡುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ. ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿಯ ಯಾರಿಗೂ ತಾಕತ್ತಿಲ್ಲ ಎಂದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಮಾತನಾಡುವುದಿಲ್ಲ. ಸಿಎಂ ಸ್ಟ್ರಾಂಗ್ ಇದ್ದಾರೆ, ಅವರ ಪರ ನಾವೆಲ್ಲರೂ ಇದ್ದೇವೆ. ರಾಜ್ಯಪಾಲರ ನಡೆ ವಿರುದ್ಧ 136 ಶಾಸಕರು ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳನ್ನು ಸಿಲುಕಿಸಲು ಆಟವಾಡುತ್ತಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ಬಿಜೆಪಿಯಲ್ಲೇ ಒಡಕು ಉಂಟಾಗಿದೆ. ಬಿಎಸ್​ವೈ, ವಿಜಯೇಂದ್ರ, ಯತ್ನಾಳ್, ಹೆಚ್​ಡಿಕೆ ನಡುವೆ ಕಿತ್ತಾಟವಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಗಟ್ಟಿ ಇದೆ ಅಲ್ಲಾಡಿಸಲು ಹಾಗಲ್ಲ. ಸಂತೋಷ್, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಹಲಾದ್ ಜೋಶಿಯಿಂದ ಕಾಂಗ್ರೆಸ್ ಅಸ್ಥಿರಕ್ಕೆ ತಂತ್ರ. ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿ ಇರುವ ಸರ್ಕಾರ, ಈ ಸರ್ಕಾರ ಬಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ಬೀಳಿಸಲು ಮೋದಿಗೆ ಈ ಐದು ಜನ ಮಾತು ಕೊಟ್ಟಿದ್ದಾರೆ. ನಮ್ಮ ಶಾಸಕರಿಗೆ ಬಿಜೆಪಿಯ ಬ್ರೋಕರ್ ಗಳಿಂದ ಡಿಮ್ಯಾಂಡ್. ಆದರೆ ನಮ್ಮ ಶಾಸಕರು ಬಲಿಯಾಗಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ ಆದ್ದರಿಂದಲೇ ಅಸ್ಥಿರ ಗೊಳಿಸಲು ಸಂಚು ಮಾಡ್ತಿದ್ದಾರೆ.

ಪ್ರತಿನಿತ್ಯ ಶಾಸಕರನ್ನ ಸಂಪರ್ಕ ಮಾಡ್ತಿದ್ದಾರೆ. ನೀವು ಬರ್ತಿರಾ? ನೀವು ಬರ್ತಿರಾ ಅಂತ ತಿರುಗುತ್ತಿದ್ದಾರೆ. ನಮ್ಮ ಶಾಸಕರು ಯಾರು ಹೋಗಲ್ಲ. ಕಾಂಗ್ರೆಸ್ ಸರ್ಕಾರ ಬಿಳಿಸೋದಕ್ಕೆ ಯಾವ ಬಿಜೆಪಿಯವರಿಗು ತಾಕತ್ ಇಲ್ಲ. 50 ರಿಂದ 100ಕೋಟಿಗೆ ಬಿಜೆಪಿ ಹೋಗಿದ್ದಾರೆ. ಸಾಕ್ಷಿ ಕಲೆ ಹಾಕುತ್ತಿದ್ದೇವೆ ಶೀಘ್ರದಲ್ಲೇ ಬಿಡ್ತೇವೆ. EDಗೆ ಕೊಡುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular