ಬೆಂಗಳೂರು : ಭಾರತ ತಂಡದ ಬ್ಯಾಟರ್ ಕರುಣ್ ನಾಯರ್ ಎರಡು ಋತುಗಳ ನಂತರ ಕರ್ನಾಟಕ ತಂಡಕ್ಕೆ ಮರಳಿದ್ದಾರೆ.ಪ್ರಸಕ್ತ ರಣಜಿ ಕ್ರಿಕೆಟ್ ತಂಡಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ 15 ರಿಂದ ಕರ್ನಾಟಕ ತಂಡ ರಣಜಿ ಅಭಿಯಾನ ಆರಂಭಿಸಲಿದ್ದು ತನ್ನ ಮೊದಲ ಪಂದ್ಯದಲ್ಲಿ ರಾಜ್‌ಕೋಟ್‌ನಲ್ಲಿ ಸೌರಾಷ್ಟç ತಂಡವನ್ನು ಎದುರಿಸಲಿದೆ. ಕರುಣ್ ನಾಯರ್ ತವರಿನ ತಂಡಕ್ಕೆ ಮತ್ತೆ ಮರಳಿದ್ದಾರೆ. ಕಳೆದ ಋತುವಿನಲ್ಲಿ ವಿದರ್ಭ ತಂಡದ ಪರ ಅಡಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಕರ್ನಾಟಕ ತಂಡದ ಸಂಭಾವ್ಯರ ಪಟ್ಟಿಯಲ್ಲೂ ಕರುಣ್ ಸ್ಥಾನ ಪಡೆದಿದ್ದರು. ಈ ಬಾರಿಯೂ ಕರ್ನಾಟಕ ತಂಡವನ್ನು ಮಯಾಂಕ್ ಅಗರ್‌ವಾಲ್ ಮುನ್ನಡೆಸಲಿದ್ದಾರೆ. ತಂಡದಲ್ಲಿ ಕೃತಿಕಾ ಕೃಷ್ಣ, ಶಿಖಾರ್ ಶೆಟ್ಟಿ ಮತ್ತು ಮೊಹ್ಸಿನ್ ಖಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕರ್ನಾಟಕ ರಣಜಿ ತಂಡ:
ಮಯಾAಕ್ ಅಗರ್‌ವಾಲ್(ನಾಯಕ), ಕರುಣ್ ನಾಯರ್, ಆರ್.ಸ್ಮರಣ್,ಕೆ. ಎಲ್.ಶ್ರೀಜಿತ್(ವಿಕೆಟ್ ಕೀಪರ್),ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್ ಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಶ್ ಶೆಟ್ಟಿ, ಎಂ.ವೆAಕಟೇಶ್,ನಿಕಿನ್ ಜೋಸ್,ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಕೆ.ವಿ.ಅನೀಶ್, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ.
ರಣಜಿ ಆಡಲಿರುವ ಪಂತ್
ಭಾರತ ಕ್ರಿಕೆಟ್ ತಂಡದ ರಿಷಭ್ ಪಂತ್ ರಣಜಿ ಟೂರ್ನಿ ಆಡಲಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಪಣತೊಟ್ಟಿರುವ ರಿಷಭ್ ಪಂತ್ ಕಳೆದ ಜುಲೈನಲ್ಲಿ ಇಂಗ್ಲೆAಡ್ ವಿರುದ್ಧದ ಸರಣಿ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದರು. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಲು ಇಚ್ಛಿಸಿರುವ ಪಂತ್ ರಣಜಿ ಟೂರ್ನಿಯಲ್ಲಿ ಆಡಲಿದ್ದಾರೆ
ಅನ್ವಯ್ ದ್ರಾವಿಡ್ ನಾಯಕ
ಭಾರತ ಕ್ರಿಕೆಟ್‌ನ ದಂತಕತೆ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಮುಂಬರುವ ವಿನೋದ್ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಕರ್ನಾಟಕ ತಂಡ ಅಕ್ಟೋಬರ್ 9 ರಿಂದ ಅಭಿಯಾನ ಆರಂಭಿಸಲಿದೆ.
ಕರ್ನಾಟಕ ತಂಡ: ಅನ್ವಯ್ ದ್ರಾವಿಡ್ (ನಾಯಕ, ವಿಕೆಟ್ ಕೀಪರ್), ನಿತೀಶ್ ಆರ್ಯ, ಆದರ್ಶ್ ಡಿ ಅರಸ್, ಎಸ್. ಮಣಿಕಾಂತ್ (ಉಪನಾಯಕ), ಪ್ರಣೀತ್ ಶೆಟ್ಟಿ, ವಾಸವ್ ವೆಂಕಟೇಶ್, ಅಕ್ಷತ್ ಪ್ರಭಾಕರ್, ಸಿ.ವೈಭವ್, ಕುಲ್ದೀಪ್ ಸಿಂಗ್, ಪುರೋಹಿತ್, ರತನ್ ಬಿ.ಆರ್, ವೈಭವ್ ಶರ್ಮಾ, ತೇಜಸ್, ಅಥರ್ವ್ ಮಾಲವೀಯಾ, ಸನ್ನಿ ಕಂಚಿ, ರೆಹಾನ್.