ಬೆಂಗಳೂರು : ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ತಾರಕಕ್ಕೇರಿದ್ದು, ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿದೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೆಂದ್ರಗಳಲ್ಲಿ ಬಿಜೆಪಿ ನಾಯಕರುಗಳು ಹಾಗೂ ಕಾರ್ಯಕರ್ತರುಗಳು ಧರಣಿ ನಡೆಸಿ ವಕ್ಫ್ ನಿಂದ ರೈತರ ಜಮೀನು ವಶಪಡಿಸಿಕೊಳ್ಳುವುದನ್ನು ಖಂಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು, ಶಾಸಕರುಗಳು
ವಕ್ಫ್ ವಿರುದ್ಧ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ವಕ್ಫ್ ಹೆಸರಲ್ಲಿ ರೈತರ ಜಮೀನನ್ನು ವಶಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಪ್ರತಿಭಟನೆ ಬೆಂಗಳೂರಿನಲ್ಲೂ ವಕ್ಫ್ ಆಸ್ತಿ ಕಬಳಿಕೆಯ ವಿರುದ್ಧ ಬಿಜೆಪಿ ನಾಯಕರುಗಳು ಹಾಗೂಬ ಕಾರ್ಯಕರ್ತರುಗಳು ಪ್ರತಿಭಟನೆ ನಡೆಸಿದ್ದು, ಕೆಆರ್‌ಪುರದ ತಾಲ್ಲೂಕು ಕಚೇರಿ ಎದುರು ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ನಿಲುವನ್ನು ಖಂಡಿಸಿದರು.
ಅಶೋಕ್ ವಾಗ್ದಾಳಿ ರೈತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ತೊಘಲಕ್ ದರ್ಬಾರ್ ನಡೆಸುತ್ತಿದೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಕೆಆರ್ ಪುರದಲ್ಲಿ ಬಿಜೆಪಿಯ ಪಕ್ಷ ಹಮ್ಮಿಕೊಂಡಿದ್ದ ವಕ್ಫ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಸರ್ಕಾರ ಲ್ಯಾಂಡ್ ಜಿಹಾದ್ ಮಾಡುತ್ತಿದೆ, ಅನ್ನದಾತರ ಮೇಲೆ ಸರ್ಕಾರ ಕಲ್ಲು ಎಳೆದಿದೆ, ಜಮೀರ್ ರೈತರ ಜಮೀನು ಕಬಳಿಕೆಗೆ ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ರೈತರ ಜಮೀನು ಕಬಳಿಸಲು ಹುನ್ನಾರ ನಡೆದಿದೆ, 1974 ರಲ್ಲಿ ಆವತ್ತಿನ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಷನ್ಹೊ ರಡಿಸಿದೆ, ಇದು ರದ್ಧಾಗಬೇಕು,ಈ ನೋಟಿಫಿಕೇಷನ್ ಮುಸಲ್ಮಾನರ ಓಲೈಕೆಗಾಗಿ ಮಾಡಲಾಗಿದೆ ಎಂದು ಕಿಡಿಕಾರಿದರು.
ಎಲ್ಲೆಲ್ಲೂ ರೈತರ ಜಮೀನಿಗೆ ನೊಟೀಸ್ ಕೊಟ್ಟಿದ್ದಾರೆ,ರೈತರ ಭೂಮಿ, ಶಾಲೆ, ದೇವಸ್ಥಾನ, ಮಠಗಳನ್ನು ವಕ್ಫ್ ಜಾಗ ಅಂತ ಮಾಡಿದ್ದಾರೆ,ಇದು ವಕ್ಫ್ ಬೋರ್ಡ್ ಆಗಿ ಉಳಿದಿಲ್ಲ, ಸಾಬರ ಬೋರ್ಡ್,ಮಹಮದ್ಘೋ ರಿ, ಆದಿಲ್ ಷಾಹಿ ಬೋರ್ಡ್ಆ ಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬೈರತಿ ಬಸವರಾಜ ಅವರು ರೈತರ ವಿರೋಧಿ ಧೋರಣೆ ಅನುಸರಿಸುತ್ತಿರುವ ಸಚಿವ ಜಮೀರ್ ಅಹಮದ್ ಅವರು ಈ ಕೂಡಲೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಸಪ್ತಗಿರಿಗೌಡ,ಮAಡಳ ಅಧ್ಯಕ್ಷ ಮುನೇಗೌಡ, ಮಾಜಿ ಪಾಲಿಕೆ ಸದಸ್ಯರಾದ ಜಯಪ್ರಕಾಶ್,ಶ್ರೀಕಾಂತ್, ಅಂತೋಣಿಸ್ವಾಮಿ,ಸಿದ್ದಲಿಂಗಯ್ಯ ಮುಖAಡರಾದ ರಾಜೇಂದ್ರ, ಮಾರ್ಕೆಶ್ ರಮೇಶ್,ಗಣೇಶ್ ರೆಡ್ಡಿ,ರಾಮಲಕ್ಷ್ಮಣ್ ಇದ್ದರು.